HEALTH TIPS

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿ ಮುಡಿಗೇರಿಸಿದ ಶುಭಾನಂದ ಶೆಟ್ಟಿ ಕುಳೂರು


               ಮಂಜೇಶ್ವರ: ಪ್ರಸ್ತುತ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಘೋಷಿತರಾದವರಲ್ಲಿ ಕಾಸರಗೋಡಿನ ಮೀಯಪದವು ಸಮೀಪದ ಕುಳೂರು ಶುಭಾನಂದ ಶೆಟ್ಟಿ ಅವರಿಗೆ ಯಕ್ಷಸಿರಿ ಪ್ರಶಸ್ತಿ ಒಲಿದುಬಂದಿದೆ.   
         ಯಕ್ಷಗಾನ ಭಾಗವತಿಕೆಯ ಮೂಲಕ ಭಾಗವತರಾಗಿ ಚಿರಪರಿಚಿತರಾದವರು ಕುಳೂರು ಶುಭಾನಂದ ಶೆಟ್ಟಿಯವರು. ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ ಕುಳೂರು ಕೊಣಿಮಾರು ದಿ. ತಿಮ್ಮಪ್ಪ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ದಂಪತಿಯ ಪುತ್ರರಾಗಿ 1960ರ ಫೆಬ್ರವರಿ 7ರಂದು ಜನಿಸಿದ ಇವರು ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾದರು. ಹಿರಿಯ ಯಕ್ಷಗಾನ ಭಾಗವತರಾದ ಬೆಳೆಂಜ ದಿ. ವೆಂಕಪ್ಪ ರೈಗಳು ಗುರುಗಳಾಗಿ ಇವರನ್ನು ಭಾಗವತರನ್ನಾಗಿ ಬೆಳೆಸಿದರು. ಎಮ್.ಎಸ್. ಡಬ್ಲ್ಯೂ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರೂ, ಯಕ್ಷಗಾನ ಕಲೆಗೆ ಮಾರು ಹೋಗಿ ಕಾಲೇಜು ದಿನಗಳಲ್ಲಿಯೇ ಹವ್ಯಾಸಿ ಸಂಘ ಸಂಸ್ಥೆಗಳ ಆಟಕೂಟಗಳಲ್ಲಿ ತನ್ನ ಸುಮಧುರ ಕಂಠಶ್ರೀಯಿಂದ ಸಮರ್ಥ ಭಾಗವತನಾಗಿ ಭಾಗವಹಿಸಿ ಪ್ರಸಿದ್ಧರಾದರು. ಆ ಬಳಿಕ ಅಂದು ತೆಂಕುತಿಟ್ಟು ಯಕ್ಷಗಾನದಲ್ಲಿ ವಿಜೃಂಭಿಸುತ್ತಿದ್ದ ಪ್ರಸಿದ್ಧ ಮೇಳಗಳಾದ ಕಣಿಮರ, ಮಲ್ಲ, ಬಪ್ಪನಾಡು, ಬೆಳ್ಮÀಣ್ಣು, ಉಪ್ಪಳ ಭಗವತೀ ಮೇಳ, ಇರುವೈಲು ಮತ್ತು ಕಟೀಲು ಮುಂತಾದ ಮೇಳಗಳಲ್ಲಿ ತಿರುಗಾಟವನ್ನು ಮಾಡಿದ ಅನುಭವ ಇವರದ್ದು. ಕೆಲವು ಮೇಳಗಳಲ್ಲಿ ರಾತ್ರಿಯಿಂದ ಬೆಳಗ್ಗಿನ ತನಕ ಒಬ್ಬರೇ ಭಾಗವತಿಕೆಯನ್ನು ಮಾಡಿ ಖ್ಯಾತಿಯನ್ನು ಪಡೆದ ಭಾಗವತರು ಮಾತ್ರವಲ್ಲದೆ ಜೋಡಾಟಗಳಲ್ಲಿ ಭಾಗವಹಿಸಿ ಪ್ರಸಿದ್ಧರಾದವರು. ಯಕ್ಷಗಾನದ ದಿಗ್ಗಜ ಅರ್ಥಧಾರಿಗಳಾದ ದಿ. ರಾಮದಾಸ ಸಾಮಗರಿಂದ ಹಿಡಿದು ಈಗಿನ ತಲೆಮಾರಿನ ಪ್ರಸಿದ್ಧ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಗೆ ಪದ್ಯ ಹೇಳಿದ ಗರಿಮೆ ಶುಭಾನಂದ ಶೆಟ್ಟರದು. ಕಳೆದ 40 ವರ್ಷಗಳಿಂದಲೂ ಕಲಾಸೇವೆಯನ್ನು ಮಾಡುತ್ತಿದ್ದಾರೆ.
