ಕಾಸರಗೋಡು: ವಾರ್ತಾ ಮತ್ತು ಮಾಹಿತಿ ಇಲಾಖೆ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 75 ಅಲಂಕಾರಿಕ ಮತ್ತು ಔಷಧೀಯ ಸಸ್ಯಗಳನ್ನೊಳಗೊಂಡ 'ಆಜಾದಿ ಉದ್ಯಾನ'ವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕುಂಜಿಕಣ್ಣನ್ ನಂಬಿಯಾರ್ ಸಸಿಗಳನ್ನು ನೆಡುವ ಮೂಲಕ ಉದ್ಘಾಟಿಸಿದರು.
ಜಿಲ್ಲಾ ಮಾಹಿತಿ ಕಛೇರಿಯಿಂದ ಸಿದ್ದಪಡಿಸಿದ ಸ್ವಾತಂತ್ರ್ಯ ಸ್ಮೃತಿ ಸ್ಮರಣಾರ್ಥ ತಯಾರಿಸಿದ ಡಿಜಿಟಲ್ ರೂಪದ ಕೈಪಿಡಿಯನ್ನು ಪಿಆರ್ ಚೇಂಬರ್‍ನಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಬಿಡುಗಡೆಗೊಳಿಸಿದರು. ಡಿಜಿಟಲ್ ರೂಪದ ಕೈಪಿಡಿಯನ್ನು ಓದುಗರಿಗೆ ಆನ್‍ಲೈನ್‍ನಲ್ಲಿ ಲಭ್ಯವಾಗುವಂತೆ ಮಾಡುವುದು ಯೋಜನೆ ಉದ್ದೇಶವಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಕೊಡುಗೆ, ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸಂಪೂರ್ಣ ವಿವರ, ವಿವಿಧ ಹೋರಾಟಗಳು ಮತ್ತು ಘಟನೆಗಳನ್ನು ಡಿಜಿಟಲ್ ಕೈಪಿಡಿಯಲ್ಲಿ ಒಳಗೊಂಡಿದೆ.
ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಅಧ್ಯಕ್ಷತೆ ವಹಿಸಿದ್ದರು. ಜೇಸನ್ ಮ್ಯಾಥ್ಯೂ ಅವರು ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕುಞÂಕಣ್ಣನ್ ನಂಬಿಯಾರ್ ಅವರನ್ನು ಸನ್ಮಾನಿಸಿದರು. ಕ್ಯಾಪ್ಟನ್ ಕೆ.ಎಂ.ಕುಞÂಕಣ್ಣನ್ ನಂಬಿಯಾರ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಪರೀಕ್ಷಾ ನಿಯಂತ್ರಕ ಪೆÇ್ರ.ಕೆ.ಪಿ.ಜಯರಾಜನ್ ಮುಖ್ಯ ಭಾಷಣ ಮಾಡಿದರು. ಜಿಲ್ಲೆಕಾನೂನು ಅಧಿಕಾರಿ ಕೆ.ಮುಹಮ್ಮದ್‍ಕುಞÂ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ರಾಜ್ಯ ಪರಿಸರ ಪರಿಷತ್ ಸಲಹಾ ಸಮಿತಿ ಸದಸ್ಯ ಪೆÇ್ರ.ವಿ.ಗೋಪಿನಾಥನ್, ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್ ಉಪಸ್ಥಿತರಿದ್ದರು. ಸಹಾಯಕ ಮಾಹಿತಿ ಅಧಿಕಾರಿ ಎ.ಪಿ.ದಿಲ್ನಾ ಸ್ವಾಗತಿಸಿದರು. ಸಹಾಯಕ ಸಂಪಾದಕ ಜಿ.ಎನ್.ಪ್ರದೀಪ್ ವಂದಿಸಿದರು.
ಜಿಲ್ಲಾ ಮಾಹಿತಿ ಕಛೇರಿಯಲ್ಲಿ ಆಜಾದಿ ಉದ್ಯಾನವನ ಉದ್ಘಾಟನೆ
0
ಆಗಸ್ಟ್ 19, 2022
Tags





