ಕಾಸರಗೋಡು: ಸಿರಿ ಬಾಗಿಲು ಗ್ರಾಮದ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನ ಸಮೀಪದ ಕಂಪದಮೂಲೆಯಲ್ಲಿ ವಾಸಿಸುತ್ತಿರುವ ಸುಂದರಿ ಎಂಬವರ ಪುತ್ರಿ ಭವ್ಯ ಎಂಬ ಯುವತಿ ಕಳೆದ 8 ವರ್ಷಗಳಿಂದ ತನ್ನ ಎರಡು ಕೈಕಾಲುಗಳ ಸ್ವಾಧೀನತೆ ಕಳೆದುಕೊಂಡು ಮಲಗಿದ ಸ್ಥಿತಿಯಲ್ಲಿದ್ದು, ಇವರಿಗೆ ನಮಸ್ತೆ ಸಿರಿ ಬಾಗಿಲು ವಾಟ್ಸಪ್ ಗ್ರೂಪಿನ ಸದಸ್ಯರಿಂದ ಚಿಕಿತ್ಸಾ ಧನಸಹಾಯ ಹಸ್ತಾಂತರಿಸಲಾಯಿತು. ದಾನಿಗಳ ನರವಿನೊಂದಿಗೆ ಸಂಗ್ರಹಿಸಲಾದ ಸುಮಾರು 62,000 ಮೊತ್ತವನ್ನು ಸುಂದರಿ ಅವರ ಮನೆಗೆ ತೆರಳಿ ಸದಸ್ಯರು ನೀಡಿದರು. ಈ ಸಂದರ್ಭ ಗ್ರೂಪಿನ ಪ್ರಮುಖರು, ದಾನಿಗಳು, ಪುಳ್ಕೂರು ಕ್ಷೇತ್ರದ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಮಸ್ತೆ ಸಿರಿ ಬಾಗಿಲು ವಾಟ್ಸಾಪ್ ಗ್ರೂಪ್ ವತಿಯಿಂದ ಸಿರಿ ಬಾಗಿಲು ಹಾಗೂ ಆಸುಪಾಸಿನ ಗ್ರಾಮದ ಸುಮಾರು 15 ಅಶಕ್ತ ಕುಟುಂಬಗಳಿಗೆ ಚಿಕಿತ್ಸಾ ಧನ ಸಹಾಯವನ್ನು ವಿತರಿಸಲಾಗಿದ್ದು, ಮುಂದೆಯೂ ಅಶಕ್ತ ಕುಟುಂಬಗಳಿಗೆ ನಿರ್ಧನರಿಗೆ ಸಹಾಯ ಮಾಡಲು ಯೋಜನೆ ಹಮ್ಮಿಕೊಂಡಿರುವುದಾಗಿ ವಾಟ್ಸಾಪ್ ಗ್ರೂಪ್ ಪ್ರತಿನಿಧಿಗಳು ತಿಳಿಸಿದ್ದಾರೆ.
ನಮಸ್ತೆ ಸಿರಿಬಾಗಿಲು ವಾಟ್ಸಾಪ್ ಗ್ರೂಪ್‍ನಿಂದ ಚಿಕಿತ್ಸಾ ಧನ ಸಹಾಯ ವಿತರಣೆ
0
ಆಗಸ್ಟ್ 06, 2022
Tags




