ಕಾಸರಗೋಡು: ಓಣಂ ಹಬ್ಬವನ್ನು ಸಮೃದ್ಧಗೊಳಿಸಲು ಕುಟುಂಬಶ್ರೀ ವತಿಯಿಂದ ಓಣಂ ಮಾರುಕಟ್ಟೆಯನ್ನು ಆರಂಭಿಸಲಾಗಿದ್ದು, ಇದರ ಪ್ರಯೋಜನವನ್ನು ಪಡೆಯಲು ಕುಟುಂಬಶ್ರೀ ಕಾರ್ಯಕತೆ9ಯರು ತಮ್ಮ ಮಳಿಗೆಗಳೊಂದಿಗೆ ಸಿದ್ಧರಾಗಿದ್ದಾರೆ.
ಓಣಂ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮಾರುಕಟ್ಟೆಗೆ ಬೇಕಾದ ವಸ್ತುಗಳನ್ನು ಸಿದ್ದ ಪಡಿಸುವುದರಲ್ಲಿ ಕುಟುಂಬಶ್ರೀ ಘಟಕಗಳು ಕಾರ್ಯನಿರತವಾಗಿವೆ. ಸೆಪ್ಟೆಂಬರ್ 4 ರಿಂದ 7 ರ ವರೆಗೆ ಕುಟುಂಬಶ್ರೀಯ ಓಣಂ ಸಂತೆಗಳು ತೆರೆದು ಕಾರ್ಯಾಚರಿಸಲಿದೆ.
ಸಿ ಡಿ ಎಸ್ ಗಳನ್ನು ಕೇಂದ್ರೀಕರಿಸಿ 42 ಓಣಂ ಸಂತೆಗಳು ಕಾರ್ಯ ನಿರ್ವಹಿಸಲಿವೆ. ಇದಲ್ಲದೆ ಕಾಞಂಗಾಡು, ಮುಳ್ಳೇರಿಯ, ಚೆರುವತ್ತೂರು ಮತ್ತು ಪರಪ್ಪ ಎಂಬೀ ಸ್ಥಳಗಳಲ್ಲಿ ಕುಟುಂಬ ಶ್ರೀಯ ಜಿಲ್ಲಾ ಮಟ್ಟದ ನಾಲ್ಕು ಸಂತೆಗಳು ಕಾರ್ಯಚರಿಸಲಿದೆ. ನೆರೆಕರೆ ಕೂಟಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಪ್ರತಿಯೊಂದು ನೆರೆಕರೆ ಕೂಟದಿಂದ ಒಂದು ಉತ್ಪನ್ನವನ್ನು ಈ ಮೂಲಕ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ.
ಓಣಂ ಹಬ್ಬ: ಕುಟುಂಬಶ್ರೀಯ 46 ಓಣಂ ಸಂತೆಗಳ ಕಾರ್ಯಾರಂಭ
0
ಆಗಸ್ಟ್ 28, 2022
Tags





