ಕಾಸರಗೋಡು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕೂಡ್ಲು ಪಾಯಿಚ್ಚಾಲ್ ಋಷಿಕ್ಷೇತ್ರ ಚೈತನ್ಯ ವಿದ್ಯಾಲಯ ಸಭಾಂಗಣದಲ್ಲಿ ಪ್ರಸಿದ್ಧ ಮೃದಂಗವಾದಕ, ಶತಾಯುಷಿ ವಿದ್ವಾನ್ ಬಾಬುರೈ ಅವರನ್ನು ವಿದ್ಯಾಭಾರತಿ ದಕ್ಷಿಣ ಕ್ಷೇತ್ರ ಶಿಶುವಾಟಿಕ ಪ್ರಮುಖ್ ಪಿ ಕೆ ಕೃಷ್ಣದಾಸ್ ಅವರು ಚೈತನ್ಯವಿದ್ಯಾಲಯದ ಪರವಾಗಿ ಸನ್ಮಾನಿಸಿದರು.
ಸಭೆಯಲ್ಲಿ ವಿದ್ಯಾಲಯ ಪ್ರಬಂಧಕರು, ಆಡಳಿತಾದಿಕಾರಿ, ಪ್ರಾಂಶುಪಾಲೆ, ಚೈತನ್ಯ ಟ್ರಸ್ಟಿಯವರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಬಾಬು ರೈಯವರು ಸ್ವಾತಂತ್ರ್ಯಪೂರ್ವ ದಿನಗಳ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಹಿರಿಯ ಕಲಾವಿದ, ಶತಾಯುಷಿ ಬಾಬುರೈ ಅವರಿಗೆ ಗೌರವಾರ್ಪಣೆ
0
ಆಗಸ್ಟ್ 19, 2022





