ಕಾಸರಗೋಡು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ವತಿಯಿಮದ ನಗರಸಭಾ ಸ್ಟೇಡಿಯಂನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಬಂದರು ಮತ್ತು ಪುರಾತತ್ವ-ವಸ್ತುಸಂಗ್ರಹಾಲಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಹ್ಮದ್ ದೇವರಕೋವಿಲ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್, ಸಿ.ಎಚ್.ಕುಞಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪೆÇಲೀಸ್‍ಮುಖ್ಯಾಧಿಕಾರಿ ಡಾ. ವೈಭವ್ ಸಕ್ಸೇನಾ, ಅಪರ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಆರ್‍ಡಿಓ ಅತುಲ್ ಸ್ವಾಮಿನಾಥ್ ಮತ್ತಿತರರು ಭಾಗವಹಿಸುವರು. ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್, ಸ್ಥಳೀಯ ಪೆÇಲೀಸ್,ಮಹಿಳಾ ಪೆÇಲೀಸ್, ಅಬಕಾರಿ, ವಿದ್ಯಾರ್ಥಿ ಪೆÇಲೀಸ್ ಕೆಡೆಟ್‍ಗಳು, ಎನ್‍ಸಿಸಿ, ರೆಡ್‍ಕ್ರಾಸ್, ಸ್ಕೌಟ್ ಮತ್ತು ಗೈಡ್ಸ್ ಮತ್ತು ಬ್ಯಾಂಡ್ ಸೆಟ್ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ. ಪಥಸಂಚಲನದ ನಂತರ ಕಲರಿ ಪಯಟ್, ರಾಷ್ಟ್ರೀಯ ಏಕೀಕರಣ ಗೀತೆಗಳು, ರಾಷ್ಟ್ರೀಯ ಏಕೀಕರಣ ನೃತ್ಯಗಳು, ಯೋಗ ಪ್ರದರ್ಶನ, ಮೈಮ್ ಮುಂತಾದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೆರವಣಿಗೆ ವೀಕ್ಷಿಸಲು ಬರುವ ಸಾರ್ವಜನಿಕರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾರ್ವಜನಿಕರು ಸುರಕ್ಷಾ ಮಾಣದಂಡ ಪಾಲಿಸಿಕೊಂಡು ಬೆಳಗ್ಗೆ ಎಂಟರೊಳಗೆ ನಗರಸಭೆ ಕ್ರೀಡಾಂಗಣ ಪ್ರವೇಶಿಸುವಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮನವಿ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವ ಪಥಸಂಚಲನ: ಸಚಿವ ಅಹ್ಮದ್ ದೇವರ್‍ಕೋವಿಲ್ ಧ್ವಜಾರೋಹಣ
0
ಆಗಸ್ಟ್ 14, 2022




