ಕಾಸರಗೋಡು: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ದಿನದಂದು ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಚೇರಿ ನೇತೃತ್ವದಲ್ಲಿ 'ಆಜಾದಿ ಉದ್ಯಾನ' ನಿರ್ಮಿಸಲಾಗುವುದು. ಈ ಸಂದರ್ಭ ಮಾಹಿತಿ ಕಛೇರಿಯು ಸಿದ್ಧಪಡಿಸಿದ ಸ್ವಾತಂತ್ರ್ಯ ಸ್ಮರಣಿಕೆಯನ್ನು ಸಹ ಬಿಡುಗಡೆ ಮಾಡಲಾಗುವುದು. ಎಪ್ಪತ್ತೈದು ವರ್ಷಗಳ ನೆನಪಿಗಾಗಿ ಉದ್ಯಾನದಲ್ಲಿ ಎಪ್ಪತ್ತೈದು ಅಲಂಕಾರಿಕ ಮತ್ತು ಔಷಧೀಯ ಸಸ್ಯಗಳನ್ನು ನೆಡಲಾಗುವುದು. ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕುಞÂPಕಣ್ಣನ್ ನಂಬಿಯಾರ್ ಅವರು ಮಾಹಿತಿ ಕಚೇರಿಯ ಅಂಗಳದಲ್ಲಿ ಸಸಿ ನೆಡುವ ಮೂಲಕ ಆಜಾದಿ ಉದ್ಯಾನವನ್ನು ಉದ್ಘಾಟಿಸುವರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅವರು ಪಿಆರ್ ಚೇಂಬರ್‍ನಲ್ಲಿ ಸ್ವಾತಂತ್ರ್ಯ ಸ್ಮರಣಿಕೆ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಅಧ್ಯಕ್ಷತೆ ವಹಿಸುವರು. ಸ್ವಾತಂತ್ರ್ಯಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕುಞÂಕಣ್ಣನ್ ನಂಬಿಯಾರ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಲಿದ್ದಾರೆ. ಎಲ್‍ಎಸ್‍ಜಿಡಿ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವರು. ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಪರೀಕ್ಷಾ ನಿಯಂತ್ರಕ ಪೆÇ್ರ.ಕೆ.ಪಿ.ಜಯರಾಜನ್ ಮುಖ್ಯ ಭಾಷಣ ಮಾಡಲಿದ್ದಾರೆ. ಜಿಲ್ಲಾ ಕಾನೂನು ಅಧಿಕಾರಿ ಕೆ.ಮುಹಮ್ಮದ್ ಕುಞÂ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್,ಪೆÇ್ರ.ವಿ.ಗೋಪಿನಾಥನ್ ಪಾಲ್ಗೊಳ್ಳುವರು.
ಸ್ವಾತಂತ್ರ್ಯೋತ್ಸವ ವಾರ್ತಾ ಮತ್ತು ಮಾಹಿತಿ ಇಲಾಖೆಯಿಂದ ಆಜಾದಿ ಉದ್ಯಾನ್
0
ಆಗಸ್ಟ್ 14, 2022

