ಮಂಜೇಶ್ವರ: ಇಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ಸಾರ್ವಜನಿಕರು ಮತ್ತು ಅಧಿಕಾರಿಗಳು ಪರಸ್ಪರ ಮಾತನಾಡಿ ಪಾರದರ್ಶಕತೆ ಕಾಪಾಡುವ ವಿಧಾನ ಸೂಕ್ತವಾಗಿದೆ ಎಂದು ಲೋಕೋಪಯೋಗಿ ಸಚಿವ ಪಿ ಎ ಮುಹಮ್ಮದ್ ರಿಯಾಝ್ ಹೇಳಿದರು.
ಮಂಜೇಶ್ವರ ಕ್ಷೇತ್ರದ ಮೀಂಜ ಮತ್ತು ಪೈವಳಿಕೆ ಪಂಚಾಯತಿಗಳನ್ನು ಸಂಪರ್ಕಿಸುವ ಮುನ್ನಿಪ್ಪಾಡಿ ಸೇತುವೆಗೆ ಮಂಗಳವಾರ ಶಂಕುಸ್ಥಾಪನೆ ನಿರ್ವಹಿಸಿ ಸಚಿವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ ಯೋಜನೆಗಳ ಉದ್ಘಾಟನೆ ಇತರ ಕಾರ್ಯಗಳು ಅಥವಾ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಲ್ಲಿ ಸಾಧ್ಯವಾದಷ್ಟು ನೆರವಾಗುವುದು ಸರ್ಕಾರದ ಗುರಿಯಾಗಿದೆ. ಜನರು ಎಲ್ಲವನ್ನೂ ಅರ್ಥಮಾಡಿಕೊಂಡು, ಯೋಜನೆಗಳನ್ನು ಪರೀಕ್ಷಿಸುತ್ತಾರೆ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು, ನಿರ್ವಹಣಾ ಅಧಿಕಾರ ಮಂಡಳಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ವಿವಿಧ ರಸ್ತೆಗಳಲ್ಲಿ ಸುಮಾರು 3400 ಬೋರ್ಡ್‍ಗಳನ್ನು ಅಳವಡಿಸಲಾಗಿದೆ. ಇದೆಲ್ಲವೂ ಪಾರದರ್ಶಕತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದು ಸಚಿವರು ತಿಳಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರಚಂದ್ ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಪೈವಳಿಕೆ ಪಂಚಾಯತಿ ಅಧ್ಯಕ್ಷೆ ಕೆ ಜಯಂತಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಕಮಲಾಕ್ಷಿ, ನಾರಾಯಣ ನಾಯ್ಕ್, ಮೀಂಜ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಮೀಂಜ ಪಂಚಾಯತಿ ಸ್ಥಾಯಿ ಸಮಿತಿ ಸದಸ್ಯೆ ರುಕಿಯಾ ಸಿದ್ದಿಕ್, ಬಾಬು ಸಿ ಕಲ್ಲೂರು, ಸರಸ್ವತಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯರುಗಳಾದ ಎಂ ಎಲ್ ಅಶ್ವಿನಿ, ಸರೋಜಾ ಆರ್ ಬಲ್ಲಾಳ್, ಕೆ ವಿ ರಾಧಾಕೃಷ್ಣ, ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯ ಸೀತಾರಾಮ ಶೆಟ್ಟಿ, ಮೀಂಜ ಗ್ರಾಮ ಪಂಚಾಯತಿ ಸದಸ್ಯರಾದ ಮಿಸ್ರಿಯಾ, ನಾರಾಯಣತುಂಗ, ಜ್ಯೋತಿ ಪಿ ರೈ, ಕುಸುಮಾ ಮೋಹನ್, ಚಂದ್ರಶೇಖರ ಕೋಟೆ, ಜನಾರ್ದನ ಪೂಜಾರಿ, ಪಿಎಂ ಆಶಾಲತ, ರೇಖಾ ಶರತ್, ವಿನೋದ್ ಜಿ.ಬೆಜ್ಜ, ಅಬ್ದುಲ್ ರಜಾಕ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ವಿ.ಕುಂಞÂ್ಞ ರಾಮನ್, ಬಿ.ವಿ.ರಾಜನ್, ಇಕ್ಬಾಲ್ ಕಳಿಯೂರು, ವಾಹಿದ್ ಕೂಡೇಲು, ರಾಘವ ಚೇರಾಲು, ಬಿ.ಎಂ.ಆದರ್ಶ, ಜಯಕುಮಾರ್ ಮೀಯಪದವು, ಮೀಂಜ ಗ್ರಾಮ ಪಂಚಾಯತಿ ಯೋಜನಾ ಸಮಿತಿ ಉಪಾಧ್ಯಕ್ಷ ಎಂ.ಮುಹಮ್ಮದ್ ಮತ್ತಿತರರು ಮಾತನಾಡಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇμÁಧಿಕಾರಿ ಇ.ಪಿ.ರಾಜಮೋಹನ್ ಸ್ವಾಗತಿಸಿ, ಮೀಂಜ ಗ್ರಾಮ ಪಂಚಾಯತಿ ಕಾರ್ಯದರ್ಶಿ ಕೆ.ನಂದಗೋಪಾಲ್ ವಂದಿಸಿದರು.




.jpeg)
.jpeg)
