ತಿರುವನಂತಪುರ: ಕೇರಳದಲ್ಲಿ ಮಹಿಳೆಯರ ಜೀವಿತಾವಧಿ ಹೆಚ್ಚಲು ಕುಟುಂಬ ಯೋಜನೆಯೇ ಕಾರಣ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಹೇಳಿದ್ದಾರೆ.
ಹಿಂದೆ ಮಹಿಳೆಯರು 10 ರಿಂದ 15 ಮಕ್ಕಳಿಗೆ ಜನ್ಮ ನೀಡುತ್ತಿದ್ದ ಕಾರಣ ಅವರ ಜೀವಿತಾವಧಿ ಕಡಿಮೆ ಎಂದು ಗೋವಿಂದನ್ ತಿಳಿಸಿರುವರು. ಎಂ.ವಿ.ಗೋವಿಂದನ್ ಮಾತನಾಡಿ, ಕುಟುಂಬ ಯೋಜನೆ ಪರಿಣಾಮಕಾರಿ ಅನುμÁ್ಠನದಿಂದ ಪರಿಸ್ಥಿತಿ ಬದಲಾಗಿದ್ದು, ಮಹಿಳೆಯರ ಜೀವಿತಾವಧಿ ಹೆಚ್ಚಿದೆ. ಡಾ. ಎ.ಕೆ.ಅಬ್ದುಲ್ ಹಕೀಂ ಅವರು ಬರೆದ ‘ಕಲ್ಚರಲ್ ಡಿಸ್ಟೆನ್ಸ್ ಆಫ್ ಆಫ್ರಿಕನ್ ಟ್ರಾವೆಲ್ಸ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೆ, ಮಹಿಳೆಯರು ಮದುವೆಯಾಗುವಾಗ ಪುರುಷರಿಗಿಂತ ಕನಿಷ್ಠ ಹತ್ತು ವರ್ಷ ಚಿಕ್ಕವರಾಗಿರಬೇಕು ಎಂಬ ಪರಿಪಾಠವಿತ್ತು. ಹತ್ತರಿಂದ ಹದಿನೈದು ಮಕ್ಕಳಿಗೆ ಜನ್ಮ ನೀಡುತ್ತಿದ್ದ ಮಹಿಳೆಯರು ಕಡಿಮೆ ಜೀವನ ನಡೆಸುತ್ತಿರುವ ಕಾರಣ ಮದುವೆಗೆ ವಯಸ್ಸಿನ ವ್ಯತ್ಯಾಸ ಕಡ್ಡಾಯವಾಗಿದೆ.
ಪ್ರಾಚೀನ ಕಾಲದಲ್ಲಿ, ವಿವಾಹ ವಿಧಿಯ ಲಕ್ಷ್ಯ ಕೇವಲ ಸಂತಾನಪಡೆಯುವುದು ಮಾತ್ರವಾಗಿತ್ತು. ಇದರಿಂದ ಸರಣಿಯಂತೆ ಮಕ್ಕಳನ್ನು ಹೆತ್ತು ಪರಿಪೋಷಕ ಆಹಾರಗಳಿಲ್ಲದೆ ಜೀವಹಾನಿಗಳು ಸಂಭವಿಸುತ್ತಿತ್ತು. ಕುಟುಂಬ ಯೋಜನೆಯ ಪರಿಣಾಮಕಾರಿ ಅನುμÁ್ಠನದಿಂದ ಆ ಪರಿಸ್ಥಿತಿ ಬದಲಾಯಿತು. ಇದರೊಂದಿಗೆ ಮಹಿಳೆಯರ ಜೀವಿತಾವಧಿಯೂ ಹೆಚ್ಚಾಯಿತು ಎಂದು ಎಂ.ವಿ.ಗೋವಿಂದನ್ ಪ್ರತಿಕ್ರಿಯಿಸಿದರು. ವಿವಾಹ ಐದಾರು ವರ್ಷ ಹೆಚ್ಚಿದ್ದರೂ, ಕಡಿಮೆಯಾದರೂ ಸಮಸ್ಯೆ ಇಲ್ಲ ಎಂದವರು ತಿಳಿಸಿದರು.
ಕುಟುಂಬ ಯೋಜನೆ ಮಹಿಳೆಯರ ಜೀವನವನ್ನು ವಿಸ್ತರಿಸಿದೆ: 10 ಮತ್ತು 15 ಮಕ್ಕಳಿಗೆ ಜನ್ಮ ನೀಡಿದವರ ಜೀವಿತಾವಧಿ ಕಡಿಮೆ: ಎಂ.ವಿ.ಗೋವಿಂದನ್
0
ಸೆಪ್ಟೆಂಬರ್ 25, 2022
Tags