           ಯಕ್ಷಗಾನ ಕಲಾವಿದನಾಗಿ ಭಾಗವತಿಕೆಯ ಕಂಪನ್ನು ಪಸರಿಸಿದ ಶೆಟ್ಟರ ಕಲಾ ಸಂಪನ್ನತೆಯನ್ನು ಗೌರವಿಸಿ ಕರಾವಳಿ ಸಾಂಸ್ಕøತಿಕ ಪ್ರತಿμÁ್ಠನ (ರಿ) ಕಾಸರಗೋಡು, ಆಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ – 2009 ಕಾಸರಗೋಡು, ಬಂಟರ ಯಕ್ಷಗಾನ ಕಲೋತ್ಸವ 2002 ಮಂಗಳೂರು, ಆμÁಢ ಮಾಸ ಯಕ್ಷಗಾನ ಕೂಟ ಸಮಿತಿ ಹೊಸಂಗಡಿ ಮಂಜೇಶ್ವರ, ಶ್ರೀ ಕಾವಿ ಯಕ್ಷ ಬಳಗ ವರ್ಕಾಡಿ ಎಂಬ ಸಂಘ ಸಂಸ್ಥೆಗಳು ಪ್ರಸಸ್ತಿಗಳನ್ನು ನೀಡಿ ಗೌರವಿಸಿವೆ.
          ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಧಾರ್ಮಿಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು "ಯುವಭಾರತಿ" ಸೇವಾ ಸಂಘ(ರಿ) ಕುಳೂರು ಇದರ ಸ್ಥಾಪಕ ಅಧ್ಯಕ್ಷರಾಗಿ, ಯಕ್ಷರಂಗ (ರಿ) ಉಪ್ಪ¼: ಇದರ ಗೌರವಾಧ್ಯಕ್ಷರಾಗಿ, ಕುಳೂರು ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಯಕ್ಷ ಬಳಗ ಹೊಸಂಗಡಿ ಇದರ ಪ್ರಧಾನ ಭಾಗವತರಾಗಿ, ಊರಿನ ಅನೇಕ ಧಾರ್ಮಿಕ ಕ್ಷೇತ್ರ ಸಮಿತಿಗಳಲ್ಲಿ ಪದಾಧಿಕಾರಿಗಳಾಗಿ, ಕಬಡ್ಡಿ ಆಟಗಾರರಾಗಿ ಜನಮನ್ನಣೆ ಗಳಿಸಿದವರು,
         ಪ್ರಕೃತ ಹವ್ಯಾಸಿ ಭಾಗವತನಾಗಿ ಮತ್ತು ಕೃಷಿಕನಾಗಿ, ಪತ್ನಿ ವಿನಯ ಶೆಟ್ಟಿ, ಪುತ್ರ್ರಿಯರಾದ ಪುನೀತ ಶೆಟ್ಟಿ, ಮತ್ತು ವಂಶಿ ಶೆಟ್ಟಿಯರೊಂದಿಗೆ ಜೀವನ ನಡೆಸುತ್ತಿದ್ದಾರೆ, ಹಿರಿಯ ಮತ್ರಿ ಪುನೀತ ಶೆಟ್ಟಿ ಎಮ್.ಬಿ.ಬಿ.ಎಸ್, ಡಿಗ್ರಿ ಮುಗಿಸಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಇಂಟನ್ರ್ಶಿಪ್ ಮಾಡುತ್ತಿದ್ದಾರೆ.
        ಇವರ ಯಕ್ಷಗಾನ ಕಲಾ ಸೇವೆಯನ್ನು ಗುರುತಿಸಿ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ, 'ಯಕ್ಷ ಸಿರಿ-2022 ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಒಲಿದುಬಂದಿರುವುದು ಅವರ ಕಲಾಸಂಪನ್ನತೆಯ ಹಿರಿಮೆಗೆ ಗರಿಮೆ ತಂದಿತ್ತಿದೆ.



                        ಅಭಿಮತ

                 ಅಕಾಡೆಮಿಯ ಪ್ರಶಸ್ತಿಬಂದಿರುವುದು ಸಂತಸನೀಡಿದೆ. ಕಲಾಸೇವೆಗೆ ಇನ್ನಷ್ಟು ಜವಾಬ್ದಾರಿ ಮತ್ತು ಬೆಂಬಲ ನೀಡಬೇಕಾದ ತುರ್ತನ್ನು ನಾನು ಗ್ರಹಿಸಿದ್ದೇನೆ. ಪ್ರಶಸ್ತಿಯು ಸಮಗ್ರ ಕಾಸರಗೋಡಿನ ಯಕ್ಷಗಾನ ಕಲಾವಿದರು, ಕಲಾಪ್ರೇಮಿಗಳು, ಕಲಾಪೋಷಕರಿಗೆ ಅರ್ಪಣೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries