ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ರಕ್ಷಾ ಬಂಧನ, ಸಂಸ್ಕೃತ ದಿನಾಚರಣೆ ಹಾಗೂ ರಾಮಾಯಣ ಮಾಸಾಚರಣೆ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ರಾಮಾಯಣ ಮಾಸಾಚರಣೆಯ ಕುರಿತು ಮಾತನಾಡಿ, ಶ್ರೀರಾಮನ ಜೀವನದ ವಿವಿಧ ಹಂತಗಳ ವಿವರಣೆಯನ್ನು ನೀಡಿದರು. ಶ್ರೀರಾಮನ ಆದರ್ಶವನ್ನು ಪಾಲಿಸುವ ಮಕ್ಕಳು ಬೆಳೆದು ಬರಬೇಕೆಂದರು.
9ನೇ ತರಗತಿಯ ಶ್ರೀಷ ಹಾಗೂ 7ನೇ ತರಗತಿಯ ಶಾತೋದರಿ ಸಂಸ್ಕøತ ದಿನ ಹಾಗೂ ರಕ್ಷಾಬಂಧನದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಪರಸ್ಪ ರಕ್ಷಬಂಧನ ಮಾಡಿದರು. ಅಧ್ಯಾಪಿಕೆಯರಾದ ಸುಪ್ರಿತಾ ರೈ ಸ್ವಾಗತಿಸಿ, ಸುಪ್ರಿತಾ ದಂಬೆಮೂಲೆ ವಂದಿಸಿದರು. ರಾಮತಾರಕ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ರಕ್ಷಾಬಂಧನ
0
ಆಗಸ್ಟ್ 14, 2022




.jpg)
