HEALTH TIPS

ರಾಷ್ಟ್ರೀಯ ಜಾಗೃತಿ ಜನರ ದೀಕ್ಷೆಯಾಗಲಿ: ಕೃಷ್ಣ ಭಟ್


             ಬದಿಯಡ್ಕ: ಭಾರತದ ಜನಜೀವನದಲ್ಲಿ ಜಾತಿ, ಮತ, ಧರ್ಮಗಳನ್ನೂ ಮೀರಿದ ಸಾಮಾಜಿಕ ಸಾಮರಸ್ಯ ಅಗತ್ಯವಿದೆ. ಈ ಮೂಲಕವಾಗಿ ರಾಷ್ಟ್ರೀಯ ಜಾಗೃತಿ ಎಲ್ಲರ ಜೀವನ ದೀಕ್ಷೆಯಾಗಬೇಕು. ಸೌಹಾರ್ದತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್ ಹೇಳಿದರು.
          ಅವರು ಸೋಮವಾರ ಬದಿಯಡ್ಕದಲ್ಲಿ ಕೇರಳ ಹಿರಿಯ ನಾಗರಿಕರ ವೇದಿಕೆಯ ಬದಿಯಡ್ಕ ಘಟಕದ ಅಶ್ರಯದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
       ವ್ಯಕ್ತಿಯ ಜೀವನದ ಸಾಧನೆಗಳು, ಆತನ ವ್ಯಕ್ತಿತ್ವದ ಮೈಲುಗಲ್ಲುಗಳಾಗಿ ದಾಖಲಾಗುತ್ತವೆ. ಸಾಹಿತ್ಯದ ಸಂಗದಿಂದ ದೊರೆಯುವ ಅನುಭÀವ ಅವರ್ಣನೀಯ. ಭಾವೀ ಜನಾಂಗದಲ್ಲಿ ಸಾಹಿತ್ಯದ ಬಗೆಗಿನ ಆಸಕ್ತಿಯನ್ನು ಅರಳಿಸಿ, ಸಾಹಿತ್ಯ ಸಂಪತ್ತನ್ನು ಅವರಿಗೆ ನೀಡಬೇಕು ಎಂದು ಅವರು ಹೇಳಿದರು.
         ಸಂಘಟನೆಯ ಕೇರಳ ಹಿರಿಯ ನಾಗರಿಕರ ವೇದಿಕೆಯ ಬದಿಯಡ್ಕ ಘಟಕದ  ಅಧ್ಯಕ್ಷ ಪೆರುಮುಖ ಈಶ್ವರ ಭಟ್ ರಾಷ್ಟ್ರಧ್ವ್ವಜಾರೋಹಣ ಮಾಡಿದರು. ಸಾಮಾಜಿಕ ಮುಖಂಡ ಪಿ ಜಿ ಚಂದ್ರಹಾಸ ರೈ, ನಿವೃತ್ತ ಪ್ರಾಂಶುಪಾಲ ಎಂ ನಾರಾಯಣ ಭಟ್, ಕಲಾವಿದ ಬಿ. ಗೋವಿಂದ ಭಟ್, ಚೇಕೂಡ್ಲು ಗಣೇಶ ಭಟ್ ಮೊದಲಾದವರು ಭಾಗವಹಿಸಿದ್ದರು. ಈ ಸಂದಭರ್Àದಲ್ಲಿ ಅಮೃತ ಮಹೋತ್ಸವ ಸ್ವಾತಂತ್ರ್ಯ ಕುರಿತ ಕವಿಗೋಷ್ಠಿಯಲ್ಲಿ ಜಿಲ್ಲೆಯ ಪ್ರಸಿದ್ಧ ಕವಿಗಳಾದ ಪುಂಡೂರು ಪ್ರಭಾವತಿ ಕೆದಿಲಾಯ, ಪ್ರಮೀಳಾ ಚುಳ್ಳಿಕ್ಕಾನ, ಹಿತೇಶ್ ಕುಮಾರ್ ನೀರ್ಚಾಲ್, ವಿರಾಜ್ ಅಡೂರು, ಸೌಮ್ಯ ಕಾರ್ಲೆ, ಧನ್ಯಶ್ರೀ ಸರಳಿ, ಸುಶೀಲಾ ಕೆ ಪದ್ಯಾಣ, ಜ್ಯೋತ್ಸ್ನಾ ಕಡಂದೇಲು, ಚಿತ್ತರಂಜನ್ ಕಡಂದೇಲು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘಟನೆಯ ವತಿಯಿಂದ ಬಹುಮುಖ ಪ್ರತಿಭೆ ಚಿತ್ತರಂಜನ್ ಕಡಂದೇಲು ಅವರನ್ನು ಶಾಲು ಹೊದೆಸಿ ಅಭಿನಂದಿಸಲಾಯಿತು. ಸಂಪತ್ತಿಲ ಶಂಕರನಾರಾಯಣ ಭಟ್ ವಂದಿಸಿದರು.  ಪೆರುಮುಖ ಈಶ್ವರ ಭಟ್ ಸ್ವಾಗತಿಸಿ, ನಿರೂಪಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries