HEALTH TIPS

ತರಗತಿಯಲ್ಲಿ ಗಂಡು ಮತ್ತು ಹೆಣ್ಣು ಜೊತೆಗೇ ಕುಳಿತು ಕಲಿಯುವುದು ಮುಕ್ತ ಲೈಂಗಿಕತೆಗೆ ಕಾರಣವಾಗುತ್ತದೆ; ಪಿಎಂಎ ಸಲಾಂ


           ಕೊಚ್ಚಿ: ತರಗತಿಯಲ್ಲಿ ಹುಡುಗ-ಹುಡುಗಿಯರು ಒಟ್ಟಿಗೆ ಕುಳಿತು ಕಲಿಯುವುದರಿಂದ ಮುಕ್ತ ಸಂಪರ್ಕಕ-ಮಾತುಕತೆಗೆ ದಾರಿಮಾಡಿಕೊಟ್ಟಂತಾಗುತ್ತದೆ ಎಂದು ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ ಸಲಾಂ ಹೇಳಿದರು.
          ಮಕ್ಕಳ ಗಮನವು ಅಧ್ಯಯನದಿಂದ ಬೇರೆಡೆಗೆ ಹೋಗಲಿದೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ಜೊತೆಗೆ ಕುಳಿತು ಕಲಿಕೆಗೆ ಒಪ್ಪಿಕೊಳ್ಳುವುದಿಲ್ಲ ಎಂದೂ ಪಿಎಂಎ ಸಲಾಂ ಹೇಳಿದ್ದಾರೆ.
            "ಎಲ್ಲ ಧರ್ಮೀಯರು ಇದಕ್ಕೆ ವಿರುದ್ಧವಾಗಿದ್ದಾರೆ. ದೇಶಕ್ಕೆ ನೈತಿಕ ಮೌಲ್ಯಗಳನ್ನು ನಂಬುವ ಪೀಳಿಗೆಯ ಅಗತ್ಯವಿದೆ. ನಾವು ಉದಾರವಾದಿಗಳು ಮತ್ತು ಫ್ರೀಸೆಕ್ಸ್‍ನೊಂದಿಗೆ ನಾವು ಹೀಗೆಯೇ ಮುಂದುವರಿದರೆ, ದೇಶದಲ್ಲಿ ಅವ್ಯವಸ್ಥೆ ಉಂಟಾಗುತ್ತದೆ." ಸಲಾಂ ಹೇಳಿದರು.
         ಎರಡು ಲಿಂಗಗಳ ವಿದ್ಯಾರ್ಥಿಗಳನ್ನು ಒಂದೇ ಬೆಂಚ್‍ನಲ್ಲಿ ಕೂರಿಸಿದರೆ, ಅದು ಮಕ್ಕಳಲ್ಲಿ ಕೆಟ್ಟ ಸ್ವಭಾವವನ್ನು ಉಂಟುಮಾಡುತ್ತದೆ ಎಂದು ಮುಸ್ಲಿಂ ಲೀಗ್ ತನ್ನ ಮೌಲ್ಯಮಾಪನದಲ್ಲಿ ದೃಢಪಡಿಸಿದೆ.  ಉದಾರವಾದ ವಿಫಲವಾದ ಉದಾಹರಣೆ ಜಪಾನ್ ನಮ್ಮ ಮುಂದಿದೆ. ಉದಾರವಾದದ ಆಗಮನದಿಂದ ಜನಸಂಖ್ಯೆ ಕಡಿಮೆಯಾಗಿದೆ ಎಂದು ಪಿಎಂಎ ಸಲಾಂ ಹೇಳಿದರು.
          ಗುರುವಾರ ನಡೆದ ಮುಸ್ಲಿಂ ಲೀಗ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಲು ಮಾಧ್ಯಮದವರನ್ನು ಭೇಟಿಯಾದಾಗ ಪಿಎಂಎ ಸಲಾಂ ಅವರು ಈ ಹೇಳಿಕೆ ನೀಡಿದ್ದಾರೆ. ಮುಖಂಡರ  ಸಭೆಯಲ್ಲಿ ಲಿಂಗ ತಟಸ್ಥತೆ ವಿಷಯ ಚರ್ಚಿಸಲಾಯಿತು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂಎ ಸಲಾಂ ಈ ಮಾಹಿತಿಗಳನ್ನು ಹಂಚಿಕೊಂಡರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries