ಕಾಸರಗೋಡು:'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯ ಅಂಗವಾಗಿ ಜಿಲ್ಲೆಯಿಂದ ಆಯ್ಕೆಯಾಗಿರುವ ಹಲಸಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಾಸರಗೋಡಿಗೆ ಸ್ಥಾನ ಪ್ರಾಪ್ತಿಯಾಗಲಿದೆ ಎಂದು ಸ್ಥಳೀಯಾಡಳಿತ ಮತ್ತು ಅಬಕಾರಿ ಖಾತೆ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ತಿಳಿಸಿದ್ದಾರೆ.
ಅವರು ಮಂಗಳವಾರ ಕಾಸರಗೋಡು ನಗರಸಭಾಂಗಣದಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯ ಅಂಗವಾಗಿ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮತನಾಡಿದರು.
ಹಲಸಿನ ಬೀಜದಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ವಿಶ್ವ ಮಾರುಕಟ್ಟೆಯಲ್ಲಿ ಡ್ರೈಫ್ರೂಟ್ಸ್‍ಗಿಂತ ಹೆಚ್ಚು ಬೆಲೆಬಾಳುವ ಉತ್ಪನ್ನವಾಗಿ ಖ್ಯಾತಿಗಳಿಸಲಿದೆ ಎಂದು ತಿಳಿಸಿದರು. ಶಾಸಕ ಎನ್.ಎ.ನೆಲ್ಲಿಕುಂಞ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಕಳೆದ 25 ವರ್ಷಗಳಿಂದ ಹಲಸಿನ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿರುವ ಸಚ್ಚಿದಾನಂದ ಖಂಡೇರಿ ಅವರನ್ನು ಸಚಿವರು ಸನ್ಮಾನಿಸಿದರು. ಅಪ್ಪಾಸ್ ಅಪರಲ್ಸ್‍ಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ಲಭಿಸಿದ ಗರಿಷ್ಠ ಪ್ರಮಾಣದ ಸಹಾಯಧನವನ್ನು ಶಾಸಕ ಎನ್.ಎನೆಲ್ಲಿಕುನ್ನು ಹಸ್ತಾಂತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಜಾಸ್ಮಿನ್ ಉಪಸ್ಥಿತರಿದ್ದರು. ಪತ್ರಕರ್ತ, ಕೃಷಿಕ ಶ್ರೀಪಡ್ರೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣಶ್ರೀ ಪ್ರಬಂಧ ಮಂಡಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಆರ್. ರೇಖಾ ವಂದಿಸಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಕಾಸರಗೋಡಿಗೆ ಸ್ಥಾನ ನೀಡಲಿರುವ ಹಲಸು:ಸಚಿವ ಎಂ.ವಿ.ಗೋವಿಂದನ್
0
ಆಗಸ್ಟ್ 18, 2022





