HEALTH TIPS

ಮನದಲ್ಲಿ ಅಳಿಯದೇ ಉಳಿಯುವ ಎಡನೀರು: ಇಂದಿನಿಂದ ಶ್ರೀಗಳ ಎರಡನೇ ಚಾತುರ್ಮಾಸ್ಯ ವ್ರತಾನುಷ್ಠಾನ ಆರಂಭ: ಇನ್ನು ನಿತ್ಯ ದಾಸೋಹದೊಡನೆ ವೈವಿಧ್ಯಮಯ ಕಾರ್ಯಕ್ರಮಗಳು

                                          

ಶೃತಿ ಸ್ಮೃತಿ ಪುರಾಣಾನಾಮಾಲಯಮ್ ಕರುಣಾಲಯಮ್ | ನಮಾಮಿ ಭಗವತ್ಪಾದ ಶಂಕರಮ್ ಲೋಕ ಶಂಕರಮ್ ||

ಶ್ರುತಿ ಸ್ಮ ತಿ ಪುರಾಣಗಳ ಆಶ್ರಯರಾಗಿರುವ, ಲೋಕಕ್ಕೆ ಕಲ್ಯಾಣ ಉಂಟುಮಾಡುವ ಕರುಣೆಯಿಂದ ತುಂಬಿದ ಶ್ರೀ ಶಂಕರ ಭಗವತ್ಪಾದರನ್ನು ಭಕ್ತಿ ಪೂರ್ವಕ ನಮಿಸುತ್ತೇನೆ

ಸದಾಶಿವ ಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಮ್ |

ಅಸ್ಮಾದಾಚಾರ್ಯ ಪಯರ್ಂತಾಂ ವಂದೇ ಗುರು ಪರಂಪರಾಮ್ ||

ಶ್ರೀಸದಾಶಿವನಿಂದ ಶಂಕರಾಚಾರ್ಯರ ತನಕ, ಶಂಕರಾಚಾರ್ಯರಿಂದ ಪ್ರಸ್ತುತ ತನಕದ, ಪರಂಪರೆಯ ಎಲ್ಲಾ ಪೀಠಾಧಿಪತಿಗಳ ಚರಣ ಕಮಲಗಳಿಗೆ ಮನಸಾರೆ ವಂದಿಸುತ್ತೇನೆ

ಹಸಿರಿನಿಂದ ನಳ ನಳಿಸುವ ,ಸಾಂಸೃತಿಕ ಧಾರ್ಮಿಕ ಮನಗಳನ್ನು ಸೂಜಿಕಲ್ಲಿನ0ತೆ ಸೆಳೆಯುವ ಕೇರಳ ಕರ್ನಾಟಕದ ಸಾಂಸೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕೊ0ಡಿಯಾಗಿರುವ ಸುಂದರ ಸ್ಥಳ  ಎಡನೀರು. ಎಡನೀರು ಭಾರತವಷ್ಟೇ ಅಲ್ಲ ವಿಶ್ವದಲ್ಲೇ ಗುರುತಿಸಲ್ಪಟ್ಟ ಪ್ರದೇಶವೆಂದರೆ ತಪ್ಪಾಗಲಾರದು.ದೇಶದ ಸ0ವಿಧಾನಿಕ ವ್ಯವಸ್ಥೆಯೊಂದು ಅಲುಗಾಡದಂತೆ ಗಟ್ಟಿಯಾಗಿಸುವಲ್ಲಿ ಧರ್ಮ ಯುದ್ಧವೊಂದನ್ನು ಸಾರಿ ಅದರ ಬುನಾದಿಯನ್ನು ಸುಭದ್ರವಾಗಿಸಿದವರು ಎಡನೀರು ಮಠದ ಬ್ರಹ್ಮೈಕ್ಯರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು.

ಎಡನೀರು:

ಕಲ್ಲಡ್ಕ- ವಿಟ್ಲ- ಬದಿಯಡ್ಕ-ಚೆರ್ಕಳ- ಕಾಸರ್ಗೋಡು ರಾಜ್ಯ ಹೆದ್ದಾರಿಯಲ್ಲಿ ಬದಿಯಡ್ಕ ಮತ್ತು ಚೆರ್ಕಳದ ಮಧ್ಯೆ ಬರುವ ಅತ್ಯಂತ ಗ್ರಾಮೀಣ ಸೊಗಡಿನ  ಕೃಷಿಯಾಧಾರಿತ ಜನಜೀವನದ , ಮಧುವಾಹಿನೀ ನದಿಯ ಸುಂದರ ಪರಿಸರದಲ್ಲಿ ಎಡನೀರು ಮಠವಿದೆ.ರಸ್ತೆ ಮಾರ್ಗವಾಗಿ ಕಾಸರಗೋಡಿನಿಂದ 10 ಕಿ.ಮೀ ,ಚೆರ್ಕಳದಿ0ದ 4 ಕಿ.ಮೀ. ಕಲ್ಲಡ್ಕದಿಂದ 48 ಕಿ.ಮೀ ದೂರದಲ್ಲಿದೆ. ಮಂಗಳೂರು ಮತ್ತು ಕೇರಳದ ಕಣ್ಣೂರು ಹತ್ತಿರದ ವಿಮಾನ ನಿಲ್ಧಾಣ ..ಮಂಗಳೂರು, ಬಿ.ಸಿ.ರೋಡು ,ಪುತ್ತೂರು,  ಕಾಸರಗೋಡು ಹತ್ತಿರದ ರೈಲ್ವೇ ನಿಲ್ದಾಣಗಳು.

ಹಿನ್ನೆಲೆ.

ಎಡನೀರು ಮಠದ ಗುರುಪರಂಪರೆಗೆ ಶತಮಾನಗಳ ಹಿನ್ನೆಲೆ ಇದೆ ಎಂಬುದಕ್ಕೆ ಅಲ್ಲಿರುವ 12 ಬೃಂದಾವನಸ್ತ ಗುರುಗಳ ಸಮಾಧಿಯೇ ಸಾಕ್ಷಿ.ಎಡನೀರು ಮಠ ಶಂಕರಾಚಾರ್ಯರ ಕಾಲದಲ್ಲೇ ಸ್ಥಾಪಿತವಾದ ಚತುರಾನ್ಮಯ ಪೀಠದ ಒಂದು ಒಂದು ಶಾಖಾಮಠವಾಗಿದ್ದು ತೋಟಕಾಚಾರ್ಯ ಪರಂಪರೆಯ ಮಠವೆಂಬುದಕ್ಕೆ ಆಧಾರಗಳಿವೆ ಎಂಬುದಾಗಿ ಸಂಶೋಧಕ ವೆಂಕಟರಾಜ ಪುಣಿಚಿತ್ತಾಯಯರು ಅಭಿಪ್ರಾಯ ಪಟ್ಟಿದ್ದಾರೆ.


ಶಂಕರಾಚಾರ್ಯ ಪರಂಪರೆಯ ತ್ರಿಶೂರಿನಲ್ಲಿರುವ 4 ಶಾಖಾಮಠಗಳಲ್ಲಿ ತೋಟಕಾಚಾರ್ಯ ಪರಂಪರೆಯ ಗುರುಗಳೊಬ್ಬರು ತ್ರಿಶೂರಿನಿಂದ ತ್ರಿಚ್ಚಂಬಲಕ್ಕೆ ಬಂದು ನೆಲೆಸುತ್ತಾರೆ ಬಳಿಕ ಕಾಲಾಂತರದಲ್ಲಿ ಅಲ್ಲಿಂದ ಕುಂಬಳೆ ಸೀಮೆಯ ವಿಷ್ಣುಮಂಗಲ ದೇವಸ್ಥಾನಕ್ಕೆ ಬರುತ್ತಾರೆ.ಇವರ ತೇಜಸ್ಸು, ಜ್ನಾನದ ಬಗ್ಗೆ ತಿಳಿದ ಕುಂಬಳೆಯ ಅರಸರು ಇವರನ್ನು ಎಡನೀರಿನಲ್ಲಿ ನೆಲೆ ನಿಲ್ಲುವಂತೆ ಬಿನ್ನೈಸುತ್ತಾರೆ.ಅವರ ಕೇಳಿಕೆಯನ್ನು ಮನ್ನಿಸಿ ಮಧುವಾಹಿನಿ ನದೀ ತಟದ ಎಡನೀರಿನಲ್ಲಿ ನೆಲೆನಿಂತರು.ಹೀಗೆ ಮುಂದುವರಿದ ಪರಂಪರೆಯಲ್ಲಿ ಶ್ರೀ ಶ್ರೀ ಶ್ರೀ ಈಶ್ವರಾನಂದ ಭಾರತೀ ಯವರಿಂದ ದೀಕ್ಷೆ ಪಡೆದು ಶ್ರೀಶ್ರೀ ಶ್ರೀ ಕೇಶವಾನಂದ ಭಾರತೀ ಯವರು ಮಠವನ್ನು ಮುನ್ನಡೆಸುತ್ತಾರೆ. ಇದು ಕುಂಬಳೆ ಸೀಮೆಯ ಪ್ರಧಾನ  ಅದ್ವೈತ ಮಠವಾಗಿ ಮುಂದುವರಿಯುತ್ತಾ ಇದೆ.ಆದುದರಿಂದಲೇ ಕುಂಬಳೆ ಸೀಮೆಯ ಯಾವುದೇ ಪ್ರಮುಖ ದೇವಸ್ಥಾನಗಳಲ್ಲಿ ಅತ್ಯಂತ ಪ್ರಧಾನ ಮತ್ತು ಮುಖ್ಯ ಕಾರ್ಯಕ್ರಮಗಳಿಗೆ , ಕುಂಬಳೆ ಸೀಮೆಯ ಅರಸರ ಆಶಯ ಮತ್ತು ಪೂರ್ವ ರೂಡಿಯಂತೆ ಎಡನೀರು ಮಠದ ಯತಿಗಳ ಉಪಸ್ಥಿತಿ ಇರಲೇಬೇಕು


ಭಾಗವತಸಂಪ್ರದಾಯ.

ಎಡನೀರು ಮಠ ವಿಶಿಷ್ಠವಾದ ಭಾಗವತ ಸಂಪ್ರದಾಯದ ಮಠ.ಹಾಗಾಗಿಯೇ ಇಲ್ಲಿಯ ಪೀಠಾಧಿಪತಿಗಳು ಭಸ್ಮ ಮತ್ತು ಗೋಪಿ ಎರಡನ್ನೂ ಧಾರಣೆ ಮಾಡುವರು ಇಲ್ಲಿ ಅಕ್ಷತೆಯು0ಟು ಅಂಗಾರಕ ಇಲ್ಲ.

ಗೋಪೂಜೆ.

ಎಡನೀರು ಮಠದ ವಿಶೇಷವೆಂದರೆ ಇಲ್ಲಿ ನಿತ್ಯವೂ ಗೋಪೂಜೆ ನಡೆಯುತ್ತದೆ.ಅನಾದಿಯಿಂದಲೂ ನಡೆದು ಬಂದ ಈ ಸಂಪ್ರದಾಯ ಈಗಲೂ ಮುಂದುವರಿಯುತ್ತಿದೆ ಯಾವುದೇ ಪ್ರಚಾರಾಡಾಂಬರವಿಲ್ಲದೇ ನಡೆಯುವ ಗೋ ಸೇವೆಯ ತದಾತ್ಮ್ಯತೆಯನ್ನು ಇಲ್ಲಿ ಕಾಣಬಹುದು.

ಯತಿಗಳಹೆಸರುಗಳು 

ಶಂಕರ ಪರಂಪರೆಯಲ್ಲಿ ಸಂನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮ ಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು : 1.ಸರಸ್ವತಿ ; 2.ತೀರ್ಥ; 3.ಅರಣ್ಯ, ; 4. ಭಾರತಿ ; 5.ಆಶ್ರಮ ; 6. ಗಿರಿ.; 7.ಪರ್ವತ ; 8. ಸಾಗರ ; 9.ವನ ; 10. ಪುರಿ . 

ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಯತಿಗಳ ಹೆಸರು ಸಚ್ಚಿದಾನಂದ ಭಾರತೀ, ಈಶ್ವರಾನಂದ ಭಾರತೀ, ಬಾಲಕೃಷ್ಣಾನ0ದ ಭಾರತೀ , ಕೇಶವಾನಂದ ಭಾರತೀ. ಈ ನಾಲ್ಕು ಅಭಿನಾಮದಿಂದಲೇ ಇರುತ್ತದೆ.

ಮಠದದೇವರುಗಳು.

ಎಡನೀರು ಮಠದಲ್ಲಿ ಪ್ರಧಾನವಾಗಿ ದಕ್ಷಿಣಾಮೂರ್ತಿ, ಶ್ರೀರಾಮ, ಹನೂಮಂತ, ಶ್ರೀಕೃಷ್ಣ,ಶ್ರೀದೇವಿ, ಭೂದೇವಿ, ಯೋಗನಾರಸಿ0ಹ , ದ್ವಾದಶ ಹಸ್ಥ ಗಣಪತಿ, ಅನ್ನಪೂರ್ಣೇಶ್ವರಿ ದೇವರಿದ್ದಾರೆ.

ಎಡನೀರು ಜಾತ್ರೋತ್ಸವ.

ಎಡನೀರು ಜಾತ್ರೋತ್ಸವ ಎಂದರೆ ಅದೊಂದು ಸೊಭಗು, ಸಂಭ್ರಮ, ಮತ್ತು ವಿಶೇಷ.ಹರಿ ಹರಲ್ಲಿ ಬೇಧವಿಲ್ಲ ಎಂಬ0ತೆ ದಕ್ಷಿಣಾಮೂರ್ತಿ ಮತ್ತು ವಿಷ್ಣುಮೂರ್ತಿ  ಎರಡೂ ದೇವರುಗಳನ್ನು ಜೊತೆಯಾಗಿಯೇ ಮಠದ ಬೀದಿಯಲ್ಲಿ ಉತ್ಸವ ಬಲಿ (ಮೆರವಣಿಗೆ) ಮಾಡುತ್ತಾರೆ. ಇಲ್ಲಿಯ ತೆಪೆÇ್ಪೀತ್ಸವ ತುಂಬಾ ವಿಶೇಷ. ಕುಂಬಳೆ ಸೀಮೆಯ ಜನರಲ್ಲದೆ ಊರ ಪರವೂರ ಜನರು ಜಾತ್ರೋತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸುತ್ತಾರೆ.

ಶಾಖಾಮಠ .

1994 ರಲ್ಲಿ ಭಕ್ತರ ಬೇಡಿಕೆಯಂತೆ ಮಹಾನಗರ ಬೆಂಗಳೂರಿನ ಕೋರಮಂಗಲದಲ್ಲಿ ಶಾಖಾಮಠ ಸ್ಥಾಪಿಸಿದ್ದಾರೆ.

ಶ್ರೀಶ್ರೀಶ್ರೀಕೇಶವಾನಂದ ಭಾರತೀ ಮಹಾಸ್ವಾಮಿಗಳು: 

ಸರ್ವವೇದಾಂತ ಸಿದ್ಧಾಂತ ಗೋಚರಂ ತಂಅಗೋಚರಮ್ |

ಗೋವಿದಂ ಪರಮಾನಂದಂ ಸದ್ಗುರುಂ ಪ್ರಣತೋಸ್ಮ್ಯಹಮ್* ||

ದೇಹಕೆ ಸಿಲುಕದ,ಮನಸಿಗೆ ನಿಲುಕದ,ಅರಿವಿಗೆ ತೋರುವ ಗುರು ಗೋವಿಂದಗೆತಲೆ ಬಾಗಿಸುವೆ.


         ಭಾರತದ ಸ0ವಿಧಾನದ ಮತ್ತು ಕೃಶಿಕರ ಹಿತಾಸಕ್ತಿ ರಕ್ಷಕರು .

 ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಸರಕಾರದ ಕೇಸು ಸ್ವಾತಂತ್ರ್ಯ ಭಾರತದ ಪ್ರಧಾನ ಒಂದು ಸಾಂವಿಧಾನಿಕ ಪ್ರಕರಣವಾಗಿದೆ. ಕಾಸರಗೋಡು ಜಿಲ್ಲೆಯ ಎಡನೀರು ಮಠಾಧೀಶ ಶ್ರಿ?ಶ್ರಿ? ಕೇಶವಾನಂದ ಭಾರತೀ ಸ್ವಾಮೀಜಿಯವರು 1971ರಲ್ಲಿ ಕೇರಳ ಸರಕಾರದ ಭೂ ಸುಧಾರಣಾ ಕಾಯ್ದೆ ವಿರುದ್ಧ ಸುಪ್ರಿ?ಂಕೋರ್ಟ್‍ನಲ್ಲಿ ದಾವೆಹೂಡಿದರು. ಆಸ್ತಿ ಮೂಲಭೂತವಾದುದೋ ಅಥವಾ ಇಲ್ಲವೋ ಎಂಬುದು ಈ ಕೇಸಿನ ಪ್ರಧಾನ ಅಂಶವಾಗಿತ್ತು. ಆ ಕೇಸಿನ ಬಗ್ಗೆ ಸುಪ್ರಿ?ಂಕೋರ್ಟ್ ಸಂವಿಧಾನದ ತಿದ್ದುಪಡಿಗಳು ಸಂವಿಧಾನದ ಮೂಲ ನಿರ್ಮಾಣವನ್ನು ಕಡ್ಡಾಯವಾಗಿ ಗೌರವಿಸಬೇಕೆಂದು ಸಾರಿತು. ನ್ಯಾಯಾಲಯದ ಆದೇಶವು ಸಂವಿಧಾನದ ಕೆಲವು ಮೂಲ ವಿಷಯಗಳನ್ನು ತಿದ್ದುಪಡಿ ಮೂಲಕ ಬಲಾಯಿಸುವುದು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿತ್ತು. ಅಂದರೆ ಭಾರತದ ಸಂಸತ್ತಿನ ಸಾಂವಿಧಾನಿಕ ತಿದ್ದುಪಡಿಯಾಗಬಹುದು, ಆದರೆ ಅದು ಸಂವಿಧಾನದ ಮೂಲಭೂತ ಸ್ವಭಾವವನ್ನು ಬದಲಾಯಿಸಬಾರದು ಎಂಬ ತೀರ್ಪು ಈ ಕೇಸಿನ ವಿಶೇಷತೆಯಾಗಿತ್ತು.ಶ್ರೀಗಳ ಸಾಮಾಜಿಕ ಜವಾಬ್ಧಾರಿ ಎಲ್ಲರಿಗೂ ಮಾದರಿ.ಮತ್ತು ಅವರ ಜನಪರ ಕಾಳಜಿ ಅನುಕರಣೀಯ. ಸ0ವಿಧಾನ ಇರುವ ತನಕವೂ ಎಡನೀರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳವರ  ಹೆಸರು ಚಿರಸ್ಥಾಯಿಯಾಯಿತು.ಇತಿಹಾಸವಾಯಿತು.ಅಮರವಾಯಿತು.

