ಕೊಚ್ಚಿ: ಕೇರಳದ ಇತಿಹಾಸದಲ್ಲಿ ನಂಬಿ ನಾರಾಯಣ್ ನಂತರ ಅತಿ ಹೆಚ್ಚು ಬೇಟೆಯಾಡಲ್ಪಟ್ಟ ವ್ಯಕ್ತಿ ನಟ ದಿಲೀಪ್ ಎಂದು ಖ್ಯಾತ ಸಂವಾದಕ ರಾಹುಲ್ ಈಶ್ವರ್ ಹೇಳಿದ್ದಾರೆ. ನಂಬಿ ನಾರಾಯಣನ್ 50 ದಿನ ಜೈಲಿನಲ್ಲಿದ್ದರೆ, ದಿಲೀಪ್ 85 ದಿನಗಳನ್ನು ಕಳೆದರು. ಒಬ್ಬ ಅಮಾಯಕನನ್ನು ಬೇಟೆಯಾಡಲಾಗುತ್ತಿದೆ. ಈ ಪ್ರಕರಣದಲ್ಲಿ ತಮ್ಮ ಕುಟುಂಬವನ್ನೂ ಎಳೆದು ತರಲಾಗಿದೆ ಎಂದು ರಾಹುಲ್ ಈಶ್ವರ್ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ದಿಲೀಪ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಪಿತೂರಿ ಪ್ರಕರಣವನ್ನು ಆಗ ಎತ್ತಲಾಯಿತು; ಪೆÇಲೀಸರು ತಪ್ಪು ಮಾಡಿದ್ದಾರೆ ಎಂದು ಆರ್ ಶ್ರೀಲೇಖಾ ಹೇಳಿದ್ದರು.
ಆರ್ ಶ್ರೀಲೇಖಾ ಅವರ ಈ ಹೇಳಿಕೆ ದಿಲೀಪ್ ನಿರಪರಾಧಿ ಎಂಬ ವಾದಗಳಿಗೆ ಮತ್ತಷ್ಟು ಬಲ ತುಂಬಿದೆ. ಅವರು ಸತ್ಯ, ನ್ಯಾಯಗಳ ಪರ ಮಾತನಾಡಿದರು. ಇದು ಹೆಮ್ಮೆ ಪಡುವ ಸಂಗತಿ. ನಿರಂತರ ನಿಂದನೆ ಮತ್ತು ಅವಮಾನಗಳನ್ನು ಅನುಭವಿಸಿದ ನಂಬಿ ನಾರಾಯಣ್ ಅವರಂತೆಯೇ ದಿಲೀಪ್ ಕೂಡಾ ಅವಮಾನವನ್ನು ಅನುಭವಿಸಿದ್ದಾರೆ ಎಂದು ರಾಹುಲ್ ಈಶ್ವರ್ ಹೇಳಿದ್ದಾರೆ.
ಪ್ರಕರಣದ ಭಾಗವಾಗಿ, ಅವರ ತಾಯಿಯ ಕೊಠಡಿಯನ್ನು ಪರಿಶೀಲಿಸಲಾಯಿತು ಮತ್ತು ಕಾವ್ಯಾ ಕೆಟ್ಟ ಹುಡುಗಿ ಮತ್ತು ಮೇಡಮ್ ಎಂದು ಹೇಳಲಾಗಿದೆ. ದಿಲೀಪ್‍ಗೆ ನ್ಯಾಯ ಬೇಕು. ಸಂತ್ರಸ್ಥೆಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ದಿಲೀಪ್ ಅವರನ್ನು ಸಿಲುಕಿಸಲು ಕೆಲವರು ಯತ್ನಿಸುತ್ತಿದ್ದಾರೆ. ಅವರ ಮೇಲಿನ ಅಸೂಯೆಯಿಂದಾಗಿ ಚಿತ್ರರಂಗದವರೂ ಪ್ರಯತ್ನ ನಡೆಸಿದರು. ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದೂಡುವ ಪ್ರಯತ್ನ ನಡೆಯುತ್ತಿದೆ. ತನಿಖಾಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಕೇರಳ ಸರ್ಕಾರ ಸಿದ್ಧವಾಗಬೇಕು ಎಂದೂ ರಾಹುಲ್ ಈಶ್ವರ್ ಹೇಳಿದ್ದಾರೆ.
ಆರ್.ಶ್ರೀಲೇಖಾ ಬಹಿರಂಗಪಡಿಸಿರುವ ಮಾಹಿತಿಗಳ ಬಗ್ಗೆ ಪೋಲೀಸರು ತನಿಖೆ ನಡೆಸಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಈಶ್ವರ್ ಪ್ರಕರಣದ ತನಿಖೆ ನಡೆಸಿದ ಬೈಜು ಪೌಲಸ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸ್ಪಷ್ಟಪಡಿಸಿದರು. ರಾಜ್ಯ ಜೈಲು ವಿಭಾಗದ ಮಾಜಿ ಡಿಜಿಪಿ ಶ್ರೀಲೇಖಾ ಇದು ನಕಲಿ ಪೋಟೋಶಾಪ್ ಎಂದು ಪ್ರಮುಖ ವಿಷಯವನ್ನು ಭಾನುವಾರ ಬಹಿರಂಗಪಡಿಸಿದರೆ, ಅದರ ಬಗ್ಗೆ ಪ್ರಕರಣ ದಾಖಲಿಸುವ ಪ್ರಾಥಮಿಕ ಜವಾಬ್ದಾರಿ ಇಲ್ಲ ಎಂದು ಅವರು ಕೇಳಿದರು.
ಶ್ರೀಲೇಖಾ ಅವರ ಹೇಳಿಕೆಯೊಂದಿಗೆ, ಇದು ಪೋಲೀಸರ ತಪ್ಪಿಗೆ ಅಂತಿಮ ಮೊಳೆಯಾಗಿದೆ. ಕೇರಳ ಪೋಲೀಸರು ಸತ್ಯ ತೋರಿಸಿಕೊಡಬೇಕು ಎಂದರು ಎಂದೂ ರಾಹುಲ್ ಈಶ್ವರ್ ಹೇಳಿದ್ದಾರೆ. ಇಲ್ಲಿ ಪೋಲೀಸರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಲಾಗಿದೆ. ಇವುಗಳನ್ನು ನ್ಯಾಯಾಲಯ ಗಮನಿಸಬೇಕು. ನಿರ್ದೇಶಕ ಬಾಲಚಂದ್ರಕುಮಾರ್ ಮಾಡಿರುವ ಆರೋಪಗಳಿಗೆ ಅನಗತ್ಯ ಮಹತ್ವ ನೀಡಲಾಗಿದೆ. ಇಂತಹ ವಿಷಯಗಳನ್ನು ಜನಸಾಮಾನ್ಯರು ಚರ್ಚಿಸಬೇಕು ಎಂದು ತಿಳಿಸಿದರು.
ಕಾರಾಗೃಹದ ಡಿಜಿಪಿಯಾಗಿದ್ದ ಆರ್.ಶ್ರೀಲೇಖಾ ಅವರು ಜೈಲಿನಲ್ಲಿರುವ ಮಾಹಿತಿಯ ನೇರ ಜ್ಞಾನ ಹೊಂದಿರುವವರು. ಇದರೊಂದಿಗೆ ದಿಲೀಪ್ ನಿರಪರಾಧಿ ಎಂಬ ವಾದ ನಿಜವಾಗಿದೆ. ಈ ಪ್ರಕರಣದಲ್ಲಿ ಪೊಲೀಸರ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ. ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ ದಿಲೀಪ್ ನಿರಪರಾಧಿ ಎಂದು ಜೈಲು ಡಿಜಿಪಿಯಾಗಿದ್ದ ಆರ್.ಶ್ರೀಲೇಖಾ ಹೇಳಿಕೆ ನೀಡಿದ ಬೆನ್ನಲ್ಲೇ ರಾಹುಲ್ ಈಶ್ವರ್ ಪ್ರತಿಕ್ರಿಯೆ ಮಹತ್ವದ್ದಾಗಿದೆ.




.webp)
