ಕಾಸರಗೋಡು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾಸರಗೋಡು ಸಹಕಾರದೊಂದಿಗೆ ಸ್ನೇಹಜ್ಯೋತಿ ಜ್ಞಾನ ವಿಕಾಸ ಕೇಂದ್ರ ಮತ್ತು ಶ್ರೀ ಮಂಜುನಾಥ ನವಜೀವನ ಸಮಿತಿ ಪಾವಳ ಒಕ್ಕೂಟ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಆ. 7ರಂದು ಬೆಳಗ್ಗೆ 10ಕ್ಕೆ ವರ್ಕಾಡಿ ಸುಂಕದಕಟ್ಟೆ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ.
ಜನಜಾಗೃತಿ ವೇದಿಕೆ ಕಾಸರಗೋಡು ವಲಯ ಮಾಜಿ ಅಧ್ಯಕ್ಷ, ಉದ್ಯಮಿ ಅರಿಬೈಲು ಗೋಪಾಲ ಶೆಟ್ಟಿ ಸಮಾರಂಭ ಉದ್ಘಾಟಿಸುವರು. ಕಳಿಯೂರು ಇಗರ್ಜಿ ಧರ್ಮಗುರು ವಂದನೀಯ ಪಾವ್ಲ್ ಸಿಕ್ವೇರಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪಾವಳ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಕಿಶೋರ್ ಕುಮಾರ್ ಪಾವಳ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ ಆಶಾದಿಲೀಪ್ ಸುಳ್ಯಮೆ ಆಟಿ ವಿಷಯದ ಬಗ್ಗೆ ಮಾತನಾಡುವರು. ಈ ಸಂದರ್ಭ ರಂಗ ಕಲಾವಿದೆ, ಚಿತ್ರನಟಿ ರೂಪಶ್ರೀ ವರ್ಕಾಡಿ ಅವರನ್ನು ಸನ್ಮಾನಿಸಲಾಗುವುದು. ಆಟಿ ಕಲಂಜ, ಆಟಿ ತಿನಿಸುಗಳ ಪ್ರದರ್ಶನ, ಆಟಿ ತಿನಿಸು ಒಳಗೊಂಡ ಭೋಜನ, ಕಾರ್ಯಕ್ರಮ ವೈವಿಧ್ಯ ನಡೆಯಲಿರುವುದು.
ವರ್ಕಾಡಿ ಸುಂಕದಕಟ್ಟೆಯಲ್ಲಿ ನಾಳೆ "ಆಟಿಡೊಂಜಿ ದಿನ'
0
ಆಗಸ್ಟ್ 06, 2022
Tags




