ಕಾಸರಗೋಡು: ಎಣ್ಮಕಜೆ ಪಂಚಾಯಿತಿಯ ಬೆದ್ರಂಪಳ್ಳ ಸನಿಹದ ಬಲ್ತಕಲ್ಲು ಮುಂಡ್ಯದಲ್ಲಿನ ಶ್ರೀ ಮಲರಾಯ ಪರಿವಾರ ಸೇವಾ ಸಮಿತಿ ಆಡಳಿತದಲ್ಲಿರುವ ಶ್ರೀ ಮಲರಾಯ, ನಾಗ, ಧೂಮಾವತೀ, ರಕ್ತೇಶ್ವರೀ ಹಾಗೂ ಗುಳಿಗ ಪ್ರತಿಷ್ಠೆಯ ಕಟ್ಟೆಗಳ ಮೇಲೆ ಕಿಡಿಗೇಡಿಗಳು ಬೃಹತ್ ಕಲ್ಲುಗಳನ್ನಿರಿಸಿ ಅಪವಿತ್ರ್ಯಗೊಳಿಸಿದ್ದಾರೆ. ಕಟ್ಟೆಯಲ್ಲಿನ ಗುಳಿಗ ದೈವದ ಶೂಲಕ್ಕೂ ಹಾನಿಯೆಸಗಲಾಗಿದೆ.
ಸಿಂಹ ಮಾಸದಲ್ಲಿ ಪ್ರತಿ ದಿನ ಶ್ರೀ ದೈವಗಳಿಗೆ ದೀಪ ಇರಿಸಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆಯಾಗಿದ್ದು, ಗುರುವಾರ ಸಂಜೆ ಸಂಬಂಧಪಟ್ಟವರು ದೀಪ ಬೆಳಗಲು ಆಗಮಿಸಿದಾಗ ಕಿಡಿಗೇಡಿ ಕೃತ್ಯ ಬೆಳಕಿಗೆ ಬಂದಿದೆ. ದೈವದ ಕಟ್ಟೆಗಳಿಗೆ ಹಾನಿಯೆಸಗಿರುವ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಭೇಟಿ ನೀಡಿದರು. ಆಡಳಿತ ಸಮಿತಿ ಪದಾಧಿಕಾರಿಗಳಾದ ಹರಿನಾಥ ರೈ ಬಲ್ತಕಲ್ಲು, ಚಂದ್ರನ್, ಗಂಗಾಧರ ನಾಯ್ಕ ಹಾಗೂ ಊರವರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಗಳನ್ನು ಶೀಘ್ರ ಪತ್ತೆಹಚ್ಚುವಂತೆ ಆಗ್ರಹಿಸಿದ್ದಾರೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬೆದ್ರಂಪಳ್ಳ ಬಲ್ತಕಲ್ಲಿನಲ್ಲಿನಲ್ಲಿ ದೈವಗಳ ಕಟ್ಟೆ ಅಪವಿತ್ರ್ಯಗೊಳಿಸಿದ ಕಿಡಿಗೇಡಿಗಳು
0
ಆಗಸ್ಟ್ 20, 2022
Tags





