ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯಾ ಕ್ಯಾಂಪಸ್‍ನಲ್ಲಿ ಬಿದಿರಿನ ತೋಟಗಳ ನಿರ್ಮಾಣಕಾರ್ಯಕ್ಕೆ ಚಾಲನೆ ನೀಡಲಾಯಿತು. ಕ್ಯಾಂಪಸ್ ಅಭಿವೃದ್ಧಿ ಸಮಿತಿ, ಕಾಸರಗೋಡು ಸಸ್ಯೋದ್ಯಾನ ಮತ್ತು ಸಂಶೋಧನಾ ಕೇಂದ್ರ (ಕೆಜಿಬಿಆರ್‍ಸಿ) ನೇತೃತ್ವದಲ್ಲಿ ಯಮುನಾ ಬ್ಲಾಕ್ ಮತ್ತು ಬೊಟಾನಿಕಲ್ ಗಾರ್ಡನ್ ಬಳಿ ನಡೆಸಲುದ್ದೇಶಿಸಿರುವ ಗ್ರೀನ್ ಕ್ಯಾಂಪಸ್ ಯೋಜನೆಯನ್ವಯ ಬಿದಿರು ತೋಪುಗಳನ್ನು ನಿರ್ಮಿಸಲಾಗುತ್ತಿದೆ.
ಆಫ್ ಲ್ಯಾಂಗ್ವೇಜ್ ನಿವೃತ್ತ ಭಾಷಾ ಡೀನ್ ಪೆÇ್ರ.ಎಂ. ದಾಸನ್ ಬಿದಿರಿನ ಸಸಿಗಳನ್ನು ನೀಡಿದ್ದು, 15 ಪ್ರಬೇದಗಳ ಬಿದಿರುಗಳನ್ನು ಕ್ಯಾಂಪಸ್‍ನಲ್ಲಿ ಬೆಳೆಸಲಾಗುತ್ತಿದೆ. ಕುಲಪತಿ ಪೆÇ್ರ.ಎಚ್.ವೆಂಕಟೇಶ್ವರಲು ಬಿದಿರ ಸಸಿ ನೆಡುವ ಮೂಲಕ ಯೋಜನೆ ಉದ್ಘಾಟಿಸಿದರು. ಪ್ರಭಾರಿ ಕುಲಸಚಿವ ಪೆÇ್ರ.ರಾಜೇಂದ್ರ ಪಿಲಾಂಕಟ್ಟೆ, ಪ್ರಭಾರಿ ಪರೀಕ್ಷಾ ನಿಯಂತ್ರಕ ಪೆÇ್ರ.ಎಂ.ಎನ್.ಮುಸ್ತಫಾ, ಶೈಕ್ಷಣಿಕ ಡೀನ್ ಪೆÇ್ರ.ಅಮೃತ್ ಜಿ.ಕುಮಾರ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ.ಕೆ.ಅರುಣ್ ಕುಮಾರ್, ಕ್ಯಾಂಪಸ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಟೋನಿ ಗ್ರೇಸ್, ಅಧ್ಯಕ್ಷ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಡಾ.ಜೋಸೆಫ್ ಕೊಯಿಪಲ್ಲಿ, ಕೆಜಿಬಿಆರ್‍ಸಿ ನಿರ್ದೇಶಕ ಪೆÇ್ರ.ಡೆನ್ನಿಸ್ ಥಾಮಸ್, ಜಂಟಿ ನಿರ್ದೇಶಕ ಡಾ. ಜಾಸ್ಮಿನ್ ಎಂ ಶಾ ಉಪಸ್ಥಿತರಿದ್ದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿದಿರು ತೋಟ ಯೋಜನೆಗೆ ಚಾಲನೆ
0
ಆಗಸ್ಟ್ 20, 2022
Tags




