HEALTH TIPS

ವರ್ಕಾಡಿಯಲ್ಲಿ ಕುಸಿದ ಮೂರಂತ್ತಸ್ಥಿನ ಕಟ್ಟಡ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಸುರಕ್ಷಿತ ಕಟ್ಟಡಗಳು


                ಮಂಜೇಶ್ವರ: ವರ್ಕಾಡಿ ಸಮೀಪದ ಸುಂಕದಕಟ್ಟೆ ಎಂಬಲ್ಲಿ ಕಟ್ಟಡವೊಂದು ಕುಸಿದುಬಿದ್ದ ಘಟನೆ ಭಾನುವಾರ ನಡೆದಿದೆ. ಕಟ್ಟಡದ ಶಿಥಿಲತೆಯ ಕಾರಣ ಯಾರೂ ಕಟ್ಟಡದಲ್ಲಿರದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ.
                  ಸುಂಕದಕಟ್ಟೆಯ ಸುರೇಂದ್ರ ಪೂಜಾರಿ ಎಂಬವರ ಮಾಲಕತ್ವದಲ್ಲಿರುವ ಮೂರಂತಸ್ಥಿನ ಕಟ್ಟಡದಲ್ಲಿ ವರ್ಕಾಡಿ ಪಂಚಾಯತಿ ಬಿಜೆಪಿ ಸಮಿತಿ ಕಾರ್ಯಾಲಯ, ಜೀವವಿಮಾ ನಿಗಮದ ಕಚೇರಿ, ಟೈಲರಿಂಗ್ ಅಂಗಡಿ, ಫರ್ನೀಚರ್(ಪೀಠೋಪಕರಣ) ಶಾಫ್ ಹಾಗೂ 4 ವಸತಿ ಕೊಠಡಿಗಳಿದ್ದ ಸಂಕೀರ್ಣ ಧರಾಶಾಯಿಯಾದ ಕಟ್ಟದಲ್ಲಿ ಕಾರ್ಯಾಚರಿಸುತ್ತಿತ್ತು. ಇತ್ತೀಚೆಗೆ ನಿರ್ಮಿಸಿದ್ದ ಕಟ್ಟಡವಾದರೂ ಕುಸಿದು ಬೀಳುವಂತೆ ಬಿರುಕುಗಳು ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಹಿಂದೆ ಕಟ್ಟಡದಲ್ಲಿದ್ದವರನ್ನು ಸ್ಥಳಾಂತರಿಸಲಾಗಿತ್ತು. ಕೆಲವು ತಿಂಗಳ ಹಿಂದೆಯೇ ಕಟ್ಟಡದ ಅಸುರಕ್ಷಿತತೆ ಗಮನಕ್ಕೆ ಬಂದಾಗ ಮಾಲಕರು ದುರಸ್ಥಿ ನಡೆಸಿದ್ದರೂ, ಇತ್ತೀಚೆಗೆ ಮತ್ತೆ ಕಟ್ಟಡವು ಯಾವಾಗಲೂ ಬೀಳುವ ಹಂತಕ್ಕೆ ತಲಪಿತ್ತು.
                ಅದೃಷ್ಟವಶಾತ್ ವಾರಗಳ ಹಿಂದೆ ಕಟ್ಟಡದಲ್ಲಿದ್ದವರು ಸ್ಥಳಾಂತgಗೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿಹೋಗಿದ್ದು ಜನರು ನಿಟ್ಟುಸಿರುಬಿಟ್ಟಿದ್ದಾರೆ. ಘಟನೆಯ ಬಳಿಕ ಮಂಜೇಶ್ವರ ಠಾಣಾಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
                      ಯಾಕೆ ಹೀಗೆ:
            ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಇಂತಹ ಹಲವು ಕಟ್ಟಡಗಳು ಹಠಾತ್ ಶಿಥಿಲಗೊಂಡು ಉಪಯೋಗಶೂನ್ಯವಾಗುತ್ತಿರುವುದು ವರದಿಯಾಗುತ್ತಿದೆ. ದಶಗಳ ಹಿಂದೆ, 40 ವರ್ಷಗಳಿಗಿಂತಲೂ ಮೊದಲು ನಿರ್ಮಿಸಿದ ಕಟ್ಟಡಗಳು ಸುಸ್ಥಿತಿಯಲ್ಲಿದ್ದರೂ, ಕಳೆದ 10 ವರ್ಷಗಳಿಂದ ಈಚೆಗೆ ನಿರ್ಮಿಸಿದ ಹಲವು ಕಟ್ಟಡ, ಮನೆಗಳಲ್ಲಿ ಅಸುರಕ್ಷಿತ ಸ್ಥಿತಿ ಕಂಡುಬರುತ್ತಿರುವುದು ಜನರ ಕಳವಳಕ್ಕೆ ಕಾರಣವಾಗಿದೆ. ನಿರ್ಮಿಸಿ ಒಂದೇ ವರ್ಷದಲ್ಲಿ ಸೋರುವ ಮನೆಗಳು, ವಸತಿ-ವ್ಯಾಪಾರ ಸಂಕೀರ್ಣಗಳು ಅಲ್ಲಲ್ಲಿ ಕಂಡುಬರುತ್ತಿದೆ. ಕಟ್ಟಡ ನಿರ್ಮಿಸಿ ಪರವಾನಿಗೆ ನೀಡುವ ವೇಳೆ ಫಿಟ್ ನೆಸ್ ಪ್ರಮಾಣಪತ್ರ ಅಗತ್ಯವೆಂದು ಕಾನೂನಿದ್ದರೂ ಎಲ್ಲೂ ಬಳಕೆಯಾಗದಿರುವುದು ಒಂದು ಕಾರಣವಾದರೆ, ಕಳಪೆ ಗುಣಮಟ್ಟದ ಸಿಮೆಂಟ್, ಎಂಸ್ಯಾಂಡ್ ಉಪಯೋಗ ಮತ್ತು ಅನುಭವ ರಹಿತ ಕಾರ್ಮಿಕರಿಂದ ನಿರ್ಮಾಣ ನಡೆಯುವುದು ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಬೃಹತ್ ಕಟ್ಟಡ ನಿರ್ಮಾಣದಲ್ಲಿ ಇತ್ತೀಚೆಗೆ ಉತ್ತರ ಭಾರತದ ಕಾರ್ಮಿಕರೇ ಹೆಚ್ಚು ಕಾರ್ಯನಿರ್ವಹಿಸುತ್ತಿರುವುದು ಹಲವು ಸಂಶಯಗಳಿಗೂ ಎಡೆಮಾಡಿದೆ.
             ಆಡಳಿತ ವರ್ಗ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗಂಭೀರವಾಗಲಿದೆ ಎಂದು ಜಿ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ತಿಳಿಸಿದ್ದಾರೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries