ಬದಿಯಡ್ಕ: ಎನ್ ಎಸ್ ಎಸ್ ರಾಷ್ಟ್ರೀಯ ಸೇವಾ ಯೋಜನೆ ನವ ಜೀವನ ಐಯರ್ ಸೆಕೆಂಡರಿ ಶಾಲೆಯ ಘಟಕದ ವತಿಯಿಂದ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತ ಬಿ ಉದ್ಘಾಟಿಸಿದರು, ವಾರ್ಡ್ ಸದಸ್ಯ ಶಾಮ್ ಪ್ರಸಾದ್ ಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದರು. ಸಂಘಟನಾ ಸಮಿತಿ ಉಪಾಧ್ಯಕ್ಷ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿಜಿ ಚಂದ್ರಹಾಸ ರೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಾತು ಕುಟ್ಟಿ ಮಾಸ್ಟರ್, ಹೈ ಸ್ಕೂಲ್ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷಅನ್ವರ್ ಓಜೋನ್, ಸ್ಟಾಫ್ ಕಾರ್ಯದರ್ಶಿ ಶ್ರೀಜಾ ಟೀಚರ್, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರೊ. ಎ. ್ರಶ್ರೀನಾಥ ಮಾಸ್ಟರ್ ಉಪಸ್ಥಿತರಿದ್ದರು, ಪ್ರಾಂಶುಪಾಲ ಮಾಧವನ್ ಭಟ್ಟತಿರಿ ಸ್ವಾಗತಿಸಿ, ಕಾರ್ಯಕ್ರಮ ಸಂಚಾಲಕ ರಾಜೀವನ್ ಮಾಸ್ಟರ್ ವಂದಿಸಿದರು.

