ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿಯಲ್ಲಿ "ಒಂದು ವರ್ಷದ ಒಂದು ಲಕ್ಷ ಉದ್ಯಮಗಳು" ಯೋಜನೆಯ ಅಂಗವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಶ್ರಯದಲ್ಲಿ ಸಾಲ-ಪರವಾನಗಿ-ಸಬ್ಸಿಡಿ ಮೇಳವನ್ನು ಆಯೋಜಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಎಂ ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ರೈ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಜಯಕುಮಾರ್ ಕೆ, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಸುಜಾತಾ ಎಂ ರೈ, ಇತರ ವಾರ್ಡ್ ಸದಸ್ಯರು ಮತ್ತು ಸಿಡಿಎಸ್ ಅಧ್ಯಕ್ಷರು ಈ ಸಂದರ್ಭದಲ್ಲಿ ಶುಭಹಾರೈಸಿದರು.
ಬ್ಯಾಂಕ್‍ಗಳು ಕೆನರಾ ಬ್ಯಾಂಕ್, ಕೇರಳ ಬ್ಯಾಂಕ್, ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಮತ್ತು ಕೇರಳ ರಾಜ್ಯ ಹಿಂದುಳಿದ ವರ್ಗಗಳ ನಿಗಮದ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿ ವಿವಿಧ ಉದ್ಯೋಗ ಸಂಬಂಧಿ ಆರ್ಥಿಕ ನೆರವು, ಸಾಲ, ಅಗತ್ಯದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರಡ್ಕ ಬ್ಲಾಕ್ ಕೈಗಾರಿಕಾ ಅಭಿವೃದ್ಧಿ ಅಧಿಕಾರಿ ಉಮೇಶ್ ಸ್ವಾಗತಿಸಿ, ಬೆಳ್ಳೂರು ಪಂಚಾಯತಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಇಂಟರ್ನ್ ಅಂಜಲಿ ಎಂ.ಸಿ ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ಶ್ರೀ ಮುಚ್ಚಿಲೋಟ್ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಘಟಕದ ಕೆಸ್ವಿಪ್ಟ್ ಪ್ರಮಾಣಪತ್ರ ವಿತರಿಸಲಾಯಿತು.
ಬೆಳ್ಳೂರು ಗ್ರಾ.ಪಂ.ನಲ್ಲಿ ಲಕ್ಷ ಉದ್ಯಮ ಯೋಜನೆ ಮಾಹಿತಿ ಶಿಬಿರ
0
ಆಗಸ್ಟ್ 14, 2022




.jpg)
