ಕಾಸರಗೋಡು: ನಗರದ ಕರಂದಕ್ಕಾಡಿನ ಶಿವಾಜಿ ನಗರ ಶ್ರೀವಿಶ್ವಕರ್ಮ ಭಜನಾ ಮಂದಿರದಲ್ಲಿ ರಾಮಾಯಣ ಮಾಸಾಚರಣೆ ಅಂಗವಾಗಿ ಮೂರು ದಿನಗಳ ಕಾಲಸಂಜೆ ಭಜನೆಯೊಂದಿಗೆ 'ಶ್ರೀರಾಮ ಕಥಾ ಸತ್ಸಂಗ'ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಇವರು ರಾಮಾಯಣದ ತತ್ವಾದರ್ಶವನ್ನು ಶ್ಲೋಕ, ಸಂಕೀರ್ತನೆಯೊಂದಿಗೆ ರಾಮಾಯಣ ಪ್ರವಚನದಮೂಲಕ ಸೇರಿದ ಪ್ರಸ್ತುತಪಡಿಸಿದರು.
ಒಂದು ತಿಂಗಳ ಕಾಲ ವಿವಿಧೆಡೆ ಜರಗಿದ ಸತ್ಸಂಗದ ಸಮಾರೋಪ ಸಮಾರಂಭ ಈ ಸಂದರ್ಭ ನಡೆಯಿತು. ಶ್ರೀ ವಿಶ್ವಬ್ರಾಹ್ಮಣ ಸಮಾಜಸೇವಾ ಸಂಘ(ರಿ) ಶ್ರೀ ವಿಶ್ವಕರ್ಮ ಯುವಕ ಸಂಘ ಮತ್ತು ಶ್ರೀ ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ರಾಮಾಯಣ ಮಾಸಾಚರಣೆ: 'ಶ್ರೀರಾಮ ಕಥಾ ಸತ್ಸಂಗ'
0
ಆಗಸ್ಟ್ 20, 2022
Tags





