ಮಂಜೇಶ್ವರ: ಮೀಯಪವು ಶ್ರೀವಿದ್ಯಾವರ್ಧಕ ಪ್ರೌಢಶಾಲೆಯ ಸಾಹಿತ್ಯ ಕ್ಲಬ್ ವತಿಯಿಂದ ಗಮಕ ಶ್ರಾವಣ ವ್ಯಾಖ್ಯಾನ ಕಾರ್ಯಕ್ರಮವು ಜರಗಿತು. ಶ್ರೀವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪ್ರಬಂಧಕಿ ಪ್ರೇಮಾ ಕೆ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕಾಂತ್ ರಾವ್, ಗಮಕ ಕಲಾ ಪರಿಷತ್ತು ಪ್ರಧಾನ ಕಾರ್ಯದರ್ಶಿ ವಿ.ಬಿ ಕುಳವರ್ಮ, ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕರೆ ಶಂಕರನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯಶಿವಶಂಕರ ಭಟ್, ಶಾಲಾ ಸಂಚಾಲಕರಾದ ಡಾ. ಜಯಪ್ರಕಾಶ್ ನಾರಾಯಣ್ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕÀ ಶೇಖರ ಶೆಟ್ಟಿ ಬಾಯಾರು, ಶ್ರದ್ಧಾ ಭಟ್ ಗಮಕ ವಾಚನ ಮತ್ತು ವ್ಯಾಖ್ಯಾನ ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿನಿಯರಾದ ಲಿಖಿತ ಎಂ. ಎಸ್ ಕಾರ್ಯಕ್ರಮ ನಿರೂಪಿಸಿದಳು.ದಿಶಾಲಕ್ಷ್ಮೀ ಸ್ವಾಗತಿಸಿ, ದಿಶಾನ್ ವಂದಿಸಿದರು.




.jpg)
.jpg)
