ಕಾಸರಗೋಡು: 2022ರಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವುಂಟಾಗಿ, ಉತ್ತಮ ಸಾಧನೆಗೆ ನಾಂದಿಯಾಗಲಿರುವುದಾಗಿ ಪ್ರವಾಸೋದ್ಯಮ ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ತಿಳಿಸಿದ್ದಾರೆ.
ಅವರು ಕಾಞಂಗಾಡಿನ ಹೆರಿಟೇಜ್ ಸ್ಕ್ವೇರ್ ಉದ್ಘಾಟಿಸಿ ಮಾತನಾಡಿದರು.
ಕಳೆದ ಮೂರು ತಿಂಗಳ ಕಾಲಾವಧಿಯಲ್ಲಿ ಜಿಲ್ಲೆಗೆ 75175 ಮಂದಿ ಪ್ರವಾಸಿಗರು ಆಗಮಿಸಿದ್ದು, ಇದು ಜಿಲ್ಲೆ ರಚನೆಯಾದ ನಂತರ ಅತಿ ಹೆಚ್ಚಿನ ಪ್ರವಾಸಿಗರ ಸಂಖ್ಯೆಯಾಗಿದೆ. ಇದು ಜಿಲ್ಲೆಯ ಇತಿಹಾಸದಲ್ಲೇ ಅತಿ ದೊಡ್ಡ ದಾಖಲೆಯಾಗಿದೆ. ಕಲಾ ಪ್ರಕಾರಗಳನ್ನು ಸಾಂಸ್ಕøತಿಕ ಹೋರಾಟಗಳ ಭಾಗವಾಗಿ ನೋಡುವ ಕಾಞಂಗಾಡಿನ ಜನತೆಗೆ ಹೆರಿಟೇಜ್ ಸ್ಕ್ವೇರ್ ಮೂಲಕ ಹೊಸ ಸಂದೇಶ ರವಾನಿಸುವ ಗುರಿ ಪ್ರವಾಸೋದ್ಯಮ ಇಲಾಖೆಯದ್ದಾಗಿದೆ ಎಂದು ತಿಳಿಸಿದರು.
ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಂ.ಹುಸೇನ್ ವರದಿ ಮಂಡಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಗರಸಭಾ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲ, ವಾರ್ಡ್ ಕೌನ್ಸಿಲರ್ ವಂದನಾ ಬಾಲರಾಜ್, ಬಿಆರ್‍ಡಿಸಿ ಎಂಡಿ ಪಿ.ಶಿಜಿನ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್ ಸ್ವಾಗತಿಸಿದರು. ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್ ವಂದಿಸಿದರು. ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ಥಳಾವಕಾಶದ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಟೌನ್ ಸ್ಕ್ವೇರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ಥಳಾವಕಾಶದ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಸೇರಿಸಿ 52 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸದುರ್ಗ ಟೌನ್ ಹಾಲ್ ಎದುರು ಟೌನ್ ಸ್ಕ್ವೇರ್ ನಿರ್ಮಿಸಲಾಗಿದೆ. ಟೌನ್ ಸ್ಕ್ವೇರ್ ತೆರೆದ ವೇದಿಕೆ, ಆಸನ ಮತ್ತು ಕಾಫಿ ಕೆಫೆಯಂತಹ ಸೌಲಭ್ಯಗಳನ್ನು ಹೊಂದಿದೆ.
ದೇಶೀಯ ಪ್ರವಾಸೋದ್ಯಮದಲ್ಲಿ ಕಾಸರಗೋಡಿಗೆ ಲಾಭ: ಸಚಿವ ಪಿಎ ಮುಹಮ್ಮದ್ ರಿಯಾಸ್
0
ಆಗಸ್ಟ್ 18, 2022





