ಮಂಜೇಶ್ವರ: ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಕೃμÁ್ಣಷ್ಠಮಿ ಮತ್ತು ಬಾಲ ಗೋಕುಲ ವಾರ್ಷಿಕೋತ್ಸವದ ಆಚರಣೆಯು ಇತ್ತೀಚೆಗೆ ಜರಗಿತು.
ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಂತೂರಿನ ಮೊಕ್ತೇಸರ ದೇವಿಪ್ರಸಾದ್ ಪೆÇಯ್ಯತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಾಪಕ ಸತೀಶ್ ಸುವರ್ಣ ದೈಗೋಳಿ ಅಧ್ಯಕ್ಷತೆ ವಹಿಸಿದ್ದರು. ವೀರಪ್ಪ ಅಂಬಾರ್ ಧಾರ್ಮಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಭವಾನಿ ಶಂಕರ್ ರೈ ತಾಮಳಚ್ಚಿಲ್, ಶಿಕ್ಷಕ ಭಾಸ್ಕರ ಕುಂಟಪದವು, ಗ್ರಾ.ಪಂ.ಸದಸ್ಯೆ ಆಶಾಲತಾ ಭಾಗವಹಿಸಿದ್ದರು. ಭಜನಾ ಮಂದಿರದ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ಮಂದಿರದ ಗೌರಾವಾಧ್ಯಕ್ಷ ಗೋಪಾಲಕೃಷ್ಣ ಭಟ್, ಶ್ರೀಕೃμÁ್ಣಷ್ಠಮಿ ಸಮಿತಿ ಅಧ್ಯಕ್ಷ ಚರಣ್ ರಾಜ್ ದೈಗೋಳಿ ಉಪಸ್ಥಿತರಿದ್ದರು.
ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳು ಜರಗಿದವು. ಗೋಪಾಲ ಕೃಷ್ಣ ಭಟ್ ಸ್ವಾಗತಿಸಿ, ಪ್ರಕ್ಷಿತ್ ದೈಗೋಳಿ ವಂದಿಸಿದರು.
ದೈಗೋಳಿಯಲ್ಲಿ ಬಾಲ ಗೋಕುಲ ವಾರ್ಷಿಕೋತ್ಸವ
0
ಆಗಸ್ಟ್ 29, 2022
Tags




.jpg)