" ಇ0ದು ಮಠ ಮಾನ್ಯಗಳ ಅಸ್ತಿತ್ವ ಉಳಿದಿದ್ದರೆ ಅದು ಎಡನೀರು ಕೇಶವಾನಂದ ಭಾರತೀ ಯವರಿಂದ. ಅವರ ಹೋರಾಟದ ಫಲ ಇಂದು ಮಠ  ಮಾನ್ಯಗಳನ್ನು ಉಳಿಸಿದೆ " ಎಂಬುದಾಗಿ ಕೇಶವಾನಂದ ಭಾರತೀ ಸ್ವಾಮಿಗಳ 50 ನೇ ವಧರ್ಂತಿಯ ಕಾರ್ಯಕ್ರಮದಲ್ಲಿ ಕಂಚಿ ಶ್ರೀ ಶ್ರೀ ಶ್ರೀ  ಜಯೇಂದ್ರ ಸರಸ್ವತಿಯವರು ಉಲ್ಲೇಖಿಸಿದ್ದು ಸರ್ವ ಮಾನ್ಯವಾಗಿದೆ.

ನುಡಿನಮನ

ಶ್ರೀಮದ್ ಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ಎಡನೀರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳವರು(79ವರ್ಷ) 06-09-20 ರ0ದು ಮುಕ್ತಿಯನ್ನು ಹೊಂದಿರುತ್ತಾರೆ.ಶಿಷ್ಯ ಕೋಟಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಮಠದ ಆರಾದ್ಯ ದೇವರಾದ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ 

ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳಂತಹ ಗುರುಗಳನ್ನೂ ಪಡೆದ ಶಿಷ್ಯಕೋಟಿ ಧನ್ಯ.ಶ್ರೀ ಗಳವರ ಅಗಲಿಕೆಯ ನೋವು ಅವರ ಸೇವೆಯನ್ನು ಮಾಡಿದ, ಅವರ ಪ್ರೀತಿ ವಾತ್ಸಲ್ಯದ ಸವಿಯುಂಡ ಶಿಷ್ಯ ಕೋಟಿಗೆ ಕಾಡದೇ ಇರದು.


ನೂತನ ಯತಿವರ್ಯ ಸಚ್ಚಿದಾನಂದ ಭಾರತೀ ನಮಃ  

ಪೂರ್ವಾಶ್ರಮ.

ಜಯರಾಮ ಮಂಜತ್ತಾಯ ಎಲ್ಲರಿಗೂ ಪರಿಚಯದ ಹೆಸರು .ಎಡನೀರಿನ ಹೆಸರನ್ನು ಹತ್ತೂರಿಗೆ ಪಸರಿಸುವಲ್ಲಿ ಜಯರಾಮರು ಅಜೇಯರು. ಎಡನೀರು ಬೃಂದಾವನಸ್ತ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳವರ ಕರ ಕಮಲ ಸಂಜಾತ ಜಯರಾಮ ಮಂಜತ್ತಾಯರು.ಚಿಕ್ಕಂದಿನಿ0ದಲೇ ಮಠದ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು.ಗುರುಗಳ ಯೋಚನೆ ಯೋಜನೆಗೆ ಬೆನ್ನೆಲುಬಾಗಿ ಅದನ್ನು ಕಾರ್ಯಗತಗೊಳಿಸುವಲ್ಲಿ ಜಯರಾಮ ಮಂಜತ್ತಾಯರ ಶ್ರಮ ಅಪಾರವಾದದ್ದು.

ಕಿರಿಯರಲ್ಲಿ ಪ್ರೀತಿ, ಹಿರಿಯರಲ್ಲಿ ಗೌರವ, ಸದಾ ಹಸನ್ಮುಖ, ನಿರ್ಧಾರಗಳಲ್ಲಿ ಗಟ್ಟಿತನ, ಕಾಯಕದಲ್ಲಿ ಶ್ರದ್ಧೆ , ದೇವರಲ್ಲಿ ಭಕ್ತಿ, ಕಾವ್ಯ ಕಲೆಗಳಲ್ಲಿ ಆಸಕ್ತಿ, ನಿತ್ಯಾನುಷ್ಠಾನದಲ್ಲಿ ಶ್ರದ್ಧೆ ಮತ್ತು ನಿಷ್ಠೆ.ಆಡಳಿತಾತ್ಮಕವಾದ ವ್ಯವಹಾರ ಚತುರತೆ ಮತ್ತು ಪಾರದರ್ಶಕತೆ.ಇದು ಜಯರಾಮ ಮಂಜತ್ತಾಯರ ಅನನ್ಯತೆ.

ಹುಟ್ಟುಮತ್ತುವಿಧ್ಯಾಭ್ಯಾಸ.

ಜಯರಾಮ ಮಂಜತ್ತಾಯರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರಿ ಶ್ರೀಮತಿ ಸಾವಿತ್ರಿಮತ್ತು ಶ್ರೀನಾರಾಯಣ ಕೆದಿಲಾಯ ದಂಪತಿಗಳಿಗೆ 08-03-1970 ರಲ್ಲಿ ಜನಿಸಿದರು ಬಾಲ್ಯದಲ್ಲೇ ಜಯರಾಮರನ್ನು ಕೇಶವಾನಂದ ಭಾರತೀ ಯವರ ತಾಯಿ 1982 ರಲ್ಲಿ ದತ್ತು ತೆಗೆದುಕೊಂಡು ಮಂಜತ್ತಾಯ ಕುಟುಂಬಕ್ಕೆ ಸೇರ್ಪಡೆಗೊಳಿಸಿದ್ದರು .ತನ್ನಪ್ರಾಥಮಿಕ ಮತ್ತು ಪ್ರೌಢ ವಿಧ್ಯಾಭ್ಯಾಸವನ್ನು ಎಡನೀರಿನ ಮಠದ ಶಾಲೆಯಲ್ಲೇ ನಡೆಸಿದ ಅವರು ಪದವಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದರು.

ಹಾಗೆಯೇ ಋಗ್ವೇದ ಮತ್ತು ಯಜುರ್ವೇದ ಎರಡೂ ಶಾಖೆಗಳ ಪ್ರಾಥಮಿಕ ಶಿಕ್ಷಣವನ್ನೂ ಪೂರೈಸಿದವರಿದ್ದಾರೆ. ಪ್ರಸ್ತುತ ಮಠಾಧಿಪತಿಯಾಗಿ ತಮ್ಮ ಹಿರಿಯ ಪರಂಪರೆಯನ್ನು ಅಕ್ಷರಶಃ ಅದೇ ರೀತಿಯಲ್ಲಿ ಮುಂದೊಯ್ಯುತ್ತಿದ್ದಾರೆ. 

 ಅತಿಥಿ ದೇವೋಭವ.

ಎಡನೀರು ಮಠಕ್ಕೆ ಹೋದವರೆಲ್ಲ ಗಮನಿಸಬೇಕಾದ್ದು " ಅತಿಥಿ ದೇವೋ ಭವ " ಎಂದೇ ಅತಿಥಿ ಸತ್ಕಾರವನ್ನು ಮಾಡುತ್ತಾರೆ.ಎಡನೀರು ಮಠಕ್ಕೆ ಬಂದು ಹಸಿದು ಹೋದವರಿಲ್ಲ, ದಣಿದು ಬಸವಳಿದವರಿಲ್ಲ.ಇದನ್ನು ನಿಭಾಯಿಸುವಲ್ಲಿ ಜಯರಾಮ ಮಂಜತ್ತಾಯರ ಪರಿಶ್ರಮ ಅಪಾರವಾದದ್ದು.ಎಲ್ಲರನ್ನೂ ತಮ್ಮ ಮನೆಯವರಂತೆ ಭಾವಿಸುವ ಅವರ ಮನಸ್ಸು ಕೋಮಲ.ಅವರ ಅತಿಥಿ ಸತ್ಕಾರದ ಪರಿ ಅನ್ಯಾದೃಶ.

ಧಾರ್ಮಿಕತೆ.

ಎಡನೀರಿಗೆ ಬಂದವರನ್ನು ದೇವರ ಪೂಜಾ ಪ್ರಸಾದ ಸ್ವೀಕರಿಸದೆ ತೆರಳಲು ಜಯರಾಮ ಮಂಜತ್ತಾಯರು ಬಿಡಲಾರರು.ಬಂದವರೆಲ್ಲಾ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ದೇವರ ಕೃಪೆಗೆ ಪಾತ್ರರಾಗಬೇಕೆಂಬ ಅವರ ಮನೋಭಿಷ್ಟೆಯೇ ಅತ್ಯಂತ ಧಾರ್ಮಿಕವಾದದ್ದು.ಜನರಲ್ಲಿ ಮೊದಲಿಂದಲೇ ಅಂತಹ ಪ್ರೀತಿ ವಾತ್ಸಲ್ಯವನ್ನು ಬೆಳೆಸಿಕೊಂಡವರು ಜಯರಾಮ ಮಂಜತ್ತಾಯರು.

ಇಂತಹ ಸುಭದ್ರ, ಧಾರ್ಮಿಕ , ಐತಿಹಾಸಿಕ ಮತ್ತು ಸಾಂಸ್ಕøತಿಕ ಹಿನ್ನೆಲೆಯುಳ್ಳ ಎಡನೀರು ಮಠದ ನೂತನ ಯತಿಯಾಗಿ ಪೀಠಾರೋಹಣಗೊಳ್ಳಲಿರುವವರು ಇಷ್ಟರ ತನಕ ಮಠದ ಆಡಳಿತಾಧಿಕಾರಿಯಾಗಿ ಮಠದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಿದ, ಸದ್ಗುಣ, ಸುಶೀಲ ,ಹಸನ್ಮುಖಿ ಬ್ರಹ್ಮಚಾರಿ ಜಯರಾಮ ಮಂಜತ್ತಾಯರು.

ಪಾಠಶಾಲೆ:ವೇದಾಧ್ಯಯನ

ಪ್ರಸ್ತುತ ಕಳೆದ ಎರಡು ವರ್ಷಗಳಿಂದ ಶ್ರೀಮಠದಲ್ಲಿ ವೇದಾಧ್ಯಯನ ಪಾಠಶಾಲೆ ಸಮರ್ಥವಾಗಿ ನಡೆಯುತ್ತಿದ್ದು, ಅಧ್ಯಯನಶೀಲರಿಗೆ ಬೆಳಕಿಂಡಿಯಾಗಿದೆ.

ಸಮಸ್ಥ ಗುರು ಪರಂಪರೆಯ ಗುರುಗಳ ಚರಣ ಕಮಲಗಳಲ್ಲಿ ಸಾಷ್ಠಾಂಗವೆರಗಿ  ಅಖಂಡ ಮಂಡಲಾಕಾರ0 ವ್ಯಾಪ್ತ0 ಯೇನ ಚರಾಚರ0 ತತ್ವದ0 ದರ್ಶಿತ0 ಯೇನ ತಸ್ಮೈ ಶ್ರೀ ಗುರವೇ ನಮಃ /ಓಂ ಪೂರ್ಣಮದ: ಪೂರ್ಣಮಿದಂ | ಪೂರ್ಣಾತ್ ಪೂರ್ಣಮುದಚ್ಯತೇ |

ಪೂರ್ಣಸ್ಯ ಪೂರ್ಣಮಾದಾಯ | ಪೂರ್ಣಮೇವಾವಶಿಷ್ಯತೇ ||

|| ಓಂ ಶಾಂತಿ: ಶಾಂತಿ: ಶಾಂತಿ: ||

ಓ0 ಸ್ವಸ್ಥಿ


                              ಕುಮಾರ ಸುಬ್ರಹ್ಮಣ್ಯ. ಮುಳಿಯಾಲ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries