HEALTH TIPS

ಎಂಡೋಸಲ್ಫಾನ್ ಆರ್ಥಿಕ ನೆರವು ವಿತರಣೆ; ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವುದು ಮೌನ ಕ್ರಾಂತಿ

                ಕಾಸರಗೋಡು: ಜಿಲ್ಲೆಯ ಎಲ್ಲ ಎಂಡೋಸಲ್ಫಾನ್ ಸಂತ್ರಸ್ತರಿಗೆ ಐದು ಲಕ್ಷ ರೂ.ನಷ್ಟಪರಿಹಾರ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರಕಾರದ ಆದೇಶದಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಪ್ರಧಾನ ಕಛೇರಿಯಲ್ಲಿ ಮೌನ ಕ್ರಾಂತಿ ನಡೆಸಲಾಯಿತು.

                 ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಸ್ವೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು, ಎಂಡೋಸಲ್ಫಾನ್ ಸ್ಪೆಷಲ್ ಸೆಲ್ ಮಾತ್ರವಲ್ಲದೆ ಕಂದಾಯ ಇಲಾಖೆಯ ಸಂಪೂರ್ಣ ಸಿಬ್ಬಂದಿಗಳು ಒಗ್ಗೂಡಿ ನಿಂತಾಗ ನಿಗದಿತ ಅವಧಿಗಿಂತ  ನಷ್ಟ ಪರಿಹಾರ ವಿತರಣೆಯನ್ನು ನಿರ್ಧರಿಸಿರುವುದಕ್ಕಿಂತಲೂ ಮೂರು ತಿಂಗಳು ಮುಂಚಿತವಾಗಿ ವಿತರಣೆಯನ್ನು  ಪೂರ್ಣಗೊಳಿಸಲಾಯಿತು.

                      ಮೇ ನಿಂದ ಜುಲೈ 11 ರವರೆಗೆ 5056 ವ್ಯಕ್ತಿಗಳಿಗೆ 199.68,50,000 ಕೋಟಿ ಧನಸಹಾಯ ವಿತರಣೆ: 

                 ಎಂಡೋಸಲ್ಫಾನ್ ಸಂತ್ರಸ್ತರಿಗಿರುವ ಆರ್ಥಿಕ ನೆರವಿನ ಮೊತ್ತ ಅರ್ಜಿ ಸಲ್ಲಿಸಿದ ಎಲ್ಲರಿಗೂ ವಿತರಿಸಲಾಗಿದೆ. ಮೇ ನಿಂದ ಜುಲೈ ಹನ್ನೊಂದರವರೆಗೆ 5056 ಜನರಿಗೆ 199 ಕೋಟಿ 68,50,000 (ನೂರತೊಂಭತ್ತೊಂಭತ್ತು ಕೋಟಿ ಅರುವತ್ತೆಂಟುಲಕ್ಷದ ಐವತ್ತು ಸಾವಿರ ರೂಪಾಯಿ)ರೂಪಾಯಿಯ ಆರ್ಥಿಕ ನೆರವು ವಿತರಿಸಲಾಗಿರುವುದು. 2022 ಮಾರ್ಚ್ 15ರಂದು  200 ಕೋಟಿ ರೂಪಾಯಿಗಳ ಆರ್ಥಿಕ ನೆರವು ಮಂಜೂರು ಮಾಡಿರುವುದಾಗಿ ಸರ್ಕಾರ ಆದೇಶ ಹೊರಡಿಸಿತು. ಮೇ ತಿಂಗಳ ಮಧ್ಯದಲ್ಲಿ ಪ್ರಕ್ರಿಯೆ ಪ್ರಾರಂಭವಾಯಿತು.ನಂತರ ಮೊದಲ ಹಂತದಲ್ಲಿ ಪಟ್ಟಿಯಲ್ಲಿ ಸೇರ್ಪಡೆಗೊಂಡ ಎಂಟು ಮಂದಿಗೆ 5 ಲಕ್ಷ ರೂ.ಗಳ ನಷ್ಟಪರಿಹಾರ ನೀಡಲಾಯಿತು. ಕೆ.ಜಿ.ಬೈಜು, ಅಶೋಕ್ ಕುಮಾರ್, ಮಧುಸೂದನನ್, ಪಿ.ಜೆ.ಥೋಮಸ್, ಶಾಂತ, ಶಾಂತಾ ಕೃಷ್ಣನ್, ಸಜಿ ಮತ್ತು ಎಂ.ವಿ.ರವೀಂದ್ರನ್ ಎಂಬವರಿಗೆ ಆರ್ಥಿಕ ನೆರವು ನೀಡಲಾಗಿದೆ. ಮೇ 20ರಂದು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಪಿ.ಆರ್ ಚೇಂಬರ್‍ನಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು.

