ಕಾಸರಗೋಡು: ಹೆಣ್ಣುಮನಕ್ಕಳಿಗೆ ಹಾಗೂ ಮಹಿಳೆಯರಿಗೆ ಜಿಲ್ಲೆಯ ರೆಡಿಮೇಡ್ ಅಂಗಡಿ ಹಾಗೂ ಸ್ಪೋಟ್ರ್ಸ್ ಶಾಪ್‍ಗಳಲ್ಲಿರುವ ಟ್ರಯಲ್ ರೂಮ್‍ಗಳಲ್ಲಿ ಸುರಕ್ಷತೆ ಒದಗಿಸಿಕೊಡುವ ನಿಟ್ಟಿನಲ್ಲಿ ಇಂತಹ ಅಂಗಡಿಗಳಲ್ಲಿ ಏಕರೂಪದ ಷರತ್ತುಗಳನ್ನು ಜಾರಿಗೊಳಿಸುವಂತೆ ವಿಹಿಂಪ ಮಾತೃಶಕ್ತಿ ದುರ್ಗಾವಾಹಿನಿ ಮಂಗಲ್ಪಡಿ ಖಂಡ ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಬಂದ್ಯೋಡಿನಲ್ಲಿ ಇತ್ತೀಚೆಗೆ ಸ್ಪೋಟ್ರ್ಸ್ ಸಾಮಗ್ರಿ ಮಾರಾಟ ಅಂಗಡಿಯೊಂದರ ಟ್ರಯಲ್ ರೂಮಿನಲ್ಲಿ ಗೌಪ್ಯ ಕ್ಯಾಮರಾ ಅಳವಡಿಸಿ ಬಾಲಕಿಯರ ವಸ್ತ್ರ ಬದಲಾಯಿಸುವ ದೃಶ್ಯ ಸೆರೆಹಿಡಿದಿರುವ ಕೃತ್ಯದ ಹಿನ್ನೆಲೆಯಲ್ಲಿ ಈ ಒತ್ತಾಯ ಮಾಡಲಾಗಿದೆ. ಜಿಲ್ಲೆಯ ಎಲ್ಲ ಟೆಕ್ಸ್‍ಟೈಲ್ಸ್ ಹಾಗೂ ಸ್ಪೋಟ್ರ್ಸ್ ಅಂಗಡಿಗಳಿಗೂ ಏಕರೂಪದ ಗೈಡ್ಲೈನ್ ಜಾರಿಗೆ ತರಬೇಕು, ಮಹಿಳೆಯರ ಉಡುಪು ಮಾರಾಟ ಮಳಿಗೆಯಲ್ಲಿ ಮಹಿಳಾ ಸಿಬ್ಬಂದಿ ನೇಮಕಮಾಡಬೇಕು, ಟ್ರಯಲ್‍ರೂಮ್ ಹೊರತುಪಡಿಸಿ ಇತರ ಕಡೆ ಸಿಸಿ ಕ್ಯಾಮರಾ ಅಳವಡಿಸಬೇಕು, ಟ್ರಯಲ್‍ರೂಮನ್ನು ಕಾರ್ಡ್‍ಬೋರ್ಡಿನ ಬದಲು ಕಾಂಕ್ರೀಟ್ ಗೋಡೆಯಲ್ಲೇ ನಿರ್ಮಿಸಬೇಕು, ಟ್ರಯಲ್ ರೂಮ್‍ನಲ್ಲಿ ಮಿರರ್, ಹ್ಯಾಂಗರ್ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಅಳವಡಿಸಬಾರದು, ಈ ರೀತಿಯ ಷರತ್ತು ಜಾರಿಗೊಳಿಸಿದ ನಂತರ ಕನಿಷ್ಠ ಆರು ತಿಂಗಳಿಗೊಮ್ಮೆ ಸಂಬಂಧಪಟ್ಟ ಅಧಿಕಾರಿಗಲು ತಪಾಸಣೆ ನಡೆಸುವಂತೆಯೂ ಮನವಿಯಲ್ಲಿ ಆಘ್ರಹಿಸಲಾಗಿದೆ.
ರೆಡಿಮೇಡ್, ಸ್ಪೋಟ್ರ್ಸ್ ಶಾಪ್‍ಗಳಲ್ಲಿ ಏಕರೂಪ ನಿಯಮ ಜಾರಿಗೆ ಆಗ್ರಹ
0
ಆಗಸ್ಟ್ 06, 2022
Tags




