ಕಾಸರಗೋಡು: ಬಿಎಂಎಸ್ ಕಾಸರಗೋಡು ಪ್ರಾದೇಶಿಕ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ತಿರಂಗ ಅಭಿಯಾನದ ಅಂಗವಾಗಿ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ರೀನಿವಾಸನ್ ಅವರು ವಲಯ ಕಾರ್ಯದರ್ಶಿ ರಿಜೇಶ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ರಾಘವನ್ ಮುಳ್ಳೇರಿಯ, ಜಿಲ್ಲಾ ಕೋಶಾಧಿಕಾರಿ ಅನಿಲ್ ಬಿ ನಾಯರ್, ದಿನೇಶನ್ ಉಪ್ಪೇಂದ್ರ ಕೊಟ್ಟಕನ್ನಿ ಸತ್ಯನಾಥ್ ಕಾಞಂಗಾಡ್, ಹರೀಶ್ ಕುದ್ರೆಪ್ಪಾಡಿ ಮೊದಲಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ತಾಳಿಪಡ್ಪು ಮೈದಾನದಿಂದ ಆರಂಭವಾಗಿ ನಗರದ ವಿವಿಧೆಡೆ ಸಂಚರಿಸಿದ ರ್ಯಾಲಿ ಬಿಎಂಎಸ್ ಕಚೇರಿ ಆವರಣದಲ್ಲಿ ಸಮಾರೋಪಗೊಂಡಿತು.
ತಿರಂಗ ಅಭಿಯಾನ: ಬಿಎಂಎಸ್‍ನಿಂದ ಬೈಕ್ ರ್ಯಾಲಿ
0
ಆಗಸ್ಟ್ 14, 2022





