ಕಾಸರಗೋಡು: ಸಿಂಹ ಮಾಸದ ಒಂದನೇ ದಿನವನ್ನು (ಆ. 17)ಕೃಷಿಕರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಒಂದು ಲಕ್ಷ ಜಮೀನಿನಲ್ಲಿ ವಿವಿಧ ಕೃಷಿ ಚಟುವಟಿಕೆ ಆರಂಭಿಸಲಾಗುವುದು ಎಂದು ಕೃಷಿ ಸಚಿವ ಪಿ. ಪ್ರಸಾದ್ ತಿಳಿಸಿದ್ದಾರೆ.
ಇದರ ಅಂಗವಾಗಿ ಒಂದು ಲಕ್ಷ ಕೇಂದ್ರಗಳಲ್ಲಿ ಕೃಷಿಚಟುವಟಿಕೆಯ ಸ್ಥಳೀಯ ಮಟ್ಟದ ಉದ್ಘಾಟನೆಯೂ ನಡೆಯಲಿದೆ. ಆಯಾ ಪ್ರದೇಶದ ಹವಾಮಾನ ಮತ್ತು ಸಾಮಥ್ರ್ಯವನ್ನು ಅವಲಂಬಿಸಿ ಸ್ಥಳೀಯ ಕೃಷಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಕೃಷಿಕರ ದಿನಾಚರಣೆಯನ್ನು ಅತ್ಯುತ್ತಮವಾಗಿ ಆಚರಿಸಲು ಬ್ಲಾಕ್ ಮಟ್ಟದಲ್ಲಿ ಕೃಷಿ ಭವನಗಳನ್ನು ಆಯ್ಕೆ ಮಾಡುವಂತೆಯೂ ಉನ್ನತ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
'ನಾವೂ ಕೃಷಿಯತ್ತ' ಯೋಜನೆಯ ಅಂಗವಾಗಿ ಈಗಾಗಲೇ ಪಂಚಾಯಿತಿಗಳನ್ನು ಕೇಂದ್ರೀಕರಿಸಿ ಕೃಷಿ ಗುಂಪುಗಳನ್ನು ರಚಿಸಲಾಗಿದೆ. ಈ ರೈತ ಗುಂಪುಗಳು ಮತ್ತು ಇತರ ರೈತರ ನೇತೃತ್ವದಲ್ಲಿ ಹೊಸ ಬೆಳೆಗಳನ್ನು ನಡೆಸಲಾಗುವುದು. ಆಗಸ್ಟ್ 17 ರಂದು ತಿರುವನಂತಪುರದ ನಿಶಾಗಂಧಿ ಸಭಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮಾರಂಭದಲ್ಲಿ ಮುಖ್ಯಮಂತ್ರಿ, ರಾಜ್ಯ ಕೃಷಿಕರ ದಿನಾಚರಣೆ ಮತ್ತು ರೈತ ಪ್ರಶಸ್ತಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ಬ್ಲಾಕ್ ಮಟ್ಟದಲ್ಲಿ ಕೃಷಿ ಸಚಿವರು ನೂತನವಾಗಿ ಆರಂಭಿಸಿರುವ ರೈತ ಸಂಪರ್ಕ ಕಾರ್ಯಕ್ರಮವಾದ 'ಕೃಷಿದರ್ಶನ'ದ ಉದ್ಘಾಟನೆಯೂ ನಡೆಯಲಿದೆ.
ಕೃಷಿಕರ ದಿನಾಚರಣೆ ಲಕ್ಷ ಜಮೀನಿನಲ್ಲಿ ವಿವಿಧ ಕೃಷಿ ಚಟುವಟಿಕೆ
0
ಆಗಸ್ಟ್ 06, 2022
Tags




