ಪೆರ್ಲ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 51ನೇ ವರ್ಷದ ಗಣೇಶೋತ್ಸವ ಸಮಾರಂಭ ಆ. 31ಹಾಗೂ ಸೆ. 1ರಂದು ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಜರುಗಲಿದೆ.
ಆ. 31ರಂದು ಬೆಳಗ್ಗೆ 7.30ಕ್ಕೆ ಗಣಪತಿ ಹವನ, ವೇದಘೋಷದೊಂದಿಗೆ ಶ್ರೀಗಣಪತಿ ಪ್ರತಿಷ್ಠೆ ನಡೆಯುವುದು. ನಂತರ ಧ್ವಜಾರೋಹಣ, ಭಜನೆ, ಮಕ್ಕಳು, ಮಹಿಳೆಯರು, ಸರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳು ನಡೆಯುವುದು. ಸಂಜೆ 5ಕ್ಕೆ ನಿವೃತ್ತ ಶಿಕ್ಷಕ ಪರಮೇಶ್ವರ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಆರೆಸ್ಸೆಸ್ ಮಂಗಳೂರು ವಿಭಾಗ ಸಂಯೋಜಕ್, ಕುಟುಂಬ ಪ್ರಬೋಧನ್ ಗಜಾನನ ಪೈ ಧಾರ್ಮಿಕ ಭಾಷಣ ನಡೆಸುವರು. ಈ ಸಂದರ್ಭ ಜಲಶೋಧಕ, ಸುರಂಗ ನಿರ್ಮಾಣ ತಜ್ಞ ರಾಮ ನಾಯ್ಕ ಖಂಡಿಗೆ ಅವರಿಗೆ ಸನ್ಮಾನ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ರಾತ್ರಿ 8ರಿಂದ 'ಗದಾಯುದ್ಧ ರಕ್ತರಾತ್ರಿ'ಯಕ್ಷಗಾನ ಬಯಲಾಟ ಜರುಗಲಿರುವುದು.
ಸೆ. 1ರಂದು ವಿವಿಧ ಸ್ಪರ್ಧೆಗಳು, ಮಧ್ಯಾಹ್ನ 3ಕ್ಕೆ ಆಕರ್ಷಕ ಸುಡುಮದ್ದು ಪ್ರದರ್ಶನ, ಕುಣಿತ ಭಜನೆಯೊಂದಿಗೆ ಸಂಭ್ರಮದ ಘೋಷಯಾತ್ರೆ ನಡೆಯುವುದು. ಪೇಟೆಯ ವಿವಿಧೆಡೆ ಸಂಚರಿಸಿ ಅಡ್ಕಸ್ಥಳ ಹೊಳೆಯಲ್ಲಿ ಗಣಪತಿ ವಿಸರ್ಜನೆ ನಡೆಯುವುದು.
ಪೆರ್ಲದಲ್ಲಿ 51ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ
0
ಆಗಸ್ಟ್ 28, 2022
Tags




