HEALTH TIPS

ಗೃಹಿಣಿಯನ್ನು ಕೊಲೆಗೈದು ಬಾವಿಗೆ ತಳ್ಳಿದ ಹೊರರಾಜ್ಯ ಕಾರ್ಮಿಕರು




      
              ತಿರುವನಂತಪುರ:  ಕೇರಳದಲ್ಲಿ ಹೊರ ರಾಜ್ಯ ಕಾರ್ಮಿಕರ ಅಪರಾಧಿ ಕೃತ್ಯ ದಿನಕಳೆದಂತೆ ಹೆಚ್ಚುತ್ತಿದ್ದು, ತಿರುವನಂತಪುರದಲ್ಲಿ ಭಾನುವಾರ ಗೃಹಿಣಿಯನ್ನು ಕೊಲೆಗೈದು ಬಾವಿಗೆ ತಳ್ಳಲಾಗಿದೆ.
          ತಿರುವನಂತಪುರದ ಕೇಶವದಾಸಪುರ ನಿವಾಸಿ ದೀನರಾಜ್ ಎಂಬವರ ಪತ್ನಿ ಮನೋರಮಾ ಕೊಲೆಯಾದ ಮಹಿಳೆ. ಪ.ಬಂಗಾಳ ನಿವಾಸಿಗಳ ತಂಡವೊಂದು ಕೊಲೆಗೈದಿರುವುದಾಗಿ ಶಂಕಿಸಲಾಗಿದೆ. ದೀನರಾಜ್ ಕುಟುಂಬ ವಾಸಿಸುವ ಮನೆಯ ಸನಿಹದ ನಿವಾಸಿ ಆದಂ ಆಲಿ ಎಂಬಾತ ತಲೆಮರೆಸಿಕೊಂಡಿದ್ದು, ಈತನ ಸಹಚರರಾದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದಂಆಲಿ ಭಾನುವಾರ ಮಧ್ಯಾಹ್ನ ದೀನ್‍ರಾಜ್ ಮನೆ ವಠಾರದಲ್ಲಿ ಕಂಡುಬಂದಿದ್ದನೆಂದು ಮಾಹಿತಿಯಿದೆ. ಮನೆ ಹಿಂಬಾಗಿಲ ಮೂಲಕ ಪ್ರವೇಶಿಸಿರುವ ಆರೋಪಿ, ಮಹಿಳೆಯನ್ನು ಕೊಲೆಯೈದು ಸನಿಹದ ಬಾವಿಗೆ ಎಸೆದಿದ್ದನು. ಕಳೆದ ಕೆಲವು ವರ್ಷಗಳಿಂದ ಹೊರ ರಾಜ್ಯ ಕಾರ್ಮಿಕರು ಅಪರಾಧ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ನಂತರ ತಲೆಮರೆಸಿಕೊಳ್ಳುತ್ತಿದ್ದಾರೆ.
              ಹೊರ ರಾಜ್ಯ ಕಾರ್ಮಿಕರನ್ನು ಅತಿಥಿ ಕಾರ್ಮಿಕರೆಂದು ಸಂಬೋಧಿಸುವಂತೆ ರಾಜ್ಯ ಸರ್ಕಾರ ಫರ್ಮಾನು ಹೊರಡಿಸಿದ್ದು, ಇವರ ಅಪರಾಧಿ ಕೃತ್ಯಗಳ ಬಗ್ಗೆ ಮೌನ ವಹಿಸುತ್ತಿರುವುದಾಗಿಯು ಆರೋಪ ವ್ಯಾಪಕಗೊಂಡಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries