HEALTH TIPS

ಕೈಮಗ್ಗ ಸ್ಟಾರ್ಟಪ್ ಸವಾಲಿನಲ್ಲಿ ಭಾಗಿಯಾಗಲು ಯುವಕರಿಗೆ ಪ್ರಧಾನಿ ಕರೆ

 

                  ನವದೆಹಲಿ: ಕೈಮಗ್ಗ ಸ್ಟಾರ್ಟಪ್ ಮಹಾನ್‌ ಸವಾಲಿನಲ್ಲಿ ಭಾಗವಹಿಸುವಂತೆ ಯುವಜನತೆಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕಲ್ಪನೆ ಮತ್ತು ಆವಿಷ್ಕಾರ ವಿಚಾರದಲ್ಲಿ ನೇಕಾರರಿಗೆ ಲಭ್ಯವಾದ ಅತ್ಯುತ್ತಮ ಅವಕಾಶ ಇದು ಎಂದು ಹೇಳಿದ್ದಾರೆ.

               ರಾಷ್ಟ್ರೀಯ ಕೈಮಗ್ಗ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ನಮ್ಮ ಕಲಾತ್ಮಕ ಸಂಪ್ರದಾಯ ಆಚರಣೆಗೆ ಶ್ರಮಿಸುತ್ತಿರುವ ಎಲ್ಲರಿಗೂ ಗೌರವ ಸಲ್ಲಿಸುವುದರೊಂದಿಗೆ ಯುವಜನತೆಯನ್ನು ಕೈಮಗ್ಗ ಕ್ಷೇತ್ರದತ್ತ ಬರುವಂತೆ ಆಹ್ವಾನಿಸಿದರು.

                ಕೈಮಗ್ಗ ಸ್ಟಾರ್ಟಪ್ ಗ್ರ್ಯಾಂಡ್ ಚಾಲೆಂಜ್‌ನಲ್ಲಿ ಭಾಗವಹಿಸುವಂತೆ ಕರೆ ನೀಡಿ ಜವಳಿ ಖಾತೆ ಸಚಿವ ಪಿಯೂಷ್‌ ಗೋಯಲ್‌ ಅವರು ಟ್ವೀಟ್‌ ಮಾಡಿದ್ದರು. ಇದರಲ್ಲಿ ಪ್ರಧಾನಿ ಮೋದಿ ಅವರನ್ನು ಟ್ಯಾಗ್‌ ಮಾಡಿದ್ದರು. ಇದನ್ನು ಮರುಟ್ವೀಟ್‌ ಮಾಡಿದ ಪ್ರಧಾನಿ ಮೋದಿ ಕೈಮಗ್ಗ ಸ್ಟಾರ್ಟಪ್‌ ಚಾಲೆಂಜ್‌ನಲ್ಲಿ ಭಾಗವಹಿಸುವಂತೆ ಯುವಜನತೆಗೆ ಸಲಹೆ ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries