ಬದಿಯಡ್ಕ: ಪಟ್ಟಾಜೆ ವಾರ್ಡಿನ ಉಪಚುನಾವಣೆ ಹಿನ್ನೆಲೆಯಲ್ಲಿ ಯು.ಡಿಎಫ್ ಸಂಗಮ ನಡೆಯಿತು. ಕಾಸರಗೋಡಿನ ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಅಭಿವೃದ್ಧಿಯನ್ನೇ ಕಾಣದ ಪಟ್ಟಾಜೆ ವಾಡ್ರ್ನಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಎಲ್ಲ ಮತದಾರರು ಅಭಿವೃದ್ಧಿ ದೃಷ್ಟಿಯಿಂದ ಯುಡಿಎಫ್ ಅಭ್ಯರ್ಥಿ ಶ್ಯಾಮ್ ಪ್ರಸಾದ್ ಮಾನ್ಯ ರನ್ನು ಗೆಲ್ಲಿಸಿ ಕೊಡಬೇಕಾಗಿ ವಿನಂತಿಸಿದರು.
ಉಪಚುನಾವಣೆಯ ಚುನಾವಣಾ ಸಮಿತಿಯ ಅಧ್ಯಕ್ಷ ಮಹಿನ್ ಕೇಲೊಟ್ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಮೂಸಾ ಬಿ ಚರ್ಕಳ, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ ಜೆಎಸ್, ಸುರೇಶ್, ವಿನೋದ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಜಿ ಚಂದ್ರಹಾಸ ರೈ, ಕೋಶಾಧಿಕಾರಿ ಖಾದರ್ ಮಾನ್ಯ, ಪಂಚಾಯತಿ ಅಧ್ಯಕ್ಷೆ ಶಾಂತ ಬಿ ,ಉಪಾಧ್ಯಕ್ಷ ಎಂ ಅಬ್ಬಾಸ್, ತಿರುಪತಿ ಕುಮಾರ್ ಭಟ್, ಜಗನ್ನಾಥ ರೈ,ರಾಮ ಮಾನ್ಯ, ಗಂಗಾಧರ ಗೋಳಿಯಡ್ಕ, ರಾಮ ಪಟ್ಟಾಜೆ, ಲೋಹಿತಾಕ್ಷ, ನಿರಂಜನ ರೈ ಪೆರಡಾಲ,ಶ್ರೀನಾಥ, ಕೃಷ್ಣಕುಮಾರ್ ಭಟ್, ವಾರ್ಡ್ ಅಧ್ಯಕ್ಷರು, ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು. ಬದಿಯಡ್ಕ ಮಂಡಲ ಅಧ್ಯಕ್ಷ ನಾರಾಯಣ ಎಂ ಸ್ವಾಗತಿಸಿ, ಅಭ್ಯರ್ಥಿ ಶಾಮ್ಪ್ರಸಾದ್ ವಂದಿಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಯ ವಿನಂತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.




.jpg)
.jpg)
