ಕಾಸರಗೋಡು: ಮಲೆನಾಡು ಹೆದ್ದಾರಿ ರಾಷ್ಟ್ರದ ಕನಸಾಗಿದ್ದು, ಯೋಜನೆ ಕಾಮಗಾರಿಯನ್ನು ಅತಿಶೀಘ್ರ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ ಖಾತೆ ಸಚಿವ ಪಿ.ಎ ಮಹಮ್ಮದ್ ರಿಯಾಸ್ ತಿಳಿಸಿದ್ದಾರೆ.
ಅವರು ಎಡಪರಂಬ-ಚೇವಾರ್ ಮಲೆನಾಡು ಹೆದ್ದಾರಿ ಎರಡನೇ ಹಂತದ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
ರಸ್ತೆ ಸಾಕಾರಗೊಳ್ಳುವುದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಹಾದು ಹೋಗುವ ಮಲೆನಾಡು ಹೆದ್ದಾರಿ ಹೆಮ್ಮೆಯ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಮಂಜೇಶ್ವರಂ, ಕಾಸರಗೋಡು ಮತ್ತು ಉದುಮ ಕ್ಷೇತ್ರಗಳ ಮೂಲಕ ಹಾದುಹೋಗಲಿದೆ. ಜಿಲ್ಲೆಯ ಮಲೆನಾಡು ಹೆದ್ದಾರಿಯ ಎರಡನೇ ರೀಚ್ ಚೇವಾರು-ಎಡಪರಂಬ ರಸ್ತೆಗೆ 83.84 ಕೋಟಿ ರೂ.ಗೆ ಗುತ್ತಿಗೆ ನೀಡಲಾಗಿದೆ. ಜತೆಗೆ ಮಂಜೇಶ್ವರ, ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗುವ 28 ಕಿ.ಮೀ ರಸ್ತೆಯನ್ನು ಒಂಬತ್ತು ಮೀಟರ್ ಅಗಲದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಎಂದು ತಿಳಿಸಿದರು.
ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷ ತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ದೇಲಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಪಿ.ಉಷಾ, ಉಪಾಧ್ಯಕ್ಷ ಡಿ.ಎ.
ಅಬ್ದುಲ್ಲಕುಞÂ, ಗ್ರಾಪಂ ಸದಸ್ಯ ರಾಧಾಕೃಷ್ಣನ್, ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೆಆರ್‍ಎಫ್‍ಬಿ ಯೋಜನಾ ನಿರ್ದೇಶಕಿ ಡಾರ್ಲಿನ್ ಕಾರ್ಮೆಲಿಟಾ ಡಿಕ್ರೂಜ್ ಸ್ವಾಗತಿಸಿದರು. ಕಾರ್ಯನಿರ್ವಾಹಕ ಎಂಜಿನಿಯರ್ ಸೀನತ್ ಬೇಗಂ ವಂದಿಸಿದರು.





