HEALTH TIPS

ಗುಜರಾತ್​ನ ಗೋಧ್ರಾ ಗಲಭೆ, ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಎಲ್ಲಾ ಕೇಸ್ ಕ್ಲೋಸ್​: ಸುಪ್ರೀಂ ಹೇಳಿದ್ದೇನು?

       ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್​, 1992ರಲ್ಲಿ ನಡೆದ ಬಾಬ್ರಿ ಮಸೀದಿ ಕಟ್ಟಡ ಧ್ವಂಸ ಪ್ರಕರಣ ಹಾಗೂ 2002ರಲ್ಲಿ ನಡೆದಿರುವ ಬಹು ವಿವಾದಿತ ಗುಜರಾತ್​ ಗಲಭೆ ಪ್ರಕರಣಗಳಿಂದ ಸಂಬಂಧಿಸಿದಂತೆ ವಿವಿಧ ಕೋರ್ಟ್​ಗಳಲ್ಲಿ ಇರುವ ಎಲ್ಲಾ ಕೇಸ್​ಗಳನ್ನೂ ಮುಕ್ತಾಯಗೊಳಿಸಿದೆ.

         ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ಕುರಿತು 2019ರಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ಈ ವಿವಾದಿತ ಪ್ರದೇಶದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಕೋರ್ಟ್​ ಆದೇಶಿಸಿತ್ತು. ಅಯೋಧ್ಯೆಯಲ್ಲಿ 5 ಎಕರೆ ಪರ್ಯಾಯ ಭೂಮಿಯನ್ನು ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ ನಿರ್ಮಾಣಕ್ಕಾಗಿ ನೀಡಲು ಸೂಚಿಸಿತ್ತು.

             ಅದೇ ರೀತಿ, ಬಾಬ್ರಿ ಮಸೀದಿ ಕಟ್ಟಡವನ್ನು ಕರಸೇವಕರು ಕೆಡವಿಹಾಕಿದ ಘಟನೆ ಸಂಬಂಧ 2020ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. 28 ವರ್ಷಗಳ ಈ ಹಳೆಯ ಪ್ರಕರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿತ್ತು. ಬಾಬರಿ ಮಸೀದಿ ಧ್ವಂಸ ಮಾಡಿದ್ದು ಪೂರ್ವನಿಯೋಜಿತ ಎಂದು ಅನಿಸುವುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಎಲ್ಲಾ 32 ಆರೋಪಿಗಳನ್ನ ಖುಲಾಸೆಗೊಳಿಸಿತ್ತು. ಆದ್ದರಿಂದ ಎಲ್ಲಾ ಪ್ರಮುಖ ಕೇಸ್​ಗಳೂ ಮುಗಿದಿರುವ ಹಿನ್ನೆಲೆಯಲ್ಲಿ ಉಳಿದ ಕೇಸ್​ಗಳಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್​ ನೇತೃತ್ವದ ಪೀಠ ಹೇಳಿದೆ.

                2002ರ ಗುಜರಾತ್​ನ ಗೋಧ್ರಾ ಗಲಭೆ ಪ್ರಕರಣಕ್ಕೆ ಬರುವುದಾದರೆ, ಕೋರ್ಟ್​ ಆದೇಶದ ಮೇರೆಗೆ ವಿಶೇಷ ತನಿಖಾ ತಂಡವು ಒಂಬತ್ತು ಪ್ರಮುಖ ಪ್ರಕರಣಗಳಲ್ಲಿ ಕೇಸ್​ ದಾಖಲು ಮಾಡಿತ್ತು. ಈ ಪೈಕಿ ಎಂಟು ಪ್ರಕರಣಗಳಲ್ಲಿ ವಿಚಾರಣೆಗಳು ಮುಗಿದು ಹೋಗಿವೆ. ಈ ಹಿನ್ನೆಲೆಯಲ್ಲಿ ಸದ್ಯ ಇವು ನಿರುಪಯುಕ್ತವಾಗಿವೆ ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ. ಇನ್ನೊಂದು ಪ್ರಕರಣದಲ್ಲಿ ಮಾತ್ರ ನರೋದಾಗಾಂವ್‌ನ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು ಅದು ಮುಂದುವರಿಯಲಿದ್ದು, ಉಳಿದ ಕೇಸ್​ಗಳು ಕ್ಲೋಸ್​ ಮಾಡುವುದಾಗಿ ಹೇಳಿದೆ.

             ಇದೇ ವೇಳೆ, 2002 ರ ಗೋಧ್ರಾ ಗಲಭೆ ಪ್ರಕರಣಗಳಲ್ಲಿ ಸುಳ್ಳು ಸಾಕ್ಷ್ಯ ಸೃಷ್ಟಿಸಿ ಅಮಾಯಕರನ್ನು ಬಂಧಿಸುವಲ್ಲಿ ಪಿತೂರಿ ಮಾಡಿದ ಆರೋಪ ಹೊತ್ತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಇವರನ್ನು ಕಳೆದ ಜುಲೈ 30ರಂದು ಬಂಧಿಸಲಾಗಿದೆ. 

          ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ಕುರಿತು 2019ರಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ಈ ವಿವಾದಿತ ಪ್ರದೇಶದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಕೋರ್ಟ್​ ಆದೇಶಿಸಿತ್ತು. ಅಯೋಧ್ಯೆಯಲ್ಲಿ 5 ಎಕರೆ ಪರ್ಯಾಯ ಭೂಮಿಯನ್ನು ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ ನಿರ್ಮಾಣಕ್ಕಾಗಿ ನೀಡಲು ಸೂಚಿಸಿತ್ತು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries