ಮಂಜೇಶ್ವರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಮೀಯಪದವು ಶಾಲಾ ಮೈದಾನದಲ್ಲಿ ಆಜಾದಿಕ ಅಮೃತ್ ಟ್ರೋಫಿ ಪಂದ್ಯಾಟ ಆಯೋಜಿಸಲಾಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಾಕೃಷ್ಣ ಉದ್ಘಾಟಿಸಿದರು. ಟಿ.ಎಸ್.ಸಿ ಅಧ್ಯಕ್ಷ ಸದಾಶಿವ ಬಾಲಮಿತ್ರ ಅಧ್ಯಕ್ಷತೆ ವಹಿಸಿದ್ದರು. ಮೀಯಪದವು ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ , ಟಿ.ಎಸ್.ಸಿ ಗೌರಧ್ಯಕ್ಷ ಉದಯ ಶೆಟ್ಟಿ, ಪ್ರಶಾಂತ್ ರೈ ಉಪಸ್ಥಿತರಿದ್ದರು. ಟಿ.ಎಸ್ . ಸಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಟಿ.ಎಸ್.ಸಿ ಕೋಶಾಧಿಕಾರಿ ಪ್ರದೀಪ್ ಶೆಟ್ಟಿ ಬೇಳ ವಂದಿಸಿದರು. ಉಪಾಧ್ಯಕ್ಷ ರಘುವೀರ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಮೀಯಪದವಲ್ಲಿ ಅಮೃತ್ ಟ್ರೋಪಿ ಪಂದ್ಯಾಟ
0
ಆಗಸ್ಟ್ 14, 2022




.jpg)
