ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲ ನೀರ್ಚಾಲು ವಲಯದ ವತಿಯಿಂದ ಮನೋವೈದ್ಯಕೀಯ ವಿಭಾಗ ಸ್ನಾತಕೋತ್ತರ ಶಿಕ್ಷಣದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ರ್ಯಾಂಕ್‍ನೊಂದಿಗೆ ಚಿನ್ನದಪದಕ ಪಡೆದ ಶಂಕರಮೂಲೆ ದಿವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಬಿ.ಬಿ.ಎಸ್. ಪೂರೈಸಿದ ಇವರು ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಮನೋವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪೂರ್ಣಗೊಳಿಸಿ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದಲ್ಲಿ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಇವರು ನೀರ್ಚಾಲು ವಲಯದ ಕಜೆಮೂಲೆ ಘಟಕದ ಶಂಕರಮೂಲೆಯಲ್ಲಿರುವ ನಿಡುಗಳ ವೆಂಕಟಕೃಷ್ಣ ಮತ್ತು ಜಯಶ್ರೀ ಇವರ ಪುತ್ರಿ.
ವಲಯ ಅಧ್ಯಕ್ಷ ಜಯದೇವ ಖಂಡಿಗೆ, ಉಪಾಧ್ಯಕ್ಷ ಗಣಪತಿ ಪ್ರಸಾದ್ ಕುಳಮರ್ವ, ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ, ಗುರಿಕ್ಕಾರರಾದ ಗೋಪಾಲಕೃಷ್ಣ ಭಟ್ ಕುಳಮರ್ವ, ವಿದ್ಯಾರ್ಥಿ ವಾಹಿನಿ ಪ್ರಧಾನರಾದ ಉದನೇಶವೀರ ಕಿಳಿಂಗಾರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಚಿನ್ನದ ಪದಕ ಪಡೆದ ದಿವ್ಯಶ್ರೀಗೆ ನೀರ್ಚಾಲು ವಲಯದ ಅಭಿನಂದನೆ
0
ಆಗಸ್ಟ್ 06, 2022
Tags




.jpg)