            ಕೋವಿಡ್ ರೋಗಿಗಳು ಸಾವನ್ನಪ್ಪಿದವರ ಅವಲಂಬಿತರಿಗೆ ನಷ್ಟಪರಿಹಾರ ನೀಡಲು ಪ್ರಾರಂಭಿಸಿದ ಮಾರ್ಪಡಿಸಿದ ಮಾದರಿಯನ್ನು ಬದಲಾಯಿಸಿ  ನಷ್ಟಪರಿಹಾರ ವಿತರಣೆಗೆ ಅನುಕೂಲವಾಗುವಂತೆ ಬಳಸಲಾಗುವುದು ಮತ್ತು ಜೂನ್ ಎರಡನೇ ವಾರದಿಂದ ವಿತರಣೆಯನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಜೂನ್ ತಿಂಗಳಿನಲ್ಲಿಯೇ ಆನ್‍ಲೈನ್ ವ್ಯವಸ್ಥೆ ಜಾರಿಗೆ ಬಂದಿದ್ದು, ಅರ್ಹರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡದೇ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ಅಲ್ಲಿಗೆ ಹೋಗಿಯೋ ಅಥವಾ ಹತ್ತಿರದ ಅಕ್ಷಯ ಕೇಂದ್ರದಲ್ಲೋ ಅಥವಾ ವಿಲ್ಲೇಜ್ ಆಫೀಸ್ ಮುಖಾಂತರವೋ ಈ ಪೆÇೀರ್ಟಲ್ನಲ್ಲಿ  ಅರ್ಜಿ ಸಲ್ಲಿಸಿದ ಎಲ್ಲರಿಗೂ ಈಗಾಗಲೇ ಹಣ  ಬ್ಯಾಂಕ್ ಖಾತೆಗಳಲ್ಲಿ ಬಂದು ತಲುಪಿದೆ. ಅಕ್ಟೋಬರ್ ತಿಂಗಳೊಳಗೆ ಆರ್ಥಿಕ ನೆರವು ವಿತರಣೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರು.

               ಆದರೆ ಜುಲೈ ಎರಡನೇ ವಾರದಲ್ಲೇ ಅರ್ಜಿ ಸಲ್ಲಿಸಿದ ಸಂತ್ರಸ್ತರೆಲ್ಲರಿಗೂ ಆರ್ಥಿಕ ನೆರವು ನೀಡಲು ಜಿಲ್ಲಾಡಳಿತಕ್ಕೆ ಸಾಧ್ಯವಾಯಿತು.ಸಹಾಯಕ್ಕಾಗಿ ಅರ್ಹರಾದವರನ್ನು ಕಂಡುಹಿಡಿಯುವ ತಪಾಸಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗಿದೆ.ಭಾನುವಾರ ಕೂಡ ಕೆಲಸ ಮಾಡಿಯೂ, ಕಲೆಕ್ಟರೇಟ್ ಮತ್ತು  ವಿಲ್ಲೇಜ್ ಆಫೀಸ್ ನ ಸಂಪೂರ್ಣ ಸಿಬ್ಬಂದಿಗಳು ಎಂಡೋಸಲ್ಫಾನ್ ವಿತರಣಾ ಚಟುವಟಿಕೆಗಳಲ್ಲಿ ಭಾಗವಾಗಿರುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಆರ್ಥಿಕ ಸಹಾಯವನ್ನು ವಿತರಿಸಲು ಸಾಧ್ಯವಾಗಿರುವುದು.ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚಟುವಟಿಕೆಗಳನ್ನು ಸಮನ್ವಯಗೊಳಿಸಿದರು. ಎಂಡೋಸಲ್ಫಾನ್ ಸ್ಪೆಷಲ್ ಸೆಲ್ ಸಭೆಯಲ್ಲಿ ಸ್ಥಳೀಯ ಸ್ವಯಂಭರಣ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಅವರು ನಷ್ಟಪರಿಹಾರ ವಿತರಣೆಯನ್ನು ಕೂಡಲೇ ಪೂರ್ಣಗೊಳಿಸುವಂತೆ ಸೂಚಿಸಿದರು.ಎಂಡೋಸಲ್ಫಾನ್ ಪೀಡಿತರ ಪಟ್ಟಿಯಲ್ಲಿ ಇನ್ನೂ ಅರ್ಜಿ ಸಲ್ಲಿಸಿದ ಪೀಡಿತರ ಪಟ್ಟಿಯಲ್ಲಿ ಸೇರಿದ ಒ.ಪಿ. ಸಂಖ್ಯೆ ಲಭ್ಯವಿರುವವರ ಪಟ್ಟಿಯನ್ನು ಕನ್ನಡದಲ್ಲಿ , ಮಲಯಾಳಂನಲ್ಲಿ ಮತ್ತು ಪ್ರಮುಖ ಮಾಧ್ಯಮಗಳಲ್ಲಿ ಸಾರ್ವಜನಿಕ ಪ್ರಕಟಣೆಯಾಗಿ ಪ್ರಕಟಿಸಲಾಗಿದೆ. ಸಂತ್ರಸ್ತ ವ್ಯಕ್ತಿಗಳು ಆದಷ್ಟು ಬೇಗ ಅಗತ್ಯ ದಾಖಲೆಗಳೊಂದಿಗೆ ಅಕ್ಷಯ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬೇಕು.ಪಟ್ಟಿಯಲ್ಲಿ ಸೇರ್ಪಡೆಗೊಂಡವರು ಮರಣ ಹೊಂದಿದ್ದಲ್ಲಿ ಅವರ ವಾರಸುದಾರರು ಬೇಕಾದ ದಾಖಲೆಗಳೊಂದಿಗೆ ಅಕ್ಷಯ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬೇಕೆಂದು  ಹೆಚ್ಚಿನ ಮಾಹಿತಿಗಳನ್ನು  ಸಂಬಂಧಿಸಿದ ವಿಲ್ಲೇಜ್ ಆಫೀಸ್ ಗಳಿಂದ ತಿಳಿಯಬಹುದೆಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಹೇಳಿದರು.ನಾಲ್ಕು ತಾಲೂಕುಗಳ ತಹಶೀಲ್ದಾರರು ಹಾಗೂ ಕಂದಾಯ ನೌಕರರ ಸಾಮೂಹಿಕ ಯಜ್ಞಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂದು ಎಂಡೋಸಲ್ಫಾನ್ ಡೆಪ್ಯೂಟಿ ಕಲೆಕ್ಟರ್ ಎಸ್. ಶಶಿಧರನ್ ಪಿಳ್ಳ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries