ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗುರುವಾರ ರಕ್ಷಾಬಂಧನ ಮತ್ತು ಸಂಸ್ಕøತ ದಿನಾಚರಣೆ ನಡೆಯಿತು. ಅಂದು ಬೆಳಗ್ಗೆ ರಾಮಾಯಣ ಮಾಸಾಚರಣೆಯ ಪ್ರಯುಕ್ತ ರಾಮಾಯಣ ಕಥಾಭಾಗದ ದಶರಥನ ನಿರ್ಯಾಣ ಹಾಗೂ ರಾಮ ಲಕ್ಷ್ಮಣಾದಿಗಳ ವನವಾಸ, ಚಿತ್ರಕೂಟದ ವೃತ್ತಾಂತದ ಕಥಾಭಾಗವನ್ನು ಶಾಲಾ ಮುಖ್ಯೋಪಾಧ್ಯಾಯ ಶ್ಯಾಂಭಟ್ ದರ್ಭೆಮಾರ್ಗ ವಿವರಿಸಿದರು.
ಸಂಸ್ಕøತ ದಿನಾಚರಣೆ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್.ರಾವ್ ಮನ್ನಿಪ್ಪಾಡಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಮುಜುಂಗಾವು ಮಾತನಾಡಿದರು. ಶಾಲಾ ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ ಕುಂಬಳೆ ಮಾತನಾಡಿ, ಲೋಕದಲ್ಲಿ ಪಪ್ರಥಮವಾಗಿ ಮಹಾಭಾರತ ಕಥೆಯಲ್ಲಿ ದುರ್ಯೋಧನನ ಪತ್ನಿ ಭಾನುಮತಿ, ತನ್ನ ಪತಿ ದ್ರೌಪದಿಯನ್ನು ವರಿಸದಂತೆ ತಡೆಯುವುದಕ್ಕಾಗಿ ತಿಳಿಸಿ ಅವನು ಮರೆತುಹೋಗದಂತೆ ನೆನಪಿಸುವುದಕ್ಕಾಗಿ ಶ್ರೀ ಕೃಷ್ಣನಿಗೆ ರಾಖಿ ಕಟ್ಟಿದ ಕಥೆಯನ್ನು ವಿವರಿಸಿದರು. ಮುಖ್ಯೋಪಾಧ್ಯಾಯ ಶ್ಯಾಂಭಟ್ ದರ್ಭೆಮಾರ್ಗ, ಅಧ್ಯಾಪಿಕೆ ಚಿತ್ರಾಸರಸ್ವತಿ ಪೆರಡಾನ ಹಾಗೂ ಶಾಲಾ ಆಡಳಿತ ಸಮಿತಿ ಕೋಶಾಧಿಕಾರಿ ಚಂದ್ರಶೇಖರ ಭಟ್ ಎಯ್ಯೂರು, ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ರಕ್ಷಾಬಂಧನದ ಕುರಿತು ಮಾತನಾಡಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಸ್ಕೃತ ಸುಭಾಷಿತವನ್ನು ಹೇಳಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರಸ್ಪರ ರಾಖಿಕಟ್ಟಿ ಸಂಭ್ರಮಿಸಿದರು. ಅಧ್ಯಾಪಕ ಹರಿಪ್ರಸಾದ್ ನಿರೂಪಿಸಿದರು.
ಮುಜುಂಗಾವು ವಿದ್ಯಾಪೀಠದಲ್ಲಿ ರಕ್ಷಾಬಂಧನ, ಸಂಸ್ಕøತ ದಿನಾಚರಣೆ
0
ಆಗಸ್ಟ್ 14, 2022




.jpg)
