ಕಾಸರಗೋಡು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೆ.16ರಿಂದ 23ರ ವರೆಗೆ ನಡೆಯಲಿರುವ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರುಗಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾಪರಿಷತ್ ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ ಸಮರಂಭ ಉದ್ಘಾಟಿಸಿದರು. ಈ ಸಂದರ್ಭ ಶ್ರೀಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ಸಮಗ್ರ ಮಾಃಇತಿ ನೀಡಿದರು. ಕಾಸರಗೋಡು ಜಿಲ್ಲಾ ಭಜನಾ ಪರಿಷತ್ ಅಧ್ಯಕ್ಚ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ಭಜನಾ ಪರಿಷತ್ ಅಧ್ಯಕ್ಷ ದಿನೇಶ್ ಚೆರುಗೋಳಿ, ಎರಡೂ ತಾಲೂಕುಗಳ ಭಜನಾ ಪರಿಷತ್ ಕಾರ್ಯದರ್ಶೀಗಳಾದ ರಾಮಕೃಷ್ಣ ಸಂತಡ್ಕ, ಪದ್ಮನಾಭ ಆಚಾರ್ಯ, ಕೇಂದ್ರ ಕಚೇರಿ ಯೋಜನಾಧಿಕಾರಿ ದೀನ್‍ರಾಜ್, ಅವಳಿ ತಾಲೂಕಿಕ 15ಕ್ಕೂ ಹೆಚ್ಚು ಭಜನಾಮಂದಳಿಗಳ ವಿವಿಧ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾಸರಗೋಡಿನಲ್ಲಿ ಭಜನಾ ಕಮ್ಮಟದ ಪೂರ್ವಭಾವಿ ಸಭೆ
0
ಆಗಸ್ಟ್ 28, 2022
Tags





