HEALTH TIPS

ನೈಜ ಕಾರಣಗಳಿಗಾಗಿ ಸಿಯುಇಟಿ ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳಿಗೆ ಮಾತ್ರ ಮತ್ತೊಂದು ಅವಕಾಶ: ಎನ್ ಟಿಎ ಮುಖ್ಯಸ್ಥ

        ನವದೆಹಲಿ: ತಾಂತ್ರಿಕ ಕಾರಣಗಳಿಂದ ಸಿಯುಇಟಿ-2022 ಪರೀಕ್ಷಾ ಕೇಂದ್ರಗಳಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ ಉಂಟಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ಮುಖ್ಯಸ್ಥರು ಹೇಳಿದ್ದಾರೆ. 

               ಶುಕ್ರವಾರದಂದು ಸಿಯುಇಟಿ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇರುವುದಕ್ಕೆ ನೈಜ ಕಾರಣಗಳನ್ನು ಹೊಂದಿರುವ ಅಭ್ಯರ್ಥಿಗಳಿಗಷ್ಟೇ ಎರಡನೇ ಹಂತದಲ್ಲಿ ಪರೀಕ್ಷೆ ಬರೆಯುವುದಕ್ಕೆ ಮತ್ತೆ ಅವಕಾಶ ನೀಡಲಾಗುವುದು ಎಂದು ಎನ್ ಟಿಎ ಮುಖ್ಯಸ್ಥ ವಿನೀತ್ ಜೋಷಿ ಹೇಳಿದ್ದಾರೆ.

             ಎಲ್ಲಾ ವಿದ್ಯಾರ್ಥಿಗಳಿಗೂ ಅಲ್ಲ, ಸಿಯುಇಟಿ ಪರೀಕ್ಷೆಗಳನ್ನು ಇಂದು ಬರೆಯಲು ಸಾಧ್ಯವಾಗದೇ ಇರಲು ನೈಜ ಕಾರಣಗಳನ್ನು ಹೊಂದಿದ್ದರೆ ಮಾತ್ರ ಮತ್ತೊಂದು ಅವಕಾಶ ಪಡೆಯುವುದಕ್ಕೆ ಸಾಧ್ಯ. ಪ್ರತಿಯೊಂದು ಪ್ರಕರಣವನ್ನೂ ಪರಿಶೀಲಿಸಿ ನಿರ್ಧರಿಸಲಾಗುವುದು ನಾವು ನಮ್ಮ ನಿರ್ಧಾರದಲ್ಲಿ ನ್ಯಾಯೋಚಿತತೆ ಇರುವಂತೆ ನೋಡಿಕೊಳ್ಳುತ್ತೇವೆ ಎಂದು ವಿನೀತ್ ಜೋಷಿ ತಿಳಿಸಿದ್ದಾರೆ

             ಗೇಟ್ ಮುಚ್ಚುವುದಕ್ಕೂ ಮುನ್ನವೇ ಹಳೆಯ ಪರೀಕ್ಷಾ ಕೇಂದ್ರಗಳಿಗೆ ತಲುಪಿದ್ದ ಅಭ್ಯರ್ಥಿಗಳಿಗಷ್ಟೇ ಆಗಸ್ಟ್ ನಲ್ಲಿ ಇಂದಿನ ಪರೀಕ್ಷೆಯನ್ನು ಬರೆಯುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. 

             ಹಳೆಯ ಪರೀಕ್ಷಾ ಕೇಂದ್ರಗಳಿಂದ ಹೊಸ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗುವುದು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದಕ್ಕಾಗಿ ಮಂದಿಯನ್ನು ನೇಮಕ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

              ಬೆಳಿಗ್ಗೆ 8:30 ಕ್ಕೆ ಗೇಟ್ ಮುಚ್ಚಲಾಗುತ್ತದೆ ಆ ಸಮಯಕ್ಕಿಂತಲೂ ಮುನ್ನ ಅಲ್ಲಿದ್ದವರನ್ನು ಹೊಸ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತದೆ.

             ಮೊದಲ ದಿನ ಕೊನೆ ಕ್ಷಣದಲ್ಲಿ ಪರೀಕ್ಷಾ ಕೇಂದ್ರಗಳ ಬದಲಾವಣೆಯಿಂದ ಉಂಟಾದ ಗೊಂದಲಗಳು ಹಾಗೂ ದೂರದಿಂದ ಪ್ರಯಾಣ ಮಾಡಿದ ವಿದ್ಯಾರ್ಥಿಗಳಿಗೆ ಹೊಸ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ ಜೋಷಿ ಅವರ ಪ್ರಕಾರ ಅವರು ವಿದ್ಯಾರ್ಥಿಗಳಿಂದಾಲೀ ಅಥವಾ ಪೋಷಕರಿಂದಾಗಲೀ ಯಾವುದೇ ದೂರುಗಳನ್ನೂ ಪಡೆದಿಲ್ಲ. ಆದರೆ ಯಾವುದೇ ದೂರು ಬಂದಲ್ಲಿ ನಾವು ಅದನ್ನು ಪರಿಶೀಲಿಸುತ್ತೇವೆ. ಯಾರು ಏನು ಬೇಕಾದರೂ ಹೇಳಬಹುದು, ಅದನ್ನು ಪರಿಶೀಲಿಸುತ್ತೆವೆ ಎಂದಷ್ಟೇ ಜೋಷಿ ತಿಳಿಸಿದ್ದಾರೆ

              ತಾಂತ್ರಿಕ ಕಾರಣಗಳಿಂದ ನ್ಯೂ ಜಲಪೈಗುರಿ ಮತ್ತು ಪಠಾಣ್‌ಕೋಟ್ ನಲ್ಲಿ ತಾಂತ್ರಿಕ ಕಾರಣಗಳಿಂದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ರದ್ದಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries