ಬದಿಯಡ್ಕ: ರಾಷ್ಟ್ರದ ಸಾಂಸ್ಕøತಿಕ ಶ್ರೀಮಂತಿಕೆಯಾದ ರಾಮಾಯಣದ ಮೂಲ ಸ್ವರೂಪವನ್ನು ಹೊಸ ತಲೆಮಾರಿಗೆ ತಲಪಿಸುವ ನಿರಂತರ ಪ್ರಯತ್ನಗಳಾಗಬೇಕು. ಸತ್ ಚಾರಿತ್ರ್ಯದ ತಲೆಮಾರಿಗೆ ಪ್ರಯತ್ನಿಸದಿದ್ದರೆ ಅಪಾಯಗಳಿದ್ದು, ರಾಮಾಯಣ, ಮಹಾಭಾರತಗಳ ಮೂಲತತ್ವಗಳನ್ನು ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಪ್ರವಚನಗಳಂತಹ ಕಾರ್ಯಕ್ರಮಗಳು ಪೂರಕ ಎಂದು ಕಾರ್ಮಾರು ಶ್ರೀ ಮಹಾ ವಿಷ್ಣು ಕ್ಷೇತ್ರ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ಅವರು ತಿಳಿಸಿದರು.
ಯಕ್ಷಮಿತ್ರ ಸಾಂಸ್ಕøತಿಕ ಸಂಘ ಹಾಗೂ ಕಾರ್ಮಾರು ಶ್ರೀ ಮಹಾ ವಿಷ್ಣು ಕ್ಷೇತ್ರ ಸಮಿತಿಯ ಜಂಟಿ ಆಶ್ರಯದಲ್ಲಿ ಕಾರ್ಮಾರು ಮಹಾವಿಷ್ಣು ಕ್ಷೇತ್ರದಲ್ಲಿ ನಡೆದ ಏಳು ದಿನಗಳ ಶ್ರೀಮದ್ ರಾಮಾಯಣ ಪ್ರವಚನ ಮಾಲಿಕೆಯ ಮಂಗಳವಾರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಶ್ರೀಮದ್ ರಾಮಾಯಣದ ಪ್ರವಚನವನ್ನು ನಡೆಸಿಕೊಟ್ಟರು. ಕ್ಷೇತ್ರ ಆಡಳಿತ ಮೊಕ್ತೇಸರÀ ನರಸಿಂಹ ಭಟ್ ಕಾರ್ಮಾರು, ಪಂಚಾಯತಿ ಜನಪ್ರತಿನಿಧಿ ಶ್ಯಾಮ ಪ್ರಸಾದ ಮಾನ್ಯ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಯಕ್ಷ ಮಿತ್ರರು ಮಾನ್ಯದ ಕಾರ್ಯದರ್ಶಿ ರಾಮ ಕಾರ್ಮಾರು ಉಪಸ್ಥಿತರಿದ್ದರು. ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ ನಿರೂಪಿಸಿದರು. ರಾಧಾಕೃಷ್ಣ ರೈ ಕಾರ್ಮಾರು ವಂದಿಸಿದರು.




.jpg)
.jpg)
