ಮುಳ್ಳೇರಿಯ: ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರ್ಯಾಯ ಮಾದರಿಯನ್ನು ಕೇರಳ ಸಿದ್ಧಪಡಿಸುತ್ತಿದೆ ಎಂದು ಸ್ಥಳೀಯ ಆಡಳಿತ ಖಾತೆ ಸಚಿವ ಎಂ.ವಿ.ಗೋವಿಂದನ್ ಮಾಸ್ತರ್ ಹೇಳಿದರು.
ಕಾರಡ್ಕ ಬ್ಲಾಕ್ ಪಂಚಾಯತಿ ಯೋಜನೆಯ ಭಾಗವಾಗಿ ನಿರ್ಮಿಸಲಾದ 'ಕಾರಡ್ಕ ವನ ಸತ್ಯಾಗ್ರಹ ಸ್ಮಾರಕ" ವನ್ನು ಮಂಗಳವಾರ ಸಚಿವರು ಉದ್ಘಾಟಿಸಿ ಮಾತನಾಡಿದರು.
ಆದಿವಾಸಿ ಹಾಗೂ ವಿವಿಧ ವಿಭಾಗಗಳ ಲಕ್ಷಾಂತರ ಜನರು ವಾಸಿಸುವ ಪ್ರದೇಶಗಳು ಎದುರಿಸುತ್ತಿರುವ ನಿರುದ್ಯೋಗದಂತಹ ಸಮಸ್ಯೆ ಪರಿಹರಿಸಲು ಸರ್ಕಾರ ತನ್ನ ಪ್ರಯತ್ನಗಳೊಂದಿಗೆ ಮುಂದುವರಿಯುತ್ತಿದೆ. 20 ಲಕ್ಷ ಜನರಿಗೆ ಉದ್ಯೋಗ ನೀಡುವ ಭರವಸೆಯನ್ನು ಸರ್ಕಾರ ಜಾರಿಗೊಳಿಸಲಿದೆ. ಕೇರಳದ ಉತ್ತಮ ಭವಿಷ್ಯಕ್ಕಾಗಿ ಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ತಮ್ಮ ಹಕ್ಕುಗಳು ಲಭಿಸಿದೆ ಹೋದಾಗ ಜನ ವನಸತ್ಯಾಗ್ರಹದಂತಹ ಹೋರಾಟ ಆರಂಭಿಸಿದರು. ಈ ಹೋರಾಟವು ಜೀವನ ಮತ್ತು ಅಸ್ತಿತ್ವದ ಒಂದು ಭಾಗವಾಗಿತ್ತು. ಇತಿಹಾಸವೇ ನಮ್ಮ ಶಕ್ತಿ ಎಂಬುದನ್ನು ಮರೆಯಬಾರದು ಎಂದು ಹೇಳಿದ ಸಚಿವರು, ಸ್ವಾತಂತ್ರ್ಯ ಹೋರಾಟದಲ್ಲಿ ಕಾರಡ್ಕ ವನಸತ್ಯಾಗ್ರಹ ಅವಿಸ್ಮರಣೀಯ ಹೋರಾಟವಾಗಿದೆ ಎಂದು ನೆನಪಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಪಿ.ವಿ.ಮಿನಿ, ಎ.ಪಿ.ಉμÁ, ಎಂ.ಶ್ರೀಧರನ್, ಎಚ್.ಮುರಳಿ, ಹಮೀದ್ ಪೊಸವಳಿಕೆ, ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಕೆ.ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ.ನಾರಾಯಣನ್, ಪಿ.ಸವಿತಾ, ಸ್ಮಿತಾ ಪ್ರಿಯರಂಜನ್, ಬ್ಲಾಕ್ ಪಂಚಾಯತಿ ಸದಸ್ಯರಾದ ನಳಿನಿ, ಕೆ. ರವಿಪ್ರಸಾದ್, ಎನ್.ಯಶೋದಾ, ವಸಂತಿ ಗೋಪಾಲನ್, ಚನಿಯ ನಾಯ್ಕ್, ಬಿ.ಕೃಷ್ಣನ್, ಸಾವಿತ್ರಿ ಬಾಲನ್, ಎಂ.ಕುಂಞಂಬು ನಂಬಿಯಾರ್, ಕಾರಡ್ಕ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ನಾಸರ್, ಪಂಚಾಯತಿ ಸದಸ್ಯರಾದ ಎಂ.ತಂಬಾನ್, ಕೆ.ಶಂಕರನ್ ಮತ್ತಿತರರು ಮಾತನಾಡಿದರು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿಜಿ. ಮ್ಯಾಥ್ಯೂ ಸ್ವಾಗತಿಸಿ, ಬಿಡಿಒ ಅಬ್ರಹಾಂ ಥಾಮಸ್ ವಂದಿಸಿದರು.




.jpeg)
.jpeg)
.jpeg)
