ಮಂಜೇಶ್ವರ: ಮಳೆಯ ಅಬ್ಬರ ನಿಧಾನವಾಗಿ ಕಡಿಮೆಯಾಗಿ ಕಡಲಿನ ಅಬ್ಬರ ನಿಯಂತ್ರಣಕ್ಕೆ ಬರುತ್ತಿರುವಂತೆ ಮೀನು ಪ್ರಿಯರ ಸುಗ್ಗಿ ಕಾಲ ಆರಂಭಗೊಂಡಿದೆ.
ಮಂಜೇಶ್ವರದಲ್ಲಿ ನಾಡ ದೋಣಿಗಳೊಂದಿಗೆ ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದ ಮೀನು ಕಾರ್ಮಿಕರಿಗೆ ಒಂದು ತಾಸಿನೊಳಗೆ ದೋಣಿಯಲ್ಲಿ ತುಂಬಿಸಲಾರದಷ್ಟು ಮಟ್ಟಿಗೆ ಭಾರೀ ಪ್ರಮಾಣದಲ್ಲಿ ಮೀನುಗಳು ಲಭಿಸುತ್ತಿವೆ. ಮಂಜೇಶ್ವರ ಹೊಸಬೆಟ್ಟು ಕಡಪ್ಪುರದ ರವೂಫ್, ಸಾದಿಖ್ ಎಂಬಿವರಿಗೆ ಶನಿವಾರ ದೋಣಿ ತುಂಬಾ ಮೀನುಗಳು ಲಭಿಸಿವೆ.
ಮಾಂಜಿ, ಬೂತಾಯಿ, ಕಲ್ಲೂರು ಸೇರಿದಂತೆ ವಿವಿಧ ತರದ ಮೀನುಗಳು ದೋಣಿಯಲ್ಲಿ ತುಂಬಿಕೊಂಡಿದೆ. ಕಳೆದ ಕೆಲವು ಸಮಯಗಳ ಬಳಿಕ ಇದೇ ಮೊದಲಿಗೆ ಭಾರೀ ಪ್ರಮಾಣದಲ್ಲಿ ಮೀನು ಲಭಿಸಿರುವುದಾಗಿ ಮೀನು ಕಾರ್ಮಿಕರು ಹೇಳಿದ್ದಾರೆ.
ಇತ್ತೀಚೆಗೆ ಭಾರೀ ಬೇಡಿಕೆಯಿದ್ದ ಬೂತಾಯಿ ಕೂಡಾ ಭಾರೀ ಪ್ರಮಾಣದಲ್ಲಿ ಕಾಣತೊಡಗಿದೆ. ಜಿಲ್ಲೆಯ ವಿವಿಧ ಕಡಪ್ಪರಗಳಲ್ಲಿ ಕೂಡಾ ಶನಿವಾರ ಭಾರೀ ಪ್ರಮಾಣದಲ್ಲಿ ಬೂತಾಯಿ ಬಂದಿರುವುದಾಗಿ ಮೀನು ಕಾರ್ಮಿಕರು ಹೇಳುತಿದ್ದಾರೆ. ಧಾರಾಳ ಮೀನು ಲಭ್ಯತೆಯಿಂದ ಬೂತಾಯಿ ಸಹಿತ ಬೆಲೆಗಳಲ್ಲಿ ಒಂದಷ್ಟು ಅಗ್ಗ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಕಡಲಿನ ಅಬ್ಬರ ಕಡಿಮೆಯಾದ ಬೆನ್ನಲ್ಲೇ ಹೊಸಬೆಟ್ಟು ಕಡಪ್ಪುರದಲ್ಲಿ ಮೀನುಗಳ ರಾಶಿ
0
ಆಗಸ್ಟ್ 29, 2022




.jpg)
