ಬದಿಯಡ್ಕ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಜನತಾ ಯುವಮೋರ್ಚಾ ಬದಿಯಡ್ಕ ಮಂಡಲದ ನೇತೃತ್ವದಲ್ಲಿ ತಿರಂಗಾ ಬೈಕ್ ರ್ಯಾಲಿ ಬದಿಯಡ್ಕ ಪೇಟೆಯಲ್ಲಿ ನಡೆಯಿತು. ನೂರಾರು ಕಾರ್ಯಕರ್ತರು, ಸಾರ್ವಜನಿಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಬದಿಯಡ್ಕ ಬೋಳುಕಟ್ಟೆ ಮೈದಾನದಲ್ಲಿ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಯುವಮೋರ್ಚಾ ಮಂಡಲ ಅಧ್ಯಕ್ಷ ಪ್ರಮೋದ್ ಭಂಡಾರಿ ಅವರಿಗೆ ರಾಷ್ಟ್ರಧ್ವ್ವಜ ಹಸ್ತಾಂತರಿಸಿ ಚಾಲನೆಯನ್ನು ನೀಡಿದರು. ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು, ರಾಜ್ಯ ಸಮಿತಿ ಸದಸ್ಯೆ ಅಂಜು ಜೋಸ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಕೆದಿಲಾಯ ಬದಿಯಡ್ಕ, ಮಂಡಲ ಉಪಾಧ್ಯಕ್ಷ ಅಂಬುಜಾಕ್ಷನ್, ಬೆಳ್ಳೂರು ಪಂಚಾಯಿತಿ ಅಧ್ಯಕ್ಷ ಶ್ರೀಧರ ಬೆಳ್ಳೂರು, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ಗೋಪಾಲಕೃಷ್ಣ ಮುಂಡೋಳುಮೂಲೆ, ಬಾಲಕೃಷ್ಣ ಶೆಟ್ಟಿ ಕಡಾರು, ವಿನೋದ್, ಸುನಿಲ್, ರಾಜೇಶ್ ಮುಳ್ಳೇರಿಯ, ಸಂತೋಷ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ರ್ಯಾಲಿ ಬದಿಯಡ್ಕ ಪೇಟೆಯಲ್ಲಿ ಸಮಾರೋಪಗೊಂಡಿತು.




.jpg)
