HEALTH TIPS

ಮಟ್ಟನೂರಿನಲ್ಲಿ ಬಾಂಬ್ ಸ್ಫೋಟ; ಗಾಯಗೊಂಡವನೂ ಮೃತ್ಯು: ಮೃತರು ಅಸ್ಸಾಂ ಮೂಲದವರು

               ಕಣ್ಣೂರು: ಕಣ್ಣೂರಿನಲ್ಲಿ ನಿನ್ನೆ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೂ ರಾತ್ರಿ ಮೃತಪಟ್ಟಿದ್ದು, ಈ ಮೂಲಕ ಇಬ್ಬರು ಸಾವನ್ನಪ್ಪಿದ್ದಾರೆ. ಮಟ್ಟನ್ನೂರಿನ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿತ್ತು. ಮಟ್ಟನೂರಿನ 19ನೇ ಮೈಲಿನಲ್ಲಿ ಬಾಡಿಗೆಗೆ ವಾಸವಿದ್ದ ಅಸ್ಸಾಂ ಮೂಲದ ಫಜಲ್ ಹಕ್ ಮತ್ತು ಶಹೀದುಲ್ ಮೃತಪಟ್ಟವರು. ಅವರನ್ನು ತಂದೆ ಮತ್ತು ಪುತ್ರ ಎಂದು ಗುರುತಿಸಲಾಗಿದೆ.

                ಇವರಿಬ್ಬರೂ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ. ಆದರೆ ಸ್ಫೋಟದ ನಿಗೂಢತೆ ಇನ್ನೂ ಹೊರಬಿದ್ದಿಲ್ಲ. ಇದು ಸ್ಟೀಲ್ ಬಾಂಬ್ ಎಂಬುದು ಪ್ರಾಥಮಿಕ ವರದಿ ತಿಳಿಸಿದೆ. ಆದರೆ ಬಾಂಬ್ ಇಬ್ಬರ ಕೈಗೆ ಹೇಗೆ ಬಂತು ಎಂಬುದನ್ನು ಖಚಿತಪಡಿಸಲು ಪೋಲೀಸರಿಗೆ ಸಾಧ್ಯವಾಗಿಲ್ಲ. ಘಟನೆ ಕುರಿತು ತನಿಖೆ ಪ್ರಗತಿಯಲ್ಲಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries