ಉಪ್ಪಳ: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ,ಶ್ರೀರಾಮಯ್ಯ ಬಲ್ಲಾಳ್ ಲಕ್ಷ್ಮಿಅಮ್ಮ ಸ್ಮಾರಕ ವಾಚನಾಲಯ ಮತ್ತು ಗ್ರಂಥಾಲಯ ಪೈವಳಿಕೆ ಇವುಗಳ ಜಂಟಿ ಆಶ್ರಯದಲ್ಲಿ ರಾಜ್ಯಪ್ರಶಸ್ತಿ ವಿಜೇತರಾಗಿದ್ದ ದಿ.ಸಿ.ರಾಘವ ಬಲ್ಲಾಳ್ ಪೈವಳಿಕೆ ಅವರ ಸಂಸ್ಮರಣೆ ಕಾರ್ಯಕ್ರಮವು ಪೈವಳಿಕೆ ನಗರ ಸÀರ್ಕಾರಿ ಹಯ್ಯರ್ ಸೆಕೆಂಡರಿ ವಿದ್ಯಾಲಯದಲ್ಲಿ ಜರಗಿತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್‍ವಿ ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರದಲ್ಲಿ ಕೇರಳ ರಾಜ್ಯವಿದ್ಯಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಕೆ.ಶ್ರೀನಿವಾಸ ಭಟ್ ಅವರು ಬಲ್ಲಾಳ್‍ರವರ ಸಂಸ್ಮರಣೆಯನ್ನು ಮಾಡಿದರು. ಚೇವಾರು ಶಾಲೆಯ ಮುಖ್ಯಶಿಕ್ಷಕ ಶ್ಯಾಮ ಭಟ್ ಯು,ಹಿರಿಯ ಅಧ್ಯಾಪಕ ರವೀಂದ್ರನಾಥ ಬಲ್ಲಾಳ್,ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯ ಕೆ ಅಬ್ದುಲ್ಲ, ನಗರ ಸರ್ಕಾರಿ ಹಯ್ಯರ್ ಸೆಕೆಂಡರಿ ವಿದ್ಯಾಲಯದ ಮ್ಯುಖ್ಯಶಿಕ್ಷಕ ಬಿ.ಇಬ್ರಾಹಿಂ, ಕ್ಯಾಂಪೆÇ್ಕ ನಿರ್ದೇಶ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ನಿವೃತ್ತ ಗ್ರಾಮಾಧಿಕಾರಿ ಸೀತಾರಾಮ ಬಲ್ಲಾಳ್ ಅವರು ಬಲ್ಲಾಳರ ಒಡನಾಟದ ಕುರಿತು ಮಾತನಾಡಿದರು.ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆಗೈದ ಹಿರಿಯ ಸಾಧಕರಾದ ಕೋಚಣ್ಣ ಶೆಟ್ಟಿ ಕೆ, ಮತ್ತು ಅಚ್ಯುತ ಚೇವಾರ್ ಅವರನ್ನು ಸಮ್ಮಾನಿಸಲಾಯಿತು. ಶ್ರೀಕುಮಾರಿ ಟೀಚರ್ ಸ್ವಾಗತಿಸಿ, ರಾಧಾಕೃಷ್ಣ ಬಲ್ಲಾಳ್ ವಂದಿಸಿದರು. ಶೇಖರ ಶೆಟ್ಟಿ ನಿರ್ವಹಿಸಿದರು.




.jpg)
