ಬದಿಯಡ್ಕ: ಜಿಲ್ಲಾ ಮಾರ್ತಾ ಮತ್ತು ಮಾಹಿತಿ ಕಛೇರಿ ಹಾಗೂ ಕಾಸರಗೋಡು ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾದ ರಾಷ್ಟ್ರ್ರಗೀತೆ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಉದ್ಘಾಟಿಸಿದರು. ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆಗಳು ನಾಗರಿಕರಲ್ಲಿ ರಾಷ್ಟ್ರೀಯತೆ ಮತ್ತು ದೇಶ ಪ್ರೇಮವನ್ನು ಮೂಡಿಸಲು ಸಹಕಾರಿಯಾಗಲಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾಸರಗೋಡು ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಂ.ಕೆ.ರಾಧಾಕೃಷ್ಣನ್ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ರೋಟರಿ ಕಾರ್ಯದರ್ಶಿ ವಿಜಿಂತ್ ರಾಮಕೃಷ್ಣನ್ ಸ್ವಾಗತಿಸಿ, ಅಧ್ಯಕ್ಷ ಗೌತಮ್ ಭಕ್ತ ವಂದಿಸಿದರು.
ಸ್ಪರ್ಧೆಯಲ್ಲಿ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆ ಪ್ರಥಮ ಸ್ಥಾನ ಪಡೆಯಿತು. ಕೇಂದ್ರೀಯ ವಿದ್ಯಾಲಯ (ದ್ವಿ) ಮತ್ತು ಮಹಾಜನ ಸಂಸ್ಕøತ ಕಾಲೇಜು ಹೈಸ್ಕೂಲು ನೀರ್ಚಾಲು ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಕಾಸರಗೋಡು ರೋಟರಿ ಉಪಾಧ್ಯಕ್ಷ ಸಿ.ಎ.ವಿಶಾಲ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಂ.ಕೆ.ರಾಧಾಕೃಷ್ಣನ್, ಕಾಸರಗೋಡು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಗೋಕುಲ್ ಚಂದ್ರಬಾಬು ವಿಜೇತರಿಗೆ ಬಹುಮಾನ ವಿತರಿಸಿದರು. ಜಿಲ್ಲೆಯ 13 ಶಾಲಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.




.jpeg)
