ಕೊಚ್ಚಿ: ಮುಂದಿನ ಮಂಗಳವಾರದಿಂದ ರಾಜ್ಯ ಸರ್ಕಾರದ ಓಣಂ ಕಿಟ್ ವಿತರಿಸಲಾಗುವುದು. ಆಗಸ್ಟ್ 22 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಓಣಂಕಿಟ್ ವಿತರಣೆಯ ರಾಜ್ಯ ಮಟ್ಟದ ಉದ್ಘಾಟನೆ ನೆರವೇರಿಸಿದ ನಂತರ ವಿತರಣೆ ಆರಂಭವಾಗಲಿದೆ. 80 ಶೇ.ದÀಷ್ಟು ಕಿಟ್ ಪ್ಯಾಕ್ ಮಾಡಲಾಗಿದೆ ಎಂದು ಸಪ್ಲೈಕೋ ತಿಳಿಸಿದೆ.
ಬಟ್ಟೆ ಚೀಲ ಸೇರಿದಂತೆ 14 ವಸ್ತುಗಳು ಇರಲಿವೆ. ಈ ಬಾರಿ ಹಪ್ಪಳ, ಬೆಲ್ಲದ ಬದಲಿಗೆ ಮಿಲ್ಮಾ ತುಪ್ಪ, ಗೋಡಂಬಿ ನಿಗಮದ ಗೋಡಂಬಿಯನ್ನು ಕಿಟ್‍ನಲ್ಲಿ ಸೇರಿಸಲಾಗಿದೆ. 14 ಉತ್ಪನ್ನಗಳನ್ನು ಹೊಂದಿರುವ ಕಿಟ್‍ನ ಬೆಲೆ 434 ರೂ. ಸಕ್ಕರೆ, ಕಡಲೆ, ಬೇಳೆಕಾಳುಗಳು ಬೇರೆ ರಾಜ್ಯಗಳಿಂದ ಆಮದು ಮಾಡಲಾಗಿದೆ.
ಲೋಡಿಂಗ್ ಕ್ಯಾರೇಜ್ ದರ ಸೇರಿದಂತೆ 447 ರೂಪಾಯಿ ಮೌಲ್ಯದ ಕಿಟ್ ಎಲ್ಲ ಜಿಲ್ಲೆಗಳಲ್ಲಿ ಸಿದ್ಧವಾಗಿದೆ. ರಾಜ್ಯದಲ್ಲಿ ಪಡಿತರ ಚೀಟಿದಾರರಿಗೆ 90 ಲಕ್ಷ ಆಹಾರ ಕಿಟ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ. ಎಲ್ಲಾ ಪ್ಯಾಕ್ ಮಾಡಿದ ಉತ್ಪನ್ನಗಳು. ಸಪ್ಲೈಕೋ ಅಂಗಡಿಗಳ ಪಕ್ಕದಲ್ಲಿ ಹೆಚ್ಚಿನ ಜಾಗವನ್ನು ಗುತ್ತಿಗೆ ನೀಡುವ ಮೂಲಕ ಪ್ಯಾಕ್ ಮಾಡುವುದನ್ನು ಮುಂದುವರೆಸಿದೆ.
ಸೋಮವಾರ ಸಂಜೆ ತಿರುವನಂತಪುರದಲ್ಲಿ ಆಹಾರ ಕಿಟ್‍ಗಳ ವಿತರಣೆಯನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ನಂತರ ಮಂಗಳವಾರ ಬೆಳಗ್ಗೆಯಿಂದಲೇ ಅಂಗಡಿಗಳಲ್ಲಿ ಪಡಿತರ ದೊರೆಯಲಿದೆ. ಮೊದಲು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಕಿಟ್ ಅನ್ನು ವಿತರಿಸಲು ಮತ್ತು ಆದ್ಯತೆಯ ಆಧಾರದ ಮೇಲೆ ಓಣಂ ಮೊದಲು ವಿತರಣೆಯನ್ನು ಪೂರ್ಣಗೊಳಿಸುವುದು ಗುರಿಯಾಗಿದೆ.
ನಂತರ, ಕಿಟ್ ಅನ್ನು ಪಿ.ಎಚ್.ಎಚ್. ಕಾರ್ಡ್ ಹೊಂದಿರುವವರಿಗೆ ವಿತರಿಸಲಾಗುತ್ತದೆ ಮತ್ತು ನಂತರ ನೀಲಿ ಮತ್ತು ಬಿಳಿ ಕಾರ್ಡ್ ಹೊಂದಿರುವವರಿಗೆ ವಿತರಿಸಲಾಗುತ್ತದೆ. ಕಿಟ್ ನಲ್ಲಿ ತೆಂಗಿನ ಎಣ್ಣೆ ಇರುವುದಿಲ್ಲ. ಪಡಿತರ ಅಂಗಡಿಗಳ ಮೂಲಕ ಪ್ರತ್ಯೇಕವಾಗಿ ಕೊಬ್ಬರಿ ಎಣ್ಣೆ ವಿತರಿಸಲಾಗುವುದು. ಕವರ್ ಬಿರುಕು ಬಿಡುವ ಅಪಾಯದ ಕಾರಣ ತೆಂಗಿನ ಎಣ್ಣೆಯನ್ನು ಕಿಟ್‍ನಲ್ಲಿ ಸೇರಿಸಲಾಗಿಲ್ಲ.
ಹದಿನಾಲ್ಕು ಬಗೆಯ ಓಣಂಕಿಟ್‍ನಲ್ಲಿ ಗೋಡಂಬಿ 50 ಗ್ರಾಂ, ಮಿಲ್ಮಾ ತುಪ್ಪ 50 ಮಿಲಿ, ಶಬರಿ ಮೆಣಸಿನ ಪುಡಿ 100 ಗ್ರಾಂ, ಶಬರಿ ಅರಿಶಿನ ಪುಡಿ 100 ಗ್ರಾಂ, ಏಲಕ್ಕಿ 20 ಗ್ರಾಂ, ಶಬರಿ ತೆಂಗಿನೆಣ್ಣೆ 500 ಮಿಲಿ, ಶಬರಿ ಟೀ 100 ಗ್ರಾಂ, ಸಕ್ಕರೆ ಸಿಹಿ ಪದಾರ್ಥ(ಶರ್ಕರ)É 100 ಗ್ರಾಂ, ಬಿಳ್ತಿಗೆ ಅಕ್ಕಿ(ಗ್ರೇಡೆಡ್)ಅರ್ಧ ಕೆಜಿ, ಸಕ್ಕರೆ ಒದು ಕಿಲೋ ಗ್ರಾಂ, ಪಚ್ಚೆ ಹೆಸರು ಅರ್ಧ ಕಿಲೋ ಗ್ರಾಂ, ತೊಗರಿಬೇಳೆ 500 ಗ್ರಾಂ ಇರಲಿದೆ. ಕಳೆದ ವರ್ಷ 15 ವಸ್ತುಗಳನ್ನು ವಿತರಿಸಲಾಗಿತ್ತು.
ಒಂದಷ್ಟು ಬದಲಾವಣೆಗಳೊಂದಿಗೆ ಓಣಂಕಿಟ್ ಮಂಗಳವಾರದಿಂದ ವಿತರಣೆ ಆರಂಭ
0
ಆಗಸ್ಟ್ 19, 2022
Tags




.webp)
