HEALTH TIPS

ಸುಗ್ರೀವಾಜ್ಞೆಗಳಿಗೆ ಸಹಿ ಮಾಡದ ರಾಜ್ಯಪಾಲರು; ಲೋಕಾಯುಕ್ತ ಸೇರಿದಂತೆ 11 ಕಾಯಿದೆಗಳು ಅಸಿಂಧುವಾಗುವತ್ತ್ತ?


               ತಿರುವನಂತಪುರ: ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಸೇರಿದಂತೆ 11 ಸುಗ್ರೀವಾಜ್ಞೆಗಳ ನವೀಕರಣಕ್ಕೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸಹಿ ಹಾಕಿಲ್ಲ. ಈ ಸುಗ್ರೀವಾಜ್ಞೆಗಳು ಸೋಮವಾರದಂದು ಮುಕ್ತಾಯಗೊಳ್ಳಲಿವೆ. ನವೀಕರಿಸದಿದ್ದಲ್ಲಿ ಈ ನಿಯಮಗಳು ನಿರರ್ಥಕವಾಗುತ್ತವೆ. ಸುಗ್ರೀವಾಜ್ಞೆಗಳಿಗೆ ಅಂಕಿತ ಹಾಕುವಂತೆ ರಾಜ್ಯಪಾಲರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ ಎಂದು ವರದಿಯಾಗಿದೆ. ಕಾನೂನುಗಳನ್ನು ಅಮಾನ್ಯಗೊಳಿಸಿದರೆ, ಪ್ರಕರಣಗಳು ಸೇರಿದಂತೆ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಾಗಿದೆ.
               ಶುಕ್ರವಾರ ದೆಹಲಿಗೆ ತೆರಳಿದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮುಂದಿನ  ಗುರುವಾರ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಗಳ ಭವಿಷ್ಯ ಅಸ್ಪಷ್ಟವಾಗಿದೆ. ಸರ್ಕಾರವು ರಾಜಭವನವನ್ನು ಸಂಪರ್ಕಿಸಿದೆ. ಆದರೆ ರಾಜ್ಯಪಾಲರು ಸುಗ್ರೀವಾಜ್ಞೆಗಳನ್ನು ಸ್ವೀಕರಿಸಲು ಅಥವಾ ವಾಪಸ್ ಕಳುಹಿಸಲು ಸೂಚನೆ ನೀಡಿಲ್ಲ ಎಂದು ರಾಜಭವನ ತಿಳಿಸಿದೆ ಎಂದು ವರದಿಯಾಗಿದೆ.
                ತುರ್ತು ಸಂದರ್ಭಗಳಲ್ಲಿ, ಸರ್ಕಾರವು ಶಾಸನಕ್ಕಾಗಿ ಸುಗ್ರೀವಾಜ್ಞೆಗಳನ್ನು ಹೊರಡಿಸುತ್ತದೆ. ನಂತರ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಇವುಗಳನ್ನು ಮಸೂದೆಯಾಗಿ ಮಂಡಿಸಿ ಅಂಗೀಕರಿಸಬೇಕು ಎಂಬುದು ನಿಯಮ. ಅದು ಸಾಧ್ಯವಾಗದಿದ್ದರೆ ವಿಧಾನಸಭೆ ಕಲಾಪ ಆರಂಭವಾಗಿ 42 ದಿನಗಳ ಕಾಲ ಮಾತ್ರ ಚಾಲ್ತಿಯಲ್ಲಿರುತ್ತವೆ. ಅದು ಮತ್ತೆ ಉಳಿಯಬೇಕಾದರೆ ಅದನ್ನು ಸುಗ್ರೀವಾಜ್ಞೆಯಾಗಿ ನವೀಕರಿಸಬೇಕು. ಇದು ವಿಫಲವಾದರೆ, ಕಾನೂನು ಅಮಾನ್ಯವಾಗುತ್ತದೆ.
              ಜುಲೈ 27 ರಂದು ನಡೆದ ಸಚಿವ ಸಂಪುಟ ಸಭೆಯು ಕಳೆದ ವಿಧಾನಸಭೆ ಅಧಿವೇಶನದ ನಂತರ ಮಸೂದೆ ಮಂಡಿಸದ 11 ಸುಗ್ರೀವಾಜ್ಞೆಗಳನ್ನು ನವೀಕರಿಸಲು ನಿರ್ಧರಿಸಿತು. ಮರುದಿನವೇ ಈ ಶಿಫಾರಸು ರಾಜಭವನಕ್ಕೆ ತಲುಪಿತ್ತು. ಆದರೆ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕದಿರುವುದು ಬಿಕ್ಕಟ್ಟಿಗೆ ಕಾರಣವಾಯಿತು.
                     ಕೇರಳ ಲೋಕಾಯುಕ್ತ ತಿದ್ದುಪಡಿ 2, ಸಾರ್ವಜನಿಕ ಸೇವಾ ಆಯೋಗದ ತಿದ್ದುಪಡಿ 3, ಖಾಸಗಿ ಅರಣ್ಯ ಸ್ವಾಧೀನ ಮತ್ತು ಹೇರಿಕೆ 7, ಸಹಕಾರ ಸಂಘಗಳ ತಿದ್ದುಪಡಿ 2, ಕಡಲ ಮಂಡಳಿ ತಿದ್ದುಪಡಿ 2, ಸ್ಥಳೀಯಾಡಳಿತ ಸಾರ್ವಜನಿಕ ಸೇವೆ 1, ಸಾರ್ವಜನಿಕ ವಲಯದ ನೇಮಕಾತಿ ಮಂಡಳಿ 1, ಸಾರ್ವಜನಿಕ ಆರೋಗ್ಯ ಸುಗ್ರೀವಾಜ್ಞೆ 5, ಲೈವ್ ಸ್ಟಾಕ್ ಮತ್ತು ಪೌಲ್ಟ್ರಿ ಫೀಡ್ ಮತ್ತು ಮಿನರಲ್ ಮಿಶ್ರಣಗಳು 5, ಆಭರಣ ಕಾರ್ಮಿಕರ ಕಲ್ಯಾಣ ನಿಧಿ ಆರು, ಕೈಗಾರಿಕಾ ಏಕ ಗವಾಕ್ಷಿ ಮಂಡಳಿ ಮತ್ತು ಕೈಗಾರಿಕಾ ಟೌನ್‍ಶಿಪ್ ಅಭಿವೃದ್ಧಿ ಎರಡು ಎಂಬಂತೆ ಸುಗ್ರೀವಾಜ್ಞೆಗಳು ರಾಜ್ಯಪಾಲರ ಸಹಿಗೆ ಎದುರು ನೋಡುತ್ತಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries