ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ದಿವ್ಯಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ವಲಯದ ನೇತೃತ್ವದಲ್ಲಿ 200ನೇ ಪ್ರತಿರುದ್ರ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ಸೋಮವಾರ ಜರಗಿತು. 264 ಮಂದಿ ರುದ್ರಾಪಾಠಕರಿಂದ 3000ಕ್ಕೂ ಹೆಚ್ಚು ರುದ್ರಪಾರಾಯಣ ನಡೆಯಿತು. ಶ್ರೀರಾಮಚಂದ್ರಾಪುರ ಮಠದ ಶಿಷ್ಯವೃಂದದ ವಿವಿಧ ಮಂಡಲಗಳಿಂದ ರುದ್ರಪಾಠಕರು ಪಾಲ್ಗೊಂಡಿದ್ದರು. ಶಿವ ದೇವರಿಗೆ ಅತ್ಯಂತ ಪ್ರಿಯವಾದ ಪ್ರದೋಷದಂದು ವಿವಿಧ ಮನೆಗಳಲ್ಲಿ ರುದ್ರಪಾರಾಯಣ ನಡೆದು ಬರುತ್ತಿತ್ತು. 2014ನೇ ಇಸವಿಯಿಂದ ಪ್ರಾರಂಭವಾದ ರುದ್ರಪಾರಾಯಣದಲ್ಲಿ ವಲಯದ ಹೆಚ್ಚಿನ ಎಲ್ಲಾ ಮನೆಗಳಿಂದಲೂ ಶಿಷ್ಯವೃಂದದವರು ಪಾಲ್ಗೊಳ್ಳುತ್ತಿದ್ದರು.
200ನೇ ಪ್ರತಿರುದ್ರದಲ್ಲಿ ಪಾಲ್ಗೊಂಡ ಎಲ್ಲರಿಗೂ ಪಳ್ಳತ್ತಡ್ಕ ವಲಯದ ನೆನಪಿನ ಕಾಣಿಕೆಯನ್ನು ನೀಡಲಾಯಿತು. ರುದ್ರಪಾರಾಯಣದ ನಂತರ ಶಿವಪೂಜೆ ನಡೆಯಿತು. ಹವ್ಯಕ ಸಮಾಜದ ಹೆಸರಾಂತ ವೈದಿಕ ವಿದ್ವಾಂಸರು ರುದ್ರಪಾರಾಯಣಕ್ಕೆ ನೇತೃತ್ವವನ್ನು ನೀಡಿದ್ದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಪಳ್ಳತ್ತಡ್ಕ ವಲಯ ಅಧ್ಯಕ್ಷ ಪರಮೇಶ್ವರ ಭಟ್ ಪೆರುಮುಂಡ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯ ಹವ್ಯಕ ಮಂಡಲ ವೈದಿಕ ಪ್ರಧಾನ ವೇದಮೂರ್ತಿ ವೆಂಕಟೇಶ ಶಾಸ್ತ್ರಿ, ಮಹಾಮಂಡಲ ಧರ್ಮಕರ್ಮ ವಿಭಾಗ ಕಾರ್ಯದರ್ಶಿ ಕೇಶವಪ್ರಸಾದ ಕೂಟೇಲು, ಮಹಾಮಂಡಲ ಸಂಘಟನಾ ಕಾರ್ಯದರ್ಶಿ ಶ್ರೀಕೃಷ್ಣ ಮೀನಗದ್ದೆ, ಮುಳ್ಳೇರಿಯ ಮಂಡಲ ಉಪಾಧ್ಯಕ್ಷೆ ಕುಸುಮ ಪೆರ್ಮುಖ, ಮುಷ್ಠಿಭಿಕ್ಷೆ ಪ್ರಧಾನೆ ಪದ್ಮಾವತಿ ಕುಂಬಳೆ, ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಲಯದ ಪ್ರತಿರುದ್ರ ಸಂಘಟನೆಯಲ್ಲಿ ಪ್ರಧಾನ ಪಾತ್ರ ವಹಿಸಿದ ವಿಷ್ಣುಶರ್ಮ ಕೋರಿಕ್ಕಾರು ದಂಪತಿಗಳನ್ನು ಸನ್ಮಾನಿಸಲಾಯಿತು. ವಲಯ ವೈದಿಕ ಪ್ರಧಾನ ಕೇಶವ ಶರ್ಮ ಕೋರಿಕ್ಕಾರು ಸ್ವಾಗತಿಸಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ವಂದಿಸಿದರು. ಕುಮಾರ ಸುಬ್ರಹ್ಮಣ್ಯ ಪೈಸಾರಿ ಕಾರ್ಯಕ್ರಮ ನಿರೂಪಿಸಿದರು.




.jpg)
.jpg)
